ಪೊನ್ನಂಪೇಟೆ, ಜ.೨೭: ಸರಕಾರಿ ದಾಖಲೆಗಳಿಗಾಗಿ ಸಾರ್ವಜನಿಕರು ಹೆಚ್ಚು ಅವಲಂಬಿಸಿರುವ ಕಂದಾಯ ಇಲಾಖೆಯಲ್ಲಿ ಜನರ ಬೇಡಿಕೆ ಸರಿಯಾಗಿ ಈಡೇರುತ್ತಿಲ್ಲ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಪಂಚಾಯಿತಿ ಹಿರಿಯ ಸದಸ್ಯ ಮೂಕೊಂಡ ಕೆ. ವಿಜು ಸುಬ್ರಮಣಿ ಅವರು, ಅಗತ್ಯ ಕಡತಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಳೆದ ೧ ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಬಹಳಷ್ಟು ಕಡತಗಳು ಇತ್ಯರ್ಥವಾಗದೆ ಉಳಿದಿದೆ. ಇದೀಗ ಕಂದಾಯ ಇಲಾಖೆ, ಕೊಡಗಿನಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಮತ್ತು ಕೋವಿಡ್-೧೯ ರ ಕಾರಣಗಳನ್ನು ಜನರಿಗೆ ಹೇಳುತ್ತಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣಾ ಪ್ರಕ್ರಿಯೆಗಳಿಂದ ಸ್ಥಗಿತಗೊಂಡಿದ್ದ ಕೊಡಗಿನ ಸಾಕಷ್ಟು ಕಡತಗಳ ವಿಲೇವಾರಿ ಆಗದಿರುವುದರಿಂದ ರೈತರು ಸಾಕಷ್ಟು ಪೊನ್ನಂಪೇಟೆ, ಜ.೨೭: ಸರಕಾರಿ ದಾಖಲೆಗಳಿಗಾಗಿ ಸಾರ್ವಜನಿಕರು ಹೆಚ್ಚು ಅವಲಂಬಿಸಿರುವ ಕಂದಾಯ ಇಲಾಖೆಯಲ್ಲಿ ಜನರ ಬೇಡಿಕೆ ಸರಿಯಾಗಿ ಈಡೇರುತ್ತಿಲ್ಲ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಪಂಚಾಯಿತಿ ಹಿರಿಯ ಸದಸ್ಯ ಮೂಕೊಂಡ ಕೆ. ವಿಜು ಸುಬ್ರಮಣಿ ಅವರು, ಅಗತ್ಯ ಕಡತಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಳೆದ ೧ ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಬಹಳಷ್ಟು ಕಡತಗಳು ಇತ್ಯರ್ಥವಾಗದೆ ಉಳಿದಿದೆ. ಇದೀಗ ಕಂದಾಯ ಇಲಾಖೆ, ಕೊಡಗಿನಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಮತ್ತು ಕೋವಿಡ್-೧೯ ರ ಕಾರಣಗಳನ್ನು ಜನರಿಗೆ ಹೇಳುತ್ತಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣಾ ಪ್ರಕ್ರಿಯೆಗಳಿಂದ ಸ್ಥಗಿತಗೊಂಡಿದ್ದ ಕೊಡಗಿನ ಸಾಕಷ್ಟು ಕಡತಗಳ ವಿಲೇವಾರಿ ಆಗದಿರುವುದರಿಂದ ರೈತರು ಸಾಕಷ್ಟು