ನಾಪೋಕ್ಲು, ಜ. ೨೬: ನೆಲಜಿ ಯೂತ್ ಕ್ಲಬ್ ವತಿಯಿಂದ ಬಲ್ಲಮಾವಟಿ ನೇತಾಜಿ ಪ್ರೌಢಶಾಲಾ ಮೈದಾನದಲ್ಲಿ ನಡೆದ ನೆಲಜಿ ನಾಡು ಕ್ರಿಕೆಟ್ ಪಂದ್ಯಾಟದಲ್ಲಿ ಚೋನಕೆರೆ ತಂಡವು ಪ್ರಥಮ ಸ್ಥಾನಗಳಿಸಿದೆ.

ಹಾಗೆಯೇ ಬೊಮ್ಮಂಜಿಕೇರಿ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿತು. ಮೂರು ದಿನಗಳ ಕಾಲ ನಡೆದ ಪಂದ್ಯಾಟದಲ್ಲಿ ೨೪ ತಂಡಗಳು ಪಾಲ್ಗೊಂಡಿದ್ದವು. ಈ ಪ್ರಯುಕ್ತ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ನೆಲಜಿ ಯೂತ್ ಕ್ಲಬ್ ಅಧ್ಯಕ್ಷ ಕೈಬುಲಿರ ವಚನ್ ಕುಟ್ಟಪ್ಪ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬ್ಯಾಡ್ಮಿಂಟನ್ ಆಟಗಾರ ಅಶೋಕ್ ಪೂವಯ್ಯ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕಾಫಿ ಬೆಳೆಗಾರ ಮಂಡೀರ ಜಯಾ ದೇವಯ್ಯ, ನೆಲಜಿ ವಿಎಸ್‌ಎಸ್‌ಎನ್ ಅಧ್ಯಕ್ಷ ಚೀಯಕಪೂವಂಡ ಅಪ್ಪಚ್ಚು, ಮುಕ್ಕಾಟಿರ ವಿನಯ್ ಮತ್ತಿತರರು ಇದ್ದರು.

ಪ್ರಥಮ ಬಹುಮಾನದ ಟ್ರೋಫಿಯನ್ನು ದಾನಿಗಳಾದ ಮುಂಡAಡ ಚೇತನ್, ದ್ವಿತೀಯ ಬಹುಮಾನದ ಟ್ರೋಫಿಯನ್ನು ಕಾಳೆಯಂಡ ಸಾಬಾ ತಿಮ್ಮಯ್ಯ, ಮ್ಯಾನ್ ಆಫ್ ದಿ ಸೀರಿಸ್ ಟ್ರೋಫಿಯನ್ನು ಅಂಜಪರವAಡ ಅಬಿನ್ ಚಿಟ್ಟಿಯಪ್ಪ, ಬೆಸ್ಟ್ಬೌಲರ್, ಬ್ಯಾಟ್ಸ್ಮೆನ್, ಆಲ್‌ರೌಂಡರ್ ಟ್ರೋಫಿಯನ್ನು ಕಲಿಯಂಡ ಬಿದ್ದಪ್ಪ, ಬೆಳ್ಳಿ ನಾಣ್ಯವನ್ನು ಮುಳಿಯ ಜ್ಯುವೆರ‍್ಸ್ ವತಿಯಿಂದ ನೀಡಲಾಯಿತು.

ತಾಂತ್ರಿಕ ವಿಭಾಗದಲ್ಲಿ ಪೊರ್ಕೊಂಡ ಸುನಿಲ್, ಕರವಂಡ ಅಪ್ಪಣ್ಣ, ನಿತಿನ್ ಹಳೇತಾಲೂಕು, ಬದ್ದಂಜೆಟ್ಟಿರ ಜಿಮ್ಸ, ಮಣವಟ್ಟಿರ ದೀಪಕ್, ಮಂಡಿರ ಸಚಿನ್, ಐರೀರ ರಾಬಿನ್, ಕೈಬುಲಿರ ಕುಟ್ಟಪ್ಪ ಕರ್ತವ್ಯ ನಿರ್ವಹಿಸಿದರು.