ಮಡಿಕೇರಿ, ಜ. ೨೬ : ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ ಸೇರಿದಂತೆ ಇತರ ಬೇಡಿಕೆಗಳು ಪೂರೈಕೆಯಾದರೆ ಮಾತ್ರ ಗಣರಾಜ್ಯೋತ್ಸವ ದಿನಕ್ಕೆ ಅರ್ಥವಿರುತ್ತದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಅಭಿಪ್ರಾಯ ಪಟ್ಟರು.

ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಬಳಿಯ ಮಂದ್‌ನಲ್ಲಿ ಇಂದು ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ನಾಚಪ್ಪ ಅವರು ಕೊಡವ ಜನಾಂಗದ ಹಲವು ವರ್ಷಗಳ ಬೇಡಿಕೆಯಾಗಿರುವ ಭೂ-ರಾಜಕೀಯ ಸ್ವಾಯತ್ತತೆ, ಬುಡಕಟ್ಟು ಸ್ಥಾನಮಾನದ ಕುರಿತು ಮಾಹಿತಿ ನೀಡಿದರು. ಇವುಗಳೆಲ್ಲ ಜನಾಂಗದ ಬೇಡಿಕೆಯಲ್ಲ, ಬದಲಿಗೆ ನಮ್ಮ ಹಕ್ಕಾಗಿದೆ. ಇವುಗಳಿಗೆ ಸಂವಿಧಾನ್ವಿಕ ವಾಗಿ ಅನುಮೋದನೆ ದೊರೆಯ ಬೇಕಷ್ಟೆ. ಆಗ ಮಾತ್ರ ಗಣರಾಜ್ಯೋತ್ಸವ ದಿನಕ್ಕೆ ಅರ್ಥವಿರುತ್ತದೆ ಎಂದು ಹೇಳಿದರು. ಸಿ.ಎನ್.ಸಿ.ಯ ಹಲವಾರು ಬೇಡಿಕೆಗಳ ನ್ನೊಳಗೊಂಡ ಮನವಿ ಯನ್ನು ನಗರ ಠಾಣೆ ಎ.ಎಸ್.ಐ ಹೊನ್ನಪ್ಪ ಅವರ ಮುಖಾಂತರ ಸರಕಾರಕ್ಕೆ ಸಲ್ಲಿಸಲಾಯಿತು.

ಈ ಸಂದರ್ಭ ಸಿ.ಎನ್.ಸಿ ಯ ಪಟ್ಟಮಾಡ ಲಲಿತ, ಪುಲ್ಲೇರ ಸ್ವಾತಿ ಕಾಳಪ್ಪ, ನಂದಿನೆರವAಡ ನಿಶಾ ಅಚ್ಚಯ್ಯ, ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ಬಾಚರಣಿಯಂಡ ಚಿಪ್ಪಣ್ಣ, ಪುಲ್ಲೇರ ಕಾಳಪ್ಪ, ಅಜ್ಜಿಕುಟ್ಟೀರ ಲೋಕೇಶ್, ಚಂಬAಡ ಜನತ್, ಅರೆಯಡ ಗಿರೀಶ್, ಕಾಟುಮಣಿ ಯಂಡ ಉಮೇಶ್, ಮದ್ರಿರ ಕರುಂಬಯ್ಯ, ಮಾಚಿಮಾಡ ಲವ ಗಣಪತಿ, ನಂದಿನೆರವAಡ ವಿಜು, ಕಿರಿಯಮಾಡ ಶೆರೀನ್, ಪುಟ್ಟಿಚಂಡ ಡಾನ್, ಮಂಡೇಪAಡ ಮನೋಜ್, ಮಂದೀರ ಚಿನ್ನಪ್ಪ, ಮೇದುರ ಕಂಟಿ, ನಾಪಂಡ ಅರುಣ್, ನಂದೇಟಿರ ಸುಬ್ಬಯ್ಯ, ನಂದಿನೆರವAಡ ಅಪ್ಪಯ್ಯ, ಪುದಿಯೊಕ್ಕಡ ಕಾಶಿ, ಕೂಪದಿರ ಸಾಬು, ಬಿ. ಬಿದ್ದಪ್ಪ, ಅವರೆಮಾದಂಡ ರಮೇಶ್ ಹಾಜರಿದ್ದರು.