*ಗೋಣಿಕೊಪ್ಪ, ಜ. ೨೬: ಗ್ರಾಮಗಳಿಗೆ ಕುಡಿಯುವ ನೀರು, ಸಮುದಾಯ ಭವನ, ಸರ್ಕಾರಿ ಬಸ್ ಸಂಚಾರದ ವ್ಯವಸ್ಥೆ ಮತ್ತು ಸಂಜೀವಿನಿ ಒಕ್ಕೂಟಕ್ಕೆ ಕಟ್ಟಡ ನಿರ್ಮಾಣಗಳಿಗೆ ಪಂಚಾಯಿತಿ ವತಿಯಿಂದ ಸಹಕಾರ ನೀಡಬೇಕು ಎಂದು ಮಹಿಳಾ ಗ್ರಾಮ ಸಭೆ ಹಾಗೂ ರಾಷ್ಟಿçÃಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಮಹಿಳೆಯರು ಬೇಡಿಕೆಗಳನ್ನು ಸಲ್ಲಿಸಿದರು.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಸಂಜೀವಿನಿ ಒಕ್ಕೂಟ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಹಿಳೆಯರು ಇಂದಿರಾಗಾAಧಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಹಿಳಾ ಗ್ರಾಮಸಭೆಗೆ ಚಾಲನೆ ನೀಡಿದರು.
ದೇಶದ ಪ್ರಗತಿಗೆ ಮಹಿಳೆಯರ ಪಾತ್ರ ಬಹು ಪ್ರಾಮುಖ್ಯವಾಗಿದೆ. ಕುಟುಂಬ ನಿರ್ವಹಣೆಯಿಂದ ದೇಶದ ನಿರ್ವಹಣೆಯವರೆಗೂ ಹೆಣ್ಣು ತನ್ನ ಬಲ ಮತ್ತು ಧೈರ್ಯವನ್ನು ಪ್ರದರ್ಶಿಸಿದ್ದಾಳೆ ಎಂದು ಪಂಚಾಯಿತಿ ಸದಸ್ಯರಾದ ತಾಯವ್ವ ಹೇಳಿದರು.
ಬಾಲ್ಯ ವಿವಾಹ, ವರದಕ್ಷಿಣೆ ಪಿಡುಗುಗಳಿಗೆ ಈ ಕಾಲಘಟ್ಟದಲ್ಲಿಯೂ ಹೆಣ್ಣುಮಕ್ಕಳು ಬಲಿಯಾಗುತ್ತಿರುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ಗೋಪಮ್ಮ ವಿಷಾದ ವ್ಯಕ್ತಪಡಿಸಿದರು. ನಂತರ ಮಕ್ಕಳಿಂದ ಸಾಂಸ್ಕöÈತಿಕ ಕಾರ್ಯಕ್ರಮ, ಕ್ರೀಡಾ ಸ್ಪರ್ಧೆಗಳು ನಡೆದವು.
ವಿಜೇತರಾದವರಿಗೆ ಗ್ರಾಮ ಪಂಚಾಯಿತಿಯಿAದ ಬಹುಮಾನವನ್ನು ವಿತರಿಸಲಾಯಿತು. ಕೆದಮುಳ್ಳೂರು ಗ್ರಾ.ಪಂ. ಸದಸ್ಯರುಗಳಾದ ಶೀಲಾ, ತಾಯಮ್ಮ, ವಿಮಲ, ಮೀನಾಕ್ಷಿ, ಇಸ್ಮಾಯಿಲ್, ಅಭಿವೃದ್ಧಿ ಅಧಿಕಾರಿ ಪ್ರಮೋದ್, ಸಂಜೀವಿನಿ ಒಕ್ಕೂಟದ ಸಂಪನ್ಮೂಲ ವ್ಯಕ್ತಿ ಶೈನಿ, ಒಕ್ಕೂಟದ ಉಪಾಧ್ಯಕ್ಷೆ ಶೋಭ ಹಾಗೂ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು.