ಕಾಡಿನಿಂದ ನಾಡಿಗೆ ಆಹಾರ ನೀರು ಅರಸಿ ಬಂದAತಹ ಕಾಡಾನೆ ಗಳ ಹಿಂಡನ್ನು ಹೇಗೆಲ್ಲಾ ಗೋಳು ಹೊಯ್ದು ಕೊಳ್ಳುವ ಮನುಷ್ಯರಿಗೆ ಕಾಡಾನೆ ಯೊಂದು ತನ್ನೊಡಲ ಸಂಕಟವನ್ನು ಹೀಗೂ ಹೇಳಿಕೊಳ್ಳ ಬಹುದೇ....!?
ಹೇ ಮಾನವರೇ, ನಮ್ಮದಾಗಿದ್ದ ಎಲ್ಲಾ ಸಂಪತ್ತನ್ನು ನೀವು ದೋಚಿದ್ದೀರಿ! ಅರಣ್ಯ ಸಂಪತ್ತನ್ನೆಲ್ಲಾ ಹಣದಾಸೆಗಾಗಿ ಲೂಟಿ ಮಾಡಿ ಇದೀಗ ನಮಗೆ ಕಾಡಿನಲ್ಲಿ ಏನೇನೂ ಇಲ್ಲದಂತೆ ಮಾಡಿದ್ದೀರಿ.
ನಿಮ್ಮಂತೆಯೇ ನಾವು ಕೂಡ ದಿನವೂ ಹೊಟ್ಟೆ ತುಂಬಿಸಿಕೊಳ್ಳ ಬೇಕಲ್ಲವಾ..
ಅದಕ್ಕಾಗಿ ಹಿಂದೆ ಕಾಡಾಗಿದ್ದ ಇಂದು ನಾಡಾಗಿರುವ ನಿಮ್ಮ ತೋಟಗಳಿಗೆ ಆಹಾರ ಹುಡುಕಿ ಬರುತ್ತೇವೆ. ಆದರೆ ನಮ್ಮ ಮೇಲೆ ನೀವು ವಿದ್ಯುತ್ ಹರಿಸುವ, ಗುಂಡು ಹೊಡೆದು ಕೊಲ್ಲುವ ನೀಚ ಪ್ರವೃತ್ತಿಗೆ ನೀವು ಮುಂದಾಗಿದ್ದೀರಾ..?
ಹಿಂದಿನಿAದಲೂ ನಮ್ಮ ಕಣ್ಣು ತಪ್ಪಿಸಿ ಅರಣ್ಯ ಸಂಪತ್ತನ್ನೆಲ್ಲಾ ಲೂಟಿ ಮಾಡಿ ಇಡೀ ವನ್ಯ ಸಂಕುಲವನ್ನೇ ಉಪವಾಸ ಕೆಡವುವ ಮತ್ತು ನಾಶಮಾಡುವ ನಿಮ್ಮ ಪ್ರಯತ್ನಕ್ಕೆ ಧಿಕ್ಕಾರವಿರಲಿ.
ಸೊಂಪಾಗಿ ಬೆಳೆದು ನಮಗೆಲ್ಲಾ ಆಸರೆಯಾಗಿದ್ದ ಸಸ್ಯರಾಶಿಗೆ ಕೊಡಲಿ ಯನ್ನಿಟ್ಟ ಖದೀಮರು ನೀವು. ನಿಮ್ಮ ಹೊಟ್ಟೆ ತುಂಬಿದರೆ ಸಾಲದು. ನಾಳೆಗೆ ನಿಮಗಲ್ಲ ನಿಮ್ಮ ಪೀಳಿಗೆಗೂ ಒಂದಷ್ಟು ಸಂಪತ್ತು ಕೂಡಿ ಹಾಕ ಬೇಕೆಂದು ಇನ್ನೊಬ್ಬರ ತಲೆ ಒಡೆ ಯುವ ಹಗಲು ದರೋಡೆ ಕೋರರು ನೀವು. ಹಿಂದೆ ಅರಣ್ಯದಲ್ಲಿ ಅದು ಎಂತೆAತಹ ವೃಕ್ಷಗಳಿದ್ದವು? ನಿಮ್ಮ ಸ್ವಾರ್ಥಕ್ಕೆ ಆ ವೃಕ್ಷಗಳನ್ನೆಲ್ಲಾ ಕಡಿದು ಅದರಿಂದಲೂ ಹಣ ಮಾಡಿದ ಹಣಬಾಕರು ನೀವು.
ಸೂಕ್ತ ಜೀವರಕ್ಷಕ ಅರಣ್ಯಗಳ ನಾಶದಿಂದ ಕಾಡಿನಲ್ಲಿ ನಮಗಿಂದು ಮೇವಿಲ್ಲ. ಕುಡಿಯಲು ನೀರೂ ಇಲ್ಲ. ಕನಿಷ್ಟ ನೆರಳೂ ಕೂಡ ಇಲ್ಲದಂತೆ ಅರಣ್ಯವನ್ನು ಮುಗಿಸಿ ಬಟಾಬಯಲು ಮಾಡಿದ ಕೀರ್ತಿ ನಿಮ್ಮದು.
ನೀವು ಮಾತ್ರ ನಾಡಿನಲ್ಲಿ ತೆಂಗು, ಬಾಳೆ, ಕಾಫಿ, ಅಡಿಕೆ, ಏಲಕ್ಕಿ ಮೊದಲಾದವುಗಳನ್ನು ಬೆಳೆಯುತ್ತಿದ್ದರೆ ಅದನ್ನು ನೋಡಿಕೊಂಡು ನಾವು ಸುಮ್ಮನಿರಬೇಕಾ ?
ಜೊತೆಗೆ ಸುವಾಸಿತ ಹಲಸಿನ ಹಣ್ಣಿನ ಕಂಪನ ನಮ್ಮನ್ನು ಬಿಡುತ್ತದೆಯೇ ? ಏನೋ ಹಸಿವು ನೀಗಿಸಲು ನಾಡಿಗೆ ಬರುವ ನಮ್ಮನ್ನು ನೀವು ದೂರುತ್ತೀರಾ..!
ನಮ್ಮನ್ನಾಳುವ ಅರಣ್ಯಾಧಿಕಾರಿ ಗಳ ಹಾಗೂ ಸಿಬ್ಬಂದಿಗಳ ನಿದ್ದೆಯನ್ನು ಹಾಳು ಮಾಡುತ್ತೀರಾ ?
ನಮ್ಮದಾಗಿದ್ದ ಅರಣ್ಯ ಸಂಪತ್ತನ್ನು ನೀವು ದೋಚುವಾಗ ಈ ಮುಂದಾ ಲೋಚನೆ ಆಗೇಕೆ ನಿಮಗಿರಲಿಲ್ಲಾ?ನಮಗೆ ನಮ್ಮ ಹೊಟ್ಟೆ ಹಾಗೂ ಎತ್ತರವನ್ನು ಆಧರಿಸಿ ದಿನವೊಂದಕ್ಕೆ ೧೪೦ ರಿಂದ ೨೫೦ ಕೆ.ಜಿ.ಗಳಷ್ಟು ತೂಕದ ಹುಲ್ಲು, ಸೊಪ್ಪು, ಬಿದಿರು, ಇತ್ಯಾದಿಗಳು ಆಹಾರವಾಗಿ ಬೇಕು. ಹಾಗೆಯೇ ದಾಹ ತಣಿಸಲು ೮೦ ರಿಂದ ೯೦ ಲೀಟರ್ ನಷ್ಟು ನೀರು ಬೇಕು.
ನಮ್ಮ ದಾಹವೇ ಅಂತದ್ದು.
ನೀವೇನಾದರೂ ಅರಣ್ಯ ನಾಶ ಮಾಡುವಾಗ ನಮ್ಮ ಬಗ್ಗೆ ಯೋಚಿಸಿ ದ್ದೀರಾ..?
ನೀವು ಸ್ವಾರ್ಥಿಗಳು. ಧೈರ್ಯ ಮೊದಲೇ ನಿಮಗಿಲ್ಲ. ನಮ್ಮನ್ನು ಕಂಡೊಡನೆ ಕೋವಿ ತೋರಿಸಿ, ಸಿಡಿ ಮದ್ದು ಸಿಡಿಸುತ್ತೀರಾ...
ನಮ್ಮನ್ನಾಳುವ ಅರಣ್ಯಾಧಿಕಾರಿ ಗಳ ಸೇವಕರಾದ ಗಾರ್ಡ್ಗಳನ್ನು ಕರೆಸಿ ಕಾಡಿಗೆ ಓಡಿಸುವ ಪ್ರಯತ್ನ ಮಾಡುತ್ತೀರಲ್ಲ ಏಕೆ?
ನಮ್ಮನ್ನು ಕಂಡೊಡನೆ ಭಯ ನಿಮಗೇಕೆ ?
ನೀವು ನಮ್ಮ ಆವಾಸ ತಾಣ ಕಾಡಿಗೆ ನುಗ್ಗುವಾಗ, ನಮ್ಮ ಆಹಾರ ಬೆಳೆ ನಾಶ ಮಾಡುವಾಗ ನಿಮಗೆ ಭಯವಿರಲಿಲ್ಲ ಏಕೆ ?
ಹಿಂದಿನಿAದಲೂ ನಡೆಸಿಕೊಂಡು ಬಂದ ನಿಮ್ಮ ನೀಚ-ನಿರಂತರ ದಾಳಿ ಯಿಂದಾಗಿ ಇಂದು ಅರಣ್ಯ ನಮ್ಮ ನಿದ್ರೆಗೆ ಮಾತ್ರ ಆಸರೆಯಾಗುವಷ್ಟಿದೆ.
ಅದಕ್ಕೂ ಎಲ್ಲಿ ಸಂಚಕಾರ ತರುತ್ತೀರೋ ಎನ್ನುವ ಭಯ, ಆತಂಕ, ಸಂಶಯ ನಿಮ್ಮ ಮೇಲಿದೆ.
ನಮ್ಮ ವಾಸ ಸ್ಥಳಗಳನ್ನು
ಅತಿಕ್ರಮಿಸಿ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡುತ್ತೀರಿ.
ನಿಮ್ಮ ಜಾನುವಾರುಗಳನ್ನು ನಮ್ಮ ಅರಣ್ಯಕ್ಕೆ ಮೇಯಲು ಬಿಡುತ್ತೀರಿ.
ಇಷ್ಟೆಲ್ಲಾ ಅವಾಂತರಗಳನ್ನು ಮಾಡುವ ನಿಮ್ಮನ್ನು ನಾವು ಸುಮ್ಮನೆ ಬಿಡುತ್ತೇವೆಯಾ ?
ಅದಕ್ಕೆ ರಾತ್ರಿ ಪಾಳಿ ನಡೆಸಿ ನಿಮ್ಮ ಬೆಳೆಗಳನ್ನು ತಿಂದು - ತುಳಿದು ಧ್ವಂಸ ಮಾಡುತ್ತೇವೆ.
ಕೆಲವೊಂದು ಸಲ ಕೆಲವು ಅಮಾಯಕರನ್ನು ತುಳಿದು ಸಾಯಿಸಿ ನಮ್ಮ ನೋವನ್ನು ನಿಮ್ಮಲ್ಲಿ ಪ್ರತಿಭಟಿಸುತ್ತೇವೆ.
ಹೀಗಾಗಿ ಕಾಡಿಗೆ ನೀವು ಲಗ್ಗೆಯಿಡಿ...
ನಾಡಿಗೆ ನಾವು ಕೂಡ ನುಗ್ಗುತ್ತೇವೆ.
ಕ್ರಮೇಣ ಕೊನೆಗೆ ನೀವು ಸಾಯಿರಿ. ನಾವು ಸಾಯುತ್ತೇವೆ. ಕೊನೆಗೊಂದು ದಿವಸ ಇಡೀ ಅರಣ್ಯ, ನಾವು-ನೀವು, ಯಾರೂ ಕೂಡ ಇರದೇ ಪರಿಸರವೂ ಹಾಳಾಗಿ ಮಳೆ ಮತ್ತು ಬೆಳೆಯೂ ಬಾರದಾಗಲೀ... ಅತಿಯಾಸೆಯ ಮಾನವನ ದುರಾಸೆಗೆ ಒಳಗಾಗಿ ನೋವು ಹಾಗೂ ಹಿಂಸೆ ಪಡುವ ಕಾಡಾನೆ ತೋಡಿ ಕೊಳ್ಳುವ ನಿವೇದನೆ ಹೀಗೂ ಇರಬಹು ದಲ್ಲವೇ...