ಮಡಿಕೇರಿ, ಜ. ೨೮: ಪೊಲೀಸ್ ಇಲಾಖೆಯಲ್ಲಿನ ಸಾಧನೆಗೆ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ಮಡಿಕೇರಿ ವೃತ್ತ ನಿರೀಕ್ಷಕ ಪೆಮ್ಮಚಂಡ ಅನೂಪ್ ಮಾದಪ್ಪ ಅವರನ್ನು ಕೊಡವ ಸಮಾಜ ಮಡಿಕೇರಿ ಇದರ ಆಡಳಿತ ಮಂಡಳಿ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅನೂಪ್ ಮಾದಪ್ಪ ಅವರು ತನ್ನ ಸೇವಾವಧಿಯಲ್ಲಿ ಕೊಡಗಿನ ಜನತೆ ತುಂಬಾ ಸಹಕಾರ ನೀಡಿದ್ದಾರೆ. ಕೊಡಗಿನ ಜನತೆ ಪ್ರಜ್ಞಾವಂತರಾಗಿ ರುವುದರಿಂದ ಇಲ್ಲಿಯ ಪರಿಸ್ಥಿತಿ ಬೇರೆ ಜಿಲ್ಲೆಗೆ ಹೋಲಿಸಿದಲ್ಲಿ ತೀರಾ ಭಿನ್ನವಾಗಿದೆ. ಪೊಲೀಸ್ ಇಲಾಖೆಯ ಹಿರಿಯ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಘನತೆಯನ್ನು ನಮ್ಮ ಯುವ ಜನತೆ ತಿಳಿದುಕೊಂಡಿಲ್ಲ. ಹಾಗಾಗಿ ಯುವಜನತೆಗೆ ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸ್ಥಳೀಯವಾಗಿ ಲಭಿಸುವಂತಹ ವ್ಯವಸ್ಥೆಯನ್ನು ಕೊಡವ ಸಮಾಜದ ಮೂಲಕ ಮಾಡುವಂತಾಗ ಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಡವ ಸಮಾಜದ ಅಧ್ಯಕ್ಷರಾದ ಕೊಂಗಾAಡ ಎಸ್. ದೇವಯ್ಯ, ಉಪಾಧ್ಯಕ್ಷ ಚೋವಂಡ ಎಸ್. ಕಾಳಪ್ಪ, ಗೌರವ ಕಾರ್ಯದರ್ಶಿ ಅರೆಯಡ ಪಿ. ರಮೇಶ್, ಜಂಟಿ ಕಾರ್ಯದರ್ಶಿ ಮಾದೇಟಿರ ಪಿ. ಬೆಳ್ಯಪ್ಪ, ನಿರ್ದೇಶಕರುಗಳಾದ ಬೊಟ್ಟೋಂಳಡ ಕಾಶಿ ಅಚ್ಚಯ್ಯ, ಕಾಳೇಂಗಡ ಮುತ್ತಪ್ಪ, ಮುಂಡುವAಡ ಮುತ್ತಪ್ಪ, ಪೊನ್ನಚೆಟ್ಟಿರ ಸುರೇಶ್ ಸುಬ್ಬಯ್ಯ, ಕೇಕಡ ದೇವಯ್ಯ, ನಂದೇಟಿರ ಮಾದಪ್ಪ, ಪುಟ್ಟಿಚಂಡ ದೇವಯ್ಯ, ಚೊಟ್ಟೆಯಂಡ ಅಪ್ಪಾಜಿ, ಐಮುಡಿಯಂಡ ರಾಣಿ ಮಾಚಯ್ಯ, ತಾಪಂಡ ಸರೋಜ ತಮ್ಮಯ್ಯ, ಉಳ್ಳಿಯಡ ಗಂಗಮ್ಮ ಇವರುಗಳು ಹಾಗೂ ಕೊಡವ ಸಮಾಜದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.