*ಗೋಣಿಕೊಪ್ಪಲು, ಜ. ೨೫: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಗ್ರಾಮದ ಅಯ್ಯಪ್ಪ ದೇವಸ್ಥಾನ ಕಾಂಕ್ರಿಟ್ ರಸ್ತೆಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು. ರೂ. ೧೫ ಲಕ್ಷ ಅನುದಾನದಲ್ಲಿ ಬಾಳುಗೋಡು ಅಯ್ಯಪ್ಪ ದೇವಸ್ಥಾನದ ರಸ್ತೆ ಕಾಮಗಾರಿ ನಡೆದಿದೆ. ಮಳೆಗಾಲ ಸಂದರ್ಭದಲ್ಲಿ ಈ ಭಾಗದ ಜನರಿಗೆ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗುತಿತ್ತು. ಹೀಗಾಗಿ ರಸ್ತೆ ನಿರ್ಮಿಸಿಕೊಕೊಡುವಂತೆ ಜನರು ಬೇಡಿಕೆ ಸಲ್ಲಿಸಿದ್ದರು. ಇದನ್ನು ಪರಿಗಣಿಸಿ ಕಾಂಕ್ರಿಟ್ ರಸ್ತೆ ಮಾಡಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು. ಈ ಸಂದರ್ಭ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕಬ್ಬಚ್ಚೀರ ಮೀನಾ, ನಾಯಡ ಸುವಿನ್ ಬೋಪಣ್ಣ, ಚಂಗೇಟೀರ ರಾಜ ಸೋಮಯ್ಯ, ನವೀನ ಎಂ.ಪಿ. ಇವರುಗಳನ್ನು ಅಭಿನಂದಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಅಪ್ಪಡೇರಂಡ ಭವ್ಯ ಚಿಟ್ಟಿಯಪ್ಪ, ವೀರಾಜಪೇಟೆ ತಾಲೂಕು ಅಕ್ರಮ-ಸಕ್ರಮ ಭೂಸ್ವಾಧೀನ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘ ನಾಣಯ್ಯ, ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಗಣೇಶ್, ಇಂಜಿನಿಯರ್ ಮಹದೇವ್ ಸೇರಿದಂತೆ ಗ್ರಾಮಸ್ಥರು, ಗುತ್ತಿಗೆದಾರರು ಹಾಜರಿದ್ದರು. -ಎನ್.ಎನ್. ದಿನೇಶ್