*ಗೋಣಿಕೊಪ್ಪ, ಜ. ೨೫: ಪೊನ್ನಂಪೇಟೆ ಮತ್ತು ಬಾಳೆಲೆ ಹೋಬಳಿಯ ೪೨೬ ನಮೂನೆಯಡಿ ಸಲ್ಲಿಕೆಯಾದ ೫೭ರ ಅರ್ಜಿಗಳ ಸರ್ವೆ ಕಾರ್ಯ ಅತೀ ಶೀಘ್ರದಲ್ಲೇ ನಡೆಯಲಿದೆ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ ಮಾಹಿತಿ ನೀಡಿದ್ದಾರೆ. ಪೊನ್ನಂಪೇಟೆ ತಾಲೂಕು ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ನಡೆದ ವೀರಾಜಪೇಟೆ ತಾಲೂಕು ಅಕ್ರಮ ಸಕ್ರಮ ಭೂಸ್ವಾಧೀನ ಸಮಿತಿಯ ಸಾರ್ವಜನಿಕ ಸಭೆಯಲ್ಲಿ ಮಾಹಿತಿ ನೀಡಿದರು.
ಪೊನ್ನಂಪೇಟೆ ಹೋಬಳಿಯ ಬಿ.ಶೆಟ್ಟಿಗೇರಿ, ಕುಟ್ಟಂದಿ, ಕೊಂಗಣದಲ್ಲಿ ೧೨೦, ದೇವರಪುರ, ಹೆಬ್ಬಾಲೆ ಭದ್ರಗೊಳದಲ್ಲಿ ೧೫, ಕಾನೂರು ಗ್ರಾ.ಪಂ. ವ್ಯಾಪ್ತಿಯ ಕಾನೂರು, ನಿಡುಗುಂಬ, ಬೆಕ್ಕೆಸೊಡ್ಲೂರು ೨೧, ಹಾತೂರು,ಕುಂದಾ, ಈಚೂರು ೧೬, ಮಾಯಮುಡಿ, ಬಾಳಾಜಿ ೧೯, ಕಿರುಗೂರು, ಮತ್ತೂರು, ಕೋತೂರು ೦೧, ಹಳ್ಳಿಗಟ್ಟು, ಹುದೂರು ೫, ನೊಖ್ಯ, ಸಿದ್ದಾಪುರ ೩೯, ಅರುವತ್ತೊಕ್ಲು, ಮುಗುಟಗೇರಿ ೫, ಕೈಕೇರಿ, ಅತ್ತೂರು ೭ ಸೇರಿದಂತೆ ಒಟ್ಟು ೨೪೭ ಅರ್ಜಿಗಳು ಸಲ್ಲಿಕೆಯಾಗಿದ್ದು, ೮ ಅರ್ಜಿಗಳು ತಿರಸ್ಕöÈತಗೊಂಡಿದೆ. ಸುಮಾರು ೮೦ ಅರ್ಜಿಗಳು ಸರ್ವೆ ಕಾರ್ಯ ನಡೆದಿದ್ದು, ೧೬೦ ಅರ್ಜಿಗಳು ವಿಲೇವಾರಿಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಬಾಳೆಲೆ ಹೋಬಳಿಯಲ್ಲಿ ಬಾಳೆಲೆ ೧೩, ದೇವನೂರು ೧೧, ನಿಟ್ಟೂರು ಗ್ರಾ.ಪಂ.ಯಲ್ಲಿ ನಿಟ್ಟೂರು ೩೨, ಪೊನ್ನಪ್ಪಸಂತೆ, ಬಿಳೂರು ೬, ನಲ್ಲೂರು ೨, ಮಾಯಮುಡಿ, ಧನುಗಾಲ ೧೬, ರುದ್ರಬೀಡು ೯ ಒಟ್ಟು ೮೯ ಅರ್ಜಿಗಳು ಸರ್ವೆ ಕಾರ್ಯಕ್ಕೆ ಅಣಿಯಾಗಿದೆ ಎಂದು ಮಾಹಿತಿ ನೀಡಿದರು.
ಹಲವು ವರ್ಷಗಳಿಂದ ಪೈಸಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರು ಮತ್ತು ಕೃಷಿ ಸಾಗುವಳಿ ಮಾಡುತ್ತಿರುವವರ ಅರ್ಜಿಗಳನ್ನು ಪುರಸ್ಕರಿಸಿ ಅವರ ಹೆಸರಿನಲ್ಲಿ ಜಾಗವನ್ನು ನೊಂದಾಯಿಸಿ ಕೊಡಲಾಗುವುದು. ಆದರೆ ಗೋಮಾಳಗಳಲ್ಲಿ ಕೃಷಿ ಅಥವಾ ಮನೆಗಳನ್ನು ಕಟ್ಟಿಕೊಂಡಿದ್ದರೆ ನಿರ್ಧಾಕ್ಷಿಣ್ಯವಾಗಿ ತೆರವುಗೊಳಿಸುವ ಕಾರ್ಯ ಕಂದಾಯ ಇಲಾಖೆಯಿಂದ ನಡೆಯಲಿದೆ ಎಂದು ಎಚ್ಚರಿಸಿದರು.
ಅಕ್ರಮ ಸಕ್ರಮ ಭೂಸ್ವಾಧೀನ ಸಮಿತಿ ಅಧ್ಯಕ್ಷೆ ಕಾಡ್ಯಮಾಡ ಗಿರೀಶ್ ಗಣಪತಿ ಮಾತನಾಡಿ ಶಾಸಕರ ಸೂಚನೆಯ ಮೇರೆ ತಾಲೂಕಿನ ಪ್ರತಿ ಹೋಬಳಿಗಳಲ್ಲಿಯೂ ಭೂಸ್ವಾಧೀನ ಸಮಿತಿಯ ಕಾರ್ಯನಿರ್ವಹಣೆಯ ಬಗ್ಗೆ ಮತ್ತು ಜನರ ಸಮಸ್ಯೆಗಳ ಬಗ್ಗೆ ಕಾರ್ಯಾಗಾರವನ್ನು ನಡೆಸ ಲಾಗುವುದು. ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪೈಸಾರಿ ಜಾಗವನ್ನು ಸ್ವಾಧೀನಕ್ಕೆ ಪಡೆದುಕೊಂಡ ಜಾಗಗಳನ್ನು ಮಾಲೀಕರ ಹೆಸರಿಗೆ ನೋಂದಾಯಿಸಲು ಸಲ್ಲಿಸಿದ ಸುಮಾರು ೪೨೬ ಅರ್ಜಿಗಳನ್ನು ಪುರಸ್ಕರಿಸಿ ಸರ್ವೆ ಮಾಡಲಾಗುವುದು ಎಂದು ಹೇಳಿದರು. ಅರ್ಜಿಗಳು ವಿಲೇವಾರಿ ಆಗಲು ಸರ್ವೆ ಕಾರ್ಯದಲ್ಲಿನ ವಿಳಂಬವೇ ಕಾರಣವಾಗುತ್ತಿದೆ. ತಹಶೀಲ್ದಾರರ ಸಮ್ಮುಖದಲ್ಲಿ ಈ ಕಾರ್ಯ ಶೀಘ್ರದಲ್ಲಿ ನಡೆಯಲಿದೆ ಎಂದು ಭರವಸೆ ನೀಡಿದರು.
ಅಕ್ರಮ - ಸಕ್ರಮ ಭೂಸ್ವಾಧೀನ ಸಮಿತಿಯ ಸದಸ್ಯರುಗಳಾದ ಮಾಪಂಗಡ ಯಮುನಾ ಚಂಗಪ್ಪ, ತೀತಿಮಾಡ ಲಾಲಭೀಮಯ್ಯ, ದಿನೇಶ್ ಹೆಚ್.ಕೆ. ಉಪಸ್ಥಿತಿಯಲ್ಲಿ ನೂರಾರು ಅರ್ಜಿದಾರರು ಭೂಸ್ವಾಧೀನ ಸಮಿತಿ ಯಿಂದ ಮಾಹಿತಿಯನ್ನು ಪಡೆದು ಕೊಂಡರು. -ಎನ್.ಎನ್. ದಿನೇಶ್