ಎ. ಎಸ್. ಪೊನ್ನಣ್ಣ
ಮಡಿಕೇರಿ, ಜ. ೨೬: ಯುವ ಜನಾಂಗ ಬಿಡುವಿನ ಸಮಯವನ್ನು ಕ್ರೀಡೆಗೆ ಮೀಸಲಿರಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ರಾಜ್ಯದ ಮಾಜಿ ಆಡ್ವೋಕೆಟ್ ಜನರಲ್ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವ ಟ್ರೆöÊಬ್ ಅರುವತ್ತೊಕ್ಲು ಯುವ ಸಂಘಟನೆ ಚೇರಂಬಾಣೆಯ ರಾಜರಾಜೇಶ್ವರಿ ಶಾಲೆಯ ಕ್ರೀಡಾಂಗಣದಲ್ಲಿ ಆಯೋಜಿಸಿದ ಗ್ರಾಮೀಣ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಫೈನಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡಾ ಚಟುವಟಿಕೆಗಳಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಬಹುದು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯ ಬಗ್ಗೆ ಎ. ಎಸ್. ಪೊನ್ನಣ್ಣ
ಮಡಿಕೇರಿ, ಜ. ೨೬: ಯುವ ಜನಾಂಗ ಬಿಡುವಿನ ಸಮಯವನ್ನು ಕ್ರೀಡೆಗೆ ಮೀಸಲಿರಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ರಾಜ್ಯದ ಮಾಜಿ ಆಡ್ವೋಕೆಟ್ ಜನರಲ್ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡವ ಟ್ರೆöÊಬ್ ಅರುವತ್ತೊಕ್ಲು ಯುವ ಸಂಘಟನೆ ಚೇರಂಬಾಣೆಯ ರಾಜರಾಜೇಶ್ವರಿ ಶಾಲೆಯ ಕ್ರೀಡಾಂಗಣದಲ್ಲಿ ಆಯೋಜಿಸಿದ ಗ್ರಾಮೀಣ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಫೈನಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡಾ ಚಟುವಟಿಕೆಗಳಿಂದ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಬಹುದು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯ ಬಗ್ಗೆ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ಯಾವುದೇ ನೆರವನ್ನು ಪಡೆಯದೆ ಸ್ವಯಂ ಪ್ರೇರಿತರಾಗಿ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜಿಸಿ ಕೊಡಗು ಜಿಲ್ಲೆಯ ಯುವ ಸಮೂಹಕ್ಕೆ ಮಾದರಿಯಾಗಿರುವ ಅರುವತ್ತೊಕ್ಲು ಕೊಡವ ಟ್ರೆöÊಬ್ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು .
ಫೈನಲ್ ಪಂದ್ಯಾಟವನ್ನು ಉದ್ಘಾಟಿಸಿದ ಹೈಕೋರ್ಟ್ನ ಇಬ್ಬರೂ ವಕೀಲರು ಕೋರ್ಟ್ ಅಂಕಣವನ್ನು ಮರೆತು ಕ್ರೀಡಾ ಅಂಕಣದಲ್ಲಿ ನುರಿತ ಆಟಗಾರರಾಗಿ ಆಟವಾಡುವ ಮೂಲಕ ಅಚ್ಚರಿಮೂಡಿಸಿದರು .
ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಾಟೋಳಂಡ ವಿಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೇಷ್ಮೆ ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಮಡಿಕೇರಿ ನಗರ ಸಭೆಯ ಮಾಜಿ ಅಧ್ಯಕ್ಷರಾದ ಪಿ.ಡಿ. ಪೊನ್ನಪ್ಪ, ತೆಕ್ಕಿಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಎಂ. ಶಾಹಿದ್, ಡಿಸಿಸಿ ಸದಸ್ಯ ಪುಷ್ಪ ಪೂಣಚ್ಚ, ಜಬ್ಬಂಡ ಬೋಪಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಬಡ್ಡೀರ ಸೋಮಣ್ಣ, ಕೆ.ಎಂ. ಬಷೀರ್ ಸೇರಿದಂತೆ ಸ್ಥಳೀಯ ಗ್ರಾಮಸ್ಥರು, ಕ್ರೀಡಾಪಟುಗಳು, ಸಾರ್ವಜನಿಕರು ಭಾಗವಹಿಸಿದ್ದರು. ಕೊಡವ ಟ್ರೆöÊಬ್ ಪದಾಧಿಕಾರಿಗಳಾದ ಮುಂಜಾAದಿರ ಕುಟ್ಟಣ್ಣ, ತೆನ್ನೀರಾ ಸ್ವರೂಪ್, ಡ್ಯಾನ್ ದೇವಯ್ಯ, ಕೊಳುಮಾಡಂಡ ಚರಣ್ ಕಾರ್ಯಕ್ರಮ ನಿರೂಪಿಸಿದರು.