ಸಿದ್ದಾಪುರ, ಜ. ೨೫: ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ, ಮಾಲ್ದಾರೆ, ಕರಡಿಗೋಡು, ಗುಹ್ಯ, ಇಂಜಿಲಗೆರೆ ಭಾಗದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಬೆಳೆದ ಕೃಷಿ ಫಸಲುಗಳು ಸಂಪೂರ್ಣ ನಾಶವಾಗುತ್ತಿದ್ದು, ಆತಂಕದಲ್ಲಿ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ.
ಹಗಲು ರಾತ್ರಿ ವೇಳೆಯಲ್ಲಿ ಮರಿ ಗಳೊಂದಿಗೆ ಗುಂಪಾಗಿ ಕಾಣಿಸಿ ಕೊಳ್ಳುತ್ತಿರುವ ಕಾಡಾನೆಗಳು ರೈತರು ಬೆಳೆದ ಕಾಫಿ, ಕರಿಮೆಣಸು, ಬಾಳೆ, ತೆಂಗು, ಅಡಿಕೆ, ಭತ್ತದ ಕೃಷಿ ಫಸಲು ಗಳು ಕಾಡಾನೆ ನಾಶ ಮಾಡುತ್ತಿವೆ. ವರ್ಷವಿಡಿ ಕಷ್ಟಪಟ್ಟು ದುಡಿದ ಕೃಷಿ ಫಸಲುಗಳು ಕಾಡಾನೆ ಪಾಲಾಗುತ್ತಿ ರುವುದರಿಂದ ರೈತರು ಸಂಕಷ್ಟಕ್ಕೊಳ ಗಾಗಿದ್ದಾರೆ.
ಕಾಡು ಪ್ರಾಣಿಗಳ ಹಾವಳಿ ಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ಯಾವುದೇ ಶಾಶ್ವತ ಯೋಜನೆ ಗಳನ್ನು ರೂಪಿಸದೆ ಕಾಡಾನೆ ಹಾವಳಿ ತಡೆಗಟ್ಟಲು ಮುಂದಾಗದೆ ನಿರ್ಲಕ್ಷಿ ಸುತ್ತಿರುವ ಹಿನ್ನೆಲೆಯಲ್ಲಿ ನಿರಂತರ ಕಾಡು ಪ್ರಾಣಿಗಳ ಹಾವಳಿ ನಡುವೆ ಭಯದ ವಾತಾವರಣದಲ್ಲಿ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ದ್ದಾರೆ.
ಕೃಷಿ ಫಸಲನ್ನೇ ನಂಬಿ ಜೀವನ ನಡೆಸುತ್ತಿರುವ ಅದೆಷ್ಟೋ ರೈತರು ಕಾಡುಪ್ರಾಣಿಗಳ ಹಾವಳಿಯಿಂದ ಹಲವೆಡೆ ಕೃಷಿ ಭೂಮಿಯನ್ನು ಪಾಳು ಬಿಟ್ಟಿದ್ದಾರೆ.
ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷö್ಯದಿಂದ ಕಾಡಾನೆ ಹಾವಳಿ ಯನ್ನು ತಡೆಗಟ್ಟಲು ವಿಫಲರಾಗಿದ್ದು, ಶಾಶ್ವತ ಯೋಜನೆಗಳನ್ನು ರೂಪಿಸಿ ಅರಣ್ಯದಲ್ಲಿ ಪ್ರಾಣಿಗಳ ಬೇಕಾದ ಆಹಾರವನ್ನು ಒದಗಿಸಿ. ರೈತರನ್ನ ಕಾಪಾಡಬೇಕಾಗಿದೆ. ಕಾಡು ಪ್ರಾಣಿಗಳ ದಾಳಿಯಿಂದ ಕೃಷಿ ಫಸಲು ನಾಶವಾದರೆ ಸೌಜನ್ಯಕ್ಕೂ ಭೇಟಿ ನೀಡದ ಅಧಿಕಾರಿಗಳು ಪರಿಹಾರ ನೀಡದೆ ರೈತರನ್ನು ಕಡೆಗಣಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.