ಕುಶಾಲನಗರ, ಜ. ೨೫: ಇಲ್ಲಿನ ರೋಟರಿ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯ ಸಹಭಾಗಿತ್ವ ದಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ೩ ದಿನಗಳ ಕಾಲ ವಿಶೇಷಚೇತನ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ‘ಚೈತನ್ಯ’ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ರೋಟರಿ ಅಧ್ಯಕ್ಷ ಕೆ.ಪಿ. ಚಂದ್ರಶೇಖರ್ ವಹಿಸಿ ಮಾತನಾಡಿ ದರು. ೩ ದಿನಗಳ ಶಿಬಿರದಲ್ಲಿ ವಿಶೇಷ ಚೇತನ ಮಕ್ಕಳಿಗೆ ಆಯುರ್ವೇದ ಮಸಾಜ್, ಫಿಸಿಯೋಥೆರಪಿ ಹಾಗೂ ಎಣ್ಣೆ ಸ್ನಾನ ಹಾಗೂ ಪೋಷಕರಿಗೆ ಕೌನ್ಸಿಲಿಂಗ್ ಕಾರ್ಯಕ್ರಮ ನಡೆಸ ಲಾಯಿತು. ಶಿಬಿರ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಅಧಿಕಾರಿ ಗಳಾದ ಬೋರಪ್ಪ, ಹರೀಶ್, ಗುಡ್ಡೆ ಹೊಸೂರಿನ ದಾನಿಗಳಾದ ಸಂತೋಷ್, ಸುರೇಶ್, ಸುನಿತಾ ಇದ್ದರು.