ಶನಿವಾರಸAತೆ, ಜ. ೨೬: ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನದ ಸವಾರರಿಗೆ ಶನಿವಾರಸಂತೆ ಠಾಣಾಧಿಕಾರಿ ಹೆಚ್.ಇ. ದೇವರಾಜ್ ತಲಾ ರೂ. ೫೦೦ ರಂತೆ ರೂ. ೧೦ ಸಾವಿರ ದಂಡ ವಿಧಿಸಿದ್ದು, ರೂ. ೧೦ ಸಾವಿರ ನಗದು ಸಂಗ್ರಹವಾಗಿದೆ.

ಶನಿವಾರಸAತೆ ೧ನೇ ವಿಭಾಗದ ಗಣಪತಿ ದೇವಾಲಯದ ಬಳಿ, ಮುಖ್ಯ ರಸ್ತೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಶನಿವಾರಸಂತೆ ಪೊಲೀಸರು ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನಗಳ ಚಾಲಕರಿಗೆ ಚಳಿ ಬಿಡಿಸಿದರು. ಠಾಣಾಧಿಕಾರಿ ದ್ವಿಚಕ್ರ ವಾಹನಗಳ ಚಾಲಕರಿಗೆ ತಲಾ ರೂ. ೫೦೦ ದಂಡ ವಿಧಿಸಿದರು. ಒಟ್ಟು ರೂ. ೧೦ ಸಾವಿರ ದಂಡ ವಸೂಲಾಗಿದೆ ಎಂದು ಠಾಣಾಧಿಕಾರಿ ಪತ್ರಿಕೆಗೆ ತಿಳಿಸಿದರು.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಇ. ದೇವರಾಜ್, ಸಿಬ್ಬಂದಿಗಳಾದ ಚೆನ್ನಕೇಶವ, ಶಣ್ಮುಖನಾಯಕ್, ಮುರುಳಿ, ವಿನಯ್, ಧನಂಜಯ ಆಚಾರ್ ಇತರರು ಪಾಲ್ಗೊಂಡಿದ್ದರು.