ಗೋಣಿಕೊಪ್ಪಲು, ಜ. ೨೭: ಕಾಲೇಜು ವಿದ್ಯಾರ್ಥಿಯೋರ್ವಳು ಗೋಣಿಕೊಪ್ಪಲು, ಜ. ೨೭: ಕಾಲೇಜು ವಿದ್ಯಾರ್ಥಿಯೋರ್ವಳು ಗೋಣಿಕೊಪ್ಪಲು, ಜ. ೨೭: ಕಾಲೇಜು ವಿದ್ಯಾರ್ಥಿಯೋರ್ವಳು ಬಿದ್ದಿರುವುದನ್ನು ಕಂಡು ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ವಕೀಲ ಎಂ.ಟಿ. ಕಾರ್ಯಪ್ಪ ವಿದ್ಯಾರ್ಥಿನಿಯ ಪೋಷಕರಾದ ಬೊಟ್ಟಂಗಡ ಮುತ್ತಪ್ಪ ಹಾಗೂ ಭಾರತಿ ಅವರಿಗೆ ಸುದ್ದಿ ತಿಳಿಸಿ ಆಕೆಯನ್ನು ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ವಿದ್ಯಾರ್ಥಿನಿ ಎಚ್ಚರಗೊಂಡ ಬಳಿಕ ‘ಹುಲಿ ಹುಲಿ’ ಎಂದು ಭಯದಿಂದ ಹೇಳುತ್ತಿದ್ದು, ವೈದ್ಯರಿಗೆ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಇದೀಗ ಚೇತರಿಕೆಗೊಳ್ಳುತ್ತಿರುವುದಾಗಿ ತಿಳಿದು ಬಂದಿದೆ.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ ಹಾಗೂ ಪದಾಧಿಕಾರಿಗಳು ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿಯ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ್ದಾರೆ. ಚಿಕಿತ್ಸಾ ವೆಚ್ಚ ಭರಿಸುವಂತೆ (ಮೊದಲ ಪುಟದಿಂದ) ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.ಕಳೆದ ಎರಡು ದಿನಗಳ ಹಿಂದೆ ಸಮೀಪದ ವೆಸ್ಟ್ನೆಮ್ಮಲೆಯಲ್ಲಿ ರೈತರೋರ್ವರ ಹಸುವನ್ನು ಇದೇ ಹುಲಿಯು ತಿಂದು ಹಾಕಿದ್ದಾಗಿ ಈ ಭಾಗದ ರೈತರು ತಿಳಿಸಿದ್ದಾರೆ. ಇದೇ ಹುಲಿಯು ಜನವಸತಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿದ್ದು ಕಾಫಿ ಕುಯ್ಲಿನ ಸಮಯದಲ್ಲಿ ತೋಟದಲ್ಲಿ ಅಡಗಿಕೊಂಡಿರುವಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದ ಶ್ರೀಮಂಗಲ ಆರ್‌ಎಫ್‌ಒ ವೀರೇಂದ್ರ ಮರಿ ಬಸವಣ್ಣನವರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯ ಯೋಗಕ್ಷೇವi ವಿಚಾರಿಸಿ ಧೈರ್ಯ ತುಂಬಿದ್ದಾರೆ. ಅಲ್ಲದೆ ಸಿಬ್ಬಂದಿಗಳಿAದ ಈ ಭಾಗದಲ್ಲಿ ಹುಲಿಯ ಸಂಚಾರದ ಬಗ್ಗೆ ಕೂಂಬಿAಗ್ ಕಾರ್ಯ ನಡೆಸುತ್ತಿದ್ದಾರೆ.
ದಕ್ಷಿಣ ಕೊಡಗಿನ ವಿವಿಧ ಭಾಗದಲ್ಲಿ ಹುಲಿಯ ಸಂಚಾರ ಹೆಚ್ಚಾಗಿರುವುದರಿಂದ ಈ ಭಾಗದ ರೈತರ ಜಾನುವಾರುಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಜಾನುವಾರುಗಳನ್ನು ಕೊಂದು ಹಾಕುವ ಸಂದರ್ಭ ಇಲಾಖೆಯು ನೀಡುತ್ತಿರುವ ಪರಿಹಾರವು ಏನೇನೂ ಸಾಲದಾಗಿದೆ ಎಂದು ರೈತರು ಇಲಾಖೆಯ ಮೇಲೆ ಭಾಗದಲ್ಲಿ ಹುಲಿಯ ಸಂಚಾರ ಹೆಚ್ಚಾಗಿರುವುದರಿಂದ ಈ ಭಾಗದ ರೈತರ ಜಾನುವಾರುಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಜಾನುವಾರುಗಳನ್ನು ಕೊಂದು ಹಾಕುವ ಸಂದರ್ಭ ಇಲಾಖೆಯು ನೀಡುತ್ತಿರುವ ಪರಿಹಾರವು ಏನೇನೂ ಸಾಲದಾಗಿದೆ ಎಂದು ರೈತರು ಇಲಾಖೆಯ ಮೇಲೆ ಒತ್ತಡ ತರುತ್ತಿರುವುದು ಮಾಮೂಲಿ ಯಾಗಿದೆ. ಸಾರ್ವಜನಿಕರಿಗೆ ಗಾಬರಿ ಹುಟ್ಟಿಸಿರುವ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ವಕೀಲ ಎಂ.ಟಿ. ಕಾರ್ಯಪ್ಪ ಸಾರ್ವಜನಿಕರ ಪರವಾಗಿ ಒತ್ತಾಯಿಸಿದ್ದಾರೆ.-ಹೆಚ್.ಕೆ. ಜಗದೀಶ್