ಕಣಿವೆ, ಜ. ೨೬: ಅತಿ ಆಸೆ - ಗತಿ ಕೇಡು ಎಂಬ ಗಾಧೆ ಈ ಬಾರಿ ಬಹಳಷ್ಟು ಮಂದಿ ಶುಂಠಿ ಕೃಷಿಕರಿಗೆ ಅನ್ವಯವಾಗಿದೆ. ಕಳೆದೆರಡು ವರ್ಷಗಳಲ್ಲಿ ಶುಂಠಿ ಫಸಲಿಗೆ ಉತ್ತಮ ಅಲ್ಲ ಅತ್ಯುತ್ತಮ ವಾದ ದರವಿದ್ದ ಕಾರಣ ಈ ಬಾರಿ ಬಹಳಷ್ಟು ಮಂದಿ ಶುಂಠಿ ಬೆಳೆಯ ದುರಾಸೆಗೆ ಒಳಗಾಗಿ ಬಾರೀ ಲಾಭ ಗಳಿಕೆಯ ಲೆಕ್ಕಾಚಾರದೊಂದಿಗೆ ಬೆಳೆಯಲು ಹೋಗಿ ದಿಕ್ಕುತೋಚದಾಗಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಗಗನಕ್ಕೆ ಏರಿದ್ದ ಶುಂಠಿಯ ಬೆಲೆಯಿಂದ ರೈತರ ಮೈ ಹಾಗೂ ಮನಸ್ಸು ತೇಲಾಡಿ ಓಲಾಡಿದ ದಿನಗಳು ಕಣ್ಣ ಮುಂದೆ ಇವೆ. ಕಳೆದ ಕೆಲವು ವರ್ಷಗಳ ಈಚೆಗೆ ಹಳ್ಳಿಗಳ ವಾತಾವರಣವೇ ಬದಲಾಗಿ ಹೋಗಿತ್ತು. ಅಂದರೆ ಶುಂಠಿಯ ಉತ್ತಮವಾದ ಬೆಳೆ ಹಾಗೂ ಏರಿಕೆ ಕಂಡಿದ್ದ ಬೆಲೆಯಿಂದಾಗಿ ಆಕಾಶದಲ್ಲಿ ತೇಲುತ್ತಿದ್ದವರು ಇನ್ನೂ ಎತ್ತರಕ್ಕೆ ಏರಲು ಹೋಗಿ ಈ ಬಾರಿ ವಿಪರೀತವಾದ ಶುಂಠಿ ಬೆಳೆದಿದ್ದರು. ಆದರೆ ಈ ವ್ಯಾಮೋಹ ವಿಪರೀತಕ್ಕೆ ಹೋಗಿದ್ದೇ ಅಪಾಯಕ್ಕೆ ತಳ್ಳಿತು. ಈ ಬಾರಿ ಜೂನ್ ನಿಂದ ಕಣಿವೆ, ಜ. ೨೬: ಅತಿ ಆಸೆ - ಗತಿ ಕೇಡು ಎಂಬ ಗಾಧೆ ಈ ಬಾರಿ ಬಹಳಷ್ಟು ಮಂದಿ ಶುಂಠಿ ಕೃಷಿಕರಿಗೆ ಅನ್ವಯವಾಗಿದೆ. ಕಳೆದೆರಡು ವರ್ಷಗಳಲ್ಲಿ ಶುಂಠಿ ಫಸಲಿಗೆ ಉತ್ತಮ ಅಲ್ಲ ಅತ್ಯುತ್ತಮ ವಾದ ದರವಿದ್ದ ಕಾರಣ ಈ ಬಾರಿ ಬಹಳಷ್ಟು ಮಂದಿ ಶುಂಠಿ ಬೆಳೆಯ ದುರಾಸೆಗೆ ಒಳಗಾಗಿ ಬಾರೀ ಲಾಭ ಗಳಿಕೆಯ ಲೆಕ್ಕಾಚಾರದೊಂದಿಗೆ ಬೆಳೆಯಲು ಹೋಗಿ ದಿಕ್ಕುತೋಚದಾಗಿದ್ದಾರೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಗಗನಕ್ಕೆ ಏರಿದ್ದ ಶುಂಠಿಯ ಬೆಲೆಯಿಂದ ರೈತರ ಮೈ ಹಾಗೂ ಮನಸ್ಸು ತೇಲಾಡಿ ಓಲಾಡಿದ ದಿನಗಳು ಕಣ್ಣ ಮುಂದೆ ಇವೆ. ಕಳೆದ ಕೆಲವು ವರ್ಷಗಳ ಈಚೆಗೆ ಹಳ್ಳಿಗಳ ವಾತಾವರಣವೇ ಬದಲಾಗಿ ಹೋಗಿತ್ತು. ಅಂದರೆ ಶುಂಠಿಯ ಉತ್ತಮವಾದ ಬೆಳೆ ಹಾಗೂ ಏರಿಕೆ ಕಂಡಿದ್ದ ಬೆಲೆಯಿಂದಾಗಿ ಆಕಾಶದಲ್ಲಿ ತೇಲುತ್ತಿದ್ದವರು ಇನ್ನೂ ಎತ್ತರಕ್ಕೆ ಏರಲು ಹೋಗಿ ಈ ಬಾರಿ ವಿಪರೀತವಾದ ಶುಂಠಿ ಬೆಳೆದಿದ್ದರು. ಆದರೆ ಈ ವ್ಯಾಮೋಹ ವಿಪರೀತಕ್ಕೆ ಹೋಗಿದ್ದೇ ಅಪಾಯಕ್ಕೆ ತಳ್ಳಿತು. ಈ ಬಾರಿ ಜೂನ್ ನಿಂದ ಗಳಿಸುವ ಆತುರದ ಬಲೆಗೆ ಬೀಳುವಂತಾಯಿತು. ಬಹಳಷ್ಟು ಮಂದಿ ಅತಿ ಆಸೆಗೆ ಬಲಿ ಬಿದ್ದು ಇದ್ದುದೆಲ್ಲವನ್ನು ಕಳೆದುಕೊಂಡರು. ಇಲ್ಲದುದನ್ನು ಗಳಿಸಬೇಕೆಂಬ ಉತ್ಸಾಹ ಭೂಮಿಯನ್ನು ಬಂಜೆಯಾಗಿಸಿತು. ಕೈಯನ್ನು ಖಾಲಿಯಾಗಿಸಿತು. ಸಾಂಪ್ರದಾಯಿಕ ಕೃಷಿಗೆ ಬದ್ಧವಾಗಿದ್ದ ಕೊಡಗು ಜಿಲ್ಲೆಯ ಕುಶಾಲನಗರ ಹೋಬಳಿಯ ಶಿರಂಗಾಲ, ಹೆಬ್ಬಾಲೆ, ತೊರೆನೂರು, ಬಾಣಾವರ, ಅಳುವಾರ, ಗುಡ್ಡೆಹೊಸೂರು, ಕಾವೇರಿ ನದಿಯಂಚಿನ ಕೊಪ್ಪ, ಚಿಕ್ಕಹೊಸೂರು, ಆವರ್ತಿ, ದಿಂಡಗಾಡು, ದೊಡ್ಡಕಮರವಳ್ಳಿ ಮೊದಲಾದ ಅರೆ ಮಲೆನಾಡು ಪ್ರದೇಶಗಳು, ಪಿರಿಯಾಪಟ್ಟಣ, ಹುಣಸೂರು, ಹೆಚ್.ಡಿ.ಕೋಟೆ ಯಂತಹ ಬಯಲು ಸೀಮೆಯ ಪ್ರದೇಶಗಳು ಶುಂಠಿಯ ಹಿಡಿತಕ್ಕೆ ಸಿಲುಕಿದವು.

ಇದರಿಂದಾಗಿ ಬಂಡವಾಳ ಶಾಹಿಗಳು, ಸರ್ಕಾರಿ ಸಂಬಳ ಹಾಗೂ ಗಿಂಬಳ ಪಡೆಯುವ ನೌಕರರಲ್ಲಿ ಈ ಶುಂಠಿಯ ಲಾಭದ ಗಳಿಕೆಯ ಆಸೆ ಹೆಚ್ಚಾಯಿತು. ಕಳೆದ ವರ್ಷ ಅಂದರೆ ೨೦೧೮ ರಲ್ಲಿ ೬೦ ಕೆಜಿ ತೂಕದ ಒಂದು ಚೀಲ ಹಳೆಯ ಶುಂಠಿ ಗರಿಷ್ಠ ೬ ರಿಂದ ೭ ಸಾವಿರ ರೂಗಳಿಗೂ, ಹೊಸ ಶುಂಠಿ ೨೫೦೦ ರೂಗಳಿಂದ ೩೦೦೦ ಸಾವಿರ ರೂ. ಸಿಕ್ಕಿತು.

ಕ್ರಮೇಣ ೨೦೧೯ ರ ಸಾಲಿಗೆ ಬಿತ್ತನೆ ಮಾಡುವ ಶುಂಠಿಗೆ ಅದೇ ೬೦ ಕೆಜಿ ತೂಕದ ಚೀಲಕ್ಕೆ ಗರಿಷ್ಠ ಅಂದರೆ ೫೦೦೦ ಸಾವಿರಕ್ಕೆ ತಲುಪಿತು. ಆದರೂ ಕೂಡ ಬಿತ್ತನೆ ಬೀಜಕ್ಕೆ ದುಪ್ಪಟ್ಟು ಹಣವಾದರೂ ಕೂಡ ೫ ಸಾವಿರ ಕೊಟ್ಟು ಖರೀದಿಸಿದವರಿಗೆ ೨೦೧೯ ರ ಜೂನ್ ನಲ್ಲಿ ಗರಿಷ್ಠ ಅಂದರೆ ೫೬೦೦ ರೂ. ಹಾಗೂ ಕನಿಷ್ಟ ೪೦೦೦ ರೂ. ಲಭಿಸಿತ್ತು.

ಅದೇ ಒಂದು ವರ್ಷ ಅವಧಿ ಕಳೆದ ಹಳೇ ಶುಂಠಿಗೆ ೯೦೦೦ ಸಾವಿರ ರೂ ಲಭಿಸಿದ್ದು, ಬೆಳೆಗಾರರನ್ನು ಕುಳಿತಲ್ಲಿ ಕೂರಲು ಬಿಡಲಿಲ್ಲ. ಒಂದು ರೀತಿ ಗಿರಗಟ್ಟಲೆ ಹೊಡೆಸಿತು. ೨೦೧೯ ರಲ್ಲಿ ಮಾರುಕಟ್ಟೆಯಲ್ಲಿ ದೊರೆತ ಅತ್ಯಧಿಕ ಪ್ರಮಾಣದ ದರ ೨೦೨೦ ಕ್ಕೂ ಸಿಗುತ್ತದೆ ಎಂದು ಕನಸು ಕಂಡ ಹಳ್ಳಿಗಳ ಅನೇಕರು ತಿನ್ನಲು ಅನ್ನ ಬೆಳೆಯದಿದ್ದರು ಪರವಾಗಿಲ್ಲ ಶುಂಠಿಯನ್ನು ಬೆಳೆಯಲೇ ಬೇಕೆಂಬ ಇರುಳ ಕನಸನ್ನು ಹಗಲಲ್ಲೂ ಕಂಡರು.

ಒಂದಕ್ಕೆ ಎರಡು ಪಟ್ಟು ಹಣ ಕೊಟ್ಟು ಭೂಮಿಯನ್ನು ಲೀಸ್‌ಗೆ ಪಡೆದರು. ಅಂತರ್ಜಲ ಪಾತಾಳ ಕಂಡರೂ ಬಿಡದೇ ಮತ್ತದೇ ಲಕ್ಷ ಲಕ್ಷ ಸುರಿದು ಹಗಲು ರಾತ್ರಿಗಳೆನ್ನದೇ ಕೊಳವೆ ಬಾವಿಗಳನ್ನು ತೋಡುವ ಯಂತ್ರಗಳಿಗೆ ಕೆಲಸ ಕೊಟ್ಟರು. ಹಾಗೂ ಹೀಗೂ ಭೂಮಿ ಹದಗೊಳಿಸಿದರು. ೨೦೨೦ರ ಬಿತ್ತನೆ ಅವಧಿಯ ಜನವರಿ ಮಾಸಾಂತ್ಯ ಹಾಗೂ ಫೆಬ್ರವರಿ ಆರಂಭದಲ್ಲಿ ಶುಂಠಿ ಬಿತ್ತನೆ ಬೀಜದ ದರ ಹಠಾತ್ತನೆ ೩೫೦೦ರಿಂದ ೩೦೦೦ಕ್ಕೆ ಇಳಿಯಿತು. ಇದು ಹೊಸದಾಗಿ ಶುಂಠಿ ಬೆಳೆಯುವವರಿಗೆ ವರವೇ ಆಯಿತು. ಬಿತ್ತನೆ ಬೀಜದ ದರ ಕುಸಿದದ್ದರಿಂದ ೫. ಚೀಲ ಬಿತ್ತನೆ ಮಾಡೋ ಮಂದಿ ೧೦ ಚೀಲ ಬಿತ್ತನೆಗೆ ಯೋಜನೆ ರೂಪಿಸಿದರು.

ಒಟ್ಟಾರೆ ಬಿತ್ತನೆ ಪ್ರಮಾಣ ದುಪ್ಪಟ್ಟಾಯಿತು. ಹಾಗಾಗಿ ಎಲ್ಲೆಲ್ಲೂ ಶುಂಠಿ ಬೆಳೆಯೇ ರಾರಾಜಿಸಿತು. ಆರೆಂಟು ತಿಂಗಳ ಹಿಂದೆ ಇದ್ದ ಮೂರ್ನಾಲ್ಕು ಸಾವಿರ ರೂಗಳ ಶುಂಠಿಯ ಬೆಲೆ ಒಂದೇ ಇಳುವರಿಯಲ್ಲಿ ನೆಲ ಕಚ್ಚಿತು.

ಅಂದರೆ ಸಾವಿರ ರೂಗಳನ್ನು ದಾಟದಾಯಿತು. ಈಗ ಮಾರುಕಟ್ಟೆಯಲ್ಲಿ ಒಂದು ಚೀಲ ಶುಂಠಿಗೆ ೮೦೦ ರೂಗಳಿಂದ ೮೨೫ ರೂ ಇದೆ. ಇದರಿಂದಾಗಿ ಲಕ್ಷ ಸುರಿದು ಕೋಟಿ ಬಾಚಬೇಕೆಂಬ ಕನಸು ಕಂಡವರ ತಲೆ ಈಗ ಗರಗರನೇ ತಿರುಗುತ್ತಿದೆ. ಅಲ್ಲಿ ಇಲ್ಲಿ ಸಾಲ ತಂದು ಖರ್ಚು ಮಾಡಿದ ಬೆಳೆಗಾರ ಸಾಲದ ಶೂಲಕ್ಕೆ ಸಿಲುಕುವಂತಾಗಿದೆ. ಸದ್ಯ ಯಾರೊಬ್ಬರೂ ಬೆಲೆ ಕುಸಿತದ ಆಘಾತಕ್ಕೆ ಅವಘಡಗಳನ್ನು ಮಾಡಿಕೊಳ್ಳದಿದ್ದರೆ ಸಾಕು. ನೆರೆಯ ರಾಜ್ಯಗಳ ದಲ್ಲಾಳಿಗಳ ವ್ಯಾಪಾರಿ ಬುದ್ದಿ ಶುಂಠಿಗೆ ರಹದಾರಿ ಮಾಡಿತು. ಹೊರ ದೇಶಗಳಿಗೆ ರಫ್ತು ಮಾಡಿ ಲಾಭ ಗಳಿಕೆಯ ಆಮಿಷ ರೈತರ ದಿಕ್ಕು ತಪ್ಪಿಸಿತು. ೨೦೨೦ರ ಫೆಬ್ರವರಿಯಿಂದ ಇಡೀ ನಾಡಿಗೆ ಕಂಟಕವಾದ ಕೊರೊನಾ ರೈತರ ನೆಮ್ಮದಿಯನ್ನು ಕಸಿದಿದೆ. ಭತ್ತ, ಮೆಣಸಿನ ಕಾಯಿ ಹಾಗೂ ದ್ವಿದಳ ಧಾನ್ಯಗಳಿಗೆ ಇಲ್ಲದ ಬೆಲೆ ಶುಂಠಿಗೆ ತಿರುಗಿದ ಫಲ ಬಹಳಷ್ಟು ರೈತರನ್ನು ಈ ಬಾರಿ ಬಾಣಲೆಯಿಂದ ಬೆಂಕಿಗೆ ದೂಡಲ್ಪಟ್ಟಿದೆ.

ಸತತ ಲಾಕ್ ಡೌನ್ ಕೂಡ ಕಾರಣ

ಶುಂಠಿ ಬೆಲೆ ಇಷ್ಟೊಂದು ಕೆಳಮಟ್ಟಕ್ಕೆ ಕುಸಿಯಲು ಕೊರೊನಾದಿಂದಾಗಿ ಮಾಡಿದ ಲಾಕ್ ಡೌನ್ ಮೂಲ ಕಾರಣ ವಾಯ್ತು. ದೇಶಾದ್ಯಂತ ಎಲ್ಲಾ ಹೋಟೆಲ್ ಹಾಗೂ ಚಹಾ ಅಂಗಡಿಗಳು ಮುಚ್ಚಲ್ಪಟ್ಟವು. ಆಯುರ್ವೇದದ ಸುಮಾರು ೪೦ ವಿವಿಧ ಮೂಲಿಕೆಗಳ ತಯಾರಿಕೆಯಲ್ಲಿ ಶುಂಠಿಗೆ ಪ್ರಮುಖ ಪಾತ್ರ. ಕಫ, ಕೆಮ್ಮು, ವಾತ, ನೋವು ನಿವಾರಕ ಸೇರಿದಂತೆ ಏಡ್ಸ್ ನಂತಹ ಭೀಕರ ರೋಗಗಳ ನಿವಾರಣೆಯ ಸಂಶೋಧನೆಗೂ ಶುಂಠಿ ಬೇಕು. ಅತಿಯಾದ ಚಳಿ ಇರುವ ಈಶಾನ್ಯ ಮತ್ತು ಉತ್ತರದ ರಾಜ್ಯಗಳಲ್ಲಿ ಈ