ಮಡಿಕೇರಿ, ಜ. ೨೮: ದೇಶಪ್ರೇಮವನ್ನು ಮೈಗೂಡಿಸಿಕೊಂಡಿದ್ದ ಫೀ.ಮಾ. ಕಾರ್ಯಪ್ಪ ಅವರು ಭಾರತದ ಗಡಿ ಉಳಿಯಲು ಪ್ರಮುಖ ಕಾರಣರಾಗಿದ್ದಾರೆ ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಹೇಳಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ೧೨೨ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ಸೇನೆಯಲ್ಲಿ ಅಪ್ರತಿಮ ಸಾಧನೆ ಮಾಡಿದ ಕಾರ್ಯಪ್ಪ ಅವರ ಬದುಕು ಎಲ್ಲರಿಗೆ ಮಾದರಿಯಾಗಿದೆ. ಸೈನ್ಯದಲ್ಲಿ ಅಹಿಂಸೆ ಇರಬಾರದು ಎಂಬ ಗಾಂಧೀಜಿ ಹೇಳಿಕೆಯನ್ನು ಬಹಿರಂಗವಾಗಿ ಕಾರ್ಯಪ್ಪ ಅವರು ಪ್ರಶ್ನಿಸಿ ಉತ್ತರ ಬಯಸಿದ್ದರು. ಆದರೆ, ಗಾಂಧೀಜಿ ಅವರು ಮೌನವೃತವಿದ್ದ ಹಿನ್ನೆಲೆ ಮುಂದಿನ ದಿನದಲ್ಲಿ ಉತ್ತರ ನೀಡುತ್ತೇನೆ ಎಂದು ದಿನಾಂಕ ತಿಳಿಸಿದ್ದರು. ಆ ಹೊತ್ತಿಗೆ ಗಾಂಧೀಜಿ ಗುಂಡೇಟಿಗೆ ಬಲಿಯಾದರು ಎಂದರು ಅವರು ಸ್ಮರಿಸಿದರು.

ಸ್ವಾತಂತ್ರö್ಯದ ಬಳಿಕ ಪಾಕಿಸ್ತಾನ ಹಾಗೂ ಭಾರತ ಇಬ್ಭಾಗವಾಗುವಾಗ ಕಾರ್ಯಪ್ಪ ಅವರು ಕಣ್ಣೀರು ಹಾಕಿದ್ದರು. ನನ್ನ ಜೊತೆಗಿದ್ದ ಸೇನಾನಿಗಳು ಬೇರೆ-ಬೇರೆ ಆಗುತ್ತಿರುವುದರ ಬಗ್ಗೆ ನೊಂದುಕೊAಡರು. ಇದರ ನಡುವೆಯೇ ಸೈನ್ಯ ಹಂಚುವಿಕೆ ಜವಾಬ್ದಾರಿಯನ್ನು ಸಮರ್ಥವಾಗಿ ನಿಬಾಯಿಸಿದಲ್ಲದೆ, ಗಡಿ ಗುರುತು ಮಾಡುವಾಗ ಭಾರತಕ್ಕೆ ಸೇರಿದ ಒಂದಿAಚು ಜಾಗವನ್ನು ಪಾಕ್‌ಗೆ ನೀಡುವುದಿಲ್ಲ ಎಂದು ಎದುರಾಳಿ ಸೇನೆಗೆ ಎಚ್ಚರಿಸಿದ್ದರು. ಇದು ಅವರ ಗಟ್ಟಿತನಕ್ಕೆ ಸಾಕ್ಷಿ. ದೇಶದಲ್ಲಿ ಎನ್‌ಸಿಸಿ ಹಾಗೂ ಗಾರ್ಡ್ಸ್ ಬ್ರಿಗೇಡ್ ಸ್ಥಾಪನೆ ಮಾಡಿದ ಹೆಗ್ಗಳಿಕೆ ಕಾರ್ಯಪ್ಪ ಅವರಿಗೆ ಸಲ್ಲುತ್ತದೆ ಎಂದರು.