ಸಿದ್ದಾಪುರ, ಜ. ೨೬: ಲಯನ್ಸ್ ಕ್ಲಬ್ ಸಿದ್ದಾಪುರ ಹಾಗೂ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರದ ಲಯನ್ಸ್ ಕ್ಲಬ್ ಸಬಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಸಮಗ್ರತಾ ದೃಷ್ಠಿಯ ವೈದ್ಯರಾದ ರಾಜೇಂದ್ರ ಸಿಂಗ್ ಅವರು ಆರೋಗ್ಯ ತಪಾಸಣೆ ಈ ಸಂದರ್ಭ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಕೋಡಿರ ಖುಷಿ ಭೀಮಯ್ಯ, ಕಾರ್ಯದರ್ಶಿ ಪಟ್ಟಡ ನಮಿತಾ ಅಯ್ಯಪ್ಪ, ಖಜಾಂಚಿ ಪಟ್ಟಡ ವಿದ್ಯಾ ದೇವಯ್ಯ, ಪ್ರಮುಖರಾದ ಕನ್ನಿಕಾ ಅಯ್ಯಪ್ಪ, ಕೀತಿಯಂಡ ವಿವೇಕ್ ಜೋಯಪ್ಪ, ಪಟ್ಟಡ ವಿಶಾಲ್ ದೇವಯ್ಯ, ಪಟ್ಟಮಾಡ ಬಿಪಿನ್ ಸೇರಿದಂತೆ ಇನ್ನಿತರರು ಇದ್ದರು.