ಸೋಮವಾರಪೇಟೆ, ಜ. ೨೮: ಸಮೀಪದ ಕಿರಗಂದೂರು-ತಾಕೇರಿಯ ಪಿಚ್ ಸ್ಮಾö್ಯರ‍್ಸ್ ತಂಡದ ವತಿಯಿಂದ ಕಿರಗಂದೂರು ಶಾಲಾ ಮೈದಾನದಲ್ಲಿ ನಡೆದ ಮುಕ್ತ ಸೂಪರ್ ೯ ಕ್ರಿಕೆಟ್ ಪಂದ್ಯಾವಳಿಯ ಪ್ರಥಮ ಸ್ಥಾನದ ಪ್ರಶಸ್ತಿಯನ್ನು ಮೈಸೂರು ಜಿಲ್ಲೆಯ ಬೆನಗಲ್ ಹಾಗೂ ದ್ವಿತೀಯ ಸ್ಥಾನದ ಸೋಮವಾರಪೇಟೆ, ಜ. ೨೮: ಸಮೀಪದ ಕಿರಗಂದೂರು-ತಾಕೇರಿಯ ಪಿಚ್ ಸ್ಮಾö್ಯರ‍್ಸ್ ತಂಡದ ವತಿಯಿಂದ ಕಿರಗಂದೂರು ಶಾಲಾ ಮೈದಾನದಲ್ಲಿ ನಡೆದ ಮುಕ್ತ ಸೂಪರ್ ೯ ಕ್ರಿಕೆಟ್ ಪಂದ್ಯಾವಳಿಯ ಪ್ರಥಮ ಸ್ಥಾನದ ಪ್ರಶಸ್ತಿಯನ್ನು ಮೈಸೂರು ಜಿಲ್ಲೆಯ ಬೆನಗಲ್ ಹಾಗೂ ದ್ವಿತೀಯ ಸ್ಥಾನದ ಬೆನಗಲ್ ತಂಡದ ಅಶೋಕ್ ಪಡೆದರು. ಆಲ್‌ರೌಂಡರ್ ಪ್ರಶಸ್ತಿಯನ್ನು ಹಟ್ಟಿಹೊಳೆ ತಂಡದ ಜೀವನ್ ಹಾಗೂ ಬೆಸ್ಟ್ ಕೀಪರ್ ಪ್ರಶಸ್ತಿಯನ್ನು ಬೆನಗಲ್ ತಂಡದ ಪ್ರಮೋದ್ ಪಡೆದರು.
ಥ್ರೋ ಬಾಲ್ ಪಂದ್ಯದಲ್ಲಿ ತಾಕೇರಿ ಮಹಿಳಾ ಬಿ ತಂಡ ಪ್ರಥಮ ಮತ್ತು ತಾಕೇರಿ ಎ ತಂಡ ದ್ವಿತೀಯ ಸ್ಥಾನ ಪಡೆದವು. ಭಾರದ ಗುಂಡು ಎಸೆತದಲ್ಲಿ ತಾಕೇರಿಯ ಕೀರ್ತಿ ಪೊನ್ನಪ್ಪ ಪ್ರಥಮ, ಹಟ್ಟಿಹೊಳೆಯ ಕುಟ್ಟಪ್ಪ ದ್ವಿತೀಯ ಸ್ಥಾನ ಪಡೆದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಧರ್ಮಪ್ಪ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಮಂಜುನಾಥ್, ದಾನಿಗಳಾದ ಕೀರ್ತಿ ಪೊನ್ನಪ್ಪ, ಪದ್ಮನಾಭ ಅವರುಗಳು ಉಪಸ್ಥಿತರಿದ್ದು ಬಹುಮಾನ ವಿತರಿಸಿದರು. ಈ ಸಂದರ್ಭ ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪ್ರಸನ್ನ, ಪ್ರಾಥಮಿಕ ಎಸ್‌ಡಿಎಂಸಿ ಅಧ್ಯಕ್ಷೆ ಶೈಲಾ ಪ್ರವೀಣ್ ಇದ್ದರು. ನಂತರ ಆರೋಗ್ಯ ಭೂಮಿ ಪ್ರತಿಷ್ಠಾನದ ಸಂಸ್ಥಾಪಕರಾದ ಗೌತಮ್ ಮತ್ತು ಸುಮನಾ ಗೌತಮ್ ಕ್ರೀಡಾಪಟುಗಳಿಗೆ ಸಸಿಗಳನ್ನು ವಿತರಿಸಿದರು.