ವೀರಾಜಪೇಟೆ, ಜ. ೨೬: ದೇವಣಗೇರಿ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿ.ವೈ.ಸಿ ಕೋಟೆಕೊಪ್ಪ ತಂಡದಿAದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ನಾಕೌಟ್ ಕಾಲ್ಚೆಂಡು ಪಂದ್ಯಾಟದಲ್ಲಿ ಅಮ್ಮತ್ತಿ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ತಂಡವು ಕೋಟೆಕೊಪ್ಪದ ನರು ಫ್ರೆಂಡ್ಸ್ ತಂಡವನ್ನು ೪-೩ ಗೋಲುಗಳಿಂದ ಮಣಿಸಿ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಕಡೆಯ ೫ ನಿಮಿಷದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿತು. ನಿಗದಿತ ಅವಧಿ ಪೂರ್ಣಗೊಳ್ಳಲು ವೀರಾಜಪೇಟೆ, ಜ. ೨೬: ದೇವಣಗೇರಿ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿ.ವೈ.ಸಿ ಕೋಟೆಕೊಪ್ಪ ತಂಡದಿAದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ನಾಕೌಟ್ ಕಾಲ್ಚೆಂಡು ಪಂದ್ಯಾಟದಲ್ಲಿ ಅಮ್ಮತ್ತಿ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ತಂಡವು ಕೋಟೆಕೊಪ್ಪದ ನರು ಫ್ರೆಂಡ್ಸ್ ತಂಡವನ್ನು ೪-೩ ಗೋಲುಗಳಿಂದ ಮಣಿಸಿ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಕಡೆಯ ೫ ನಿಮಿಷದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿತು. ನಿಗದಿತ ಅವಧಿ ಪೂರ್ಣಗೊಳ್ಳಲು ಒಂದು ನಿಮಿಷ ಬಾಕಿ ಇದ್ದಾಗ ಅಮ್ಮತ್ತಿ ತಂಡ ಮತ್ತೊಂದು ಗೋಲು ಬಾರಿಸುವುದರ ಮೂಲಕ ಪ್ರಥಮ ವರ್ಷದ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಂದ್ಯಾಟದಲ್ಲಿ ಒಟು ೪೦ ತಂಡಗಳು ಭಾಗವಹಿಸಿದ್ದವು.

ಕ್ರೀಡಾಕೂಟದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮೂಕೊಂಡ ಉಮೇಶ್, ಪ್ರಮುಖರಾದ ಸಣ್ಣುವಂಡ ಪ್ರಭು, ಸೋಮೇಯಂಡ ಭರತ್, ಸುಜು, ವಿ.ಎ ದಿನೇಶ್, ವಿ.ಇ ದಿನೇಶ್, ವಸಂತ್, ರಘು, ರಮೇಶ್ ಸಂಘದ ಅಧ್ಯಕ್ಷ ಗೋಪಿ ಇದ್ದರು.