ಸಿದ್ದಾಪುರ, ಜ. ೨೬: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ವುಶು ಕ್ರೀಡೆಯಲ್ಲಿ ಸಹೋದರರಿಬ್ಬರು ಭಾಗವಹಿಸಿ ಪ್ರಥಮ ಸ್ಥಾನಗಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಗುರು ವೈದ್ಯನಾಥ ಸಭಾಭವನ ಕಾವೂರಿನಲ್ಲಿ ನಡೆದ ರಾಜ್ಯಮಟ್ಟದ ವುಶು ಕ್ರೀಡೆಯಲ್ಲಿ ಭಾಗವಹಿಸಿದ್ದ ನೆಲ್ಲಿಹುದಿಕೇರಿಯ ಎ.ಪಿ.ಜೆ ಬಡಾವಣೆಯ ನಿವಾಸಿಗಳಾದ ಕುಮಾರ್ ಹಾಗೂ ಚರಣ್ ಪ್ರಥಮ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ನೆಲ್ಲಿಹುದಿಕೇರಿ ಗ್ರಾಮದ ಶಶಿ ಮತ್ತು ರೀನಾ ದಂಪತಿಯ ಪುತ್ರರಾಗಿದ್ದಾರೆ.