ಶ್ರೀಮಂಗಲ, ಜ. ೨೫ : ಮುಂದಿನ ರಾಜ್ಯ ಬಜೆಟ್‌ನಲ್ಲಿ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಮತ್ತು ಕಾಫಿ ಕಾಳುಮೆಣಸು ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ಶಾಸನ ಬದ್ಧವಾಗಿ ಪ್ರಕಟಿಸಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ಆಶ್ರಯದಲ್ಲಿ ನಡೆದ ಸಭೆಯ ನಿರ್ಣಯದಂತೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಯ ಪ್ರಮುಖರು ಶಾಸಕ ಕೆ.ಜಿ ಬೋಪಯ್ಯ ಅವರನ್ನು ಪೊನ್ನಂಪೇಟೆಯಲ್ಲಿ ಮತ್ತು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರನ್ನು ಗೋಣಿಕೊಪ್ಪದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.ಈ ಸಂದರ್ಭ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಅವರು ಜಿಲ್ಲೆಯ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದು ಅವರಿಗೆ ಸೂಕ್ತ ನೆರವು ನೀಡಲು ಈಗಾಗಲೇ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಇದರೊಂದಿಗೆ ಬೆಳೆಗಾರರ ನಿಯೋಗವು ನೀಡಿರುವ ಶ್ರೀಮಂಗಲ, ಜ. ೨೫ : ಮುಂದಿನ ರಾಜ್ಯ ಬಜೆಟ್‌ನಲ್ಲಿ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಮತ್ತು ಕಾಫಿ ಕಾಳುಮೆಣಸು ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ಶಾಸನ ಬದ್ಧವಾಗಿ ಪ್ರಕಟಿಸಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ಆಶ್ರಯದಲ್ಲಿ ನಡೆದ ಸಭೆಯ ನಿರ್ಣಯದಂತೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಯ ಪ್ರಮುಖರು ಶಾಸಕ ಕೆ.ಜಿ ಬೋಪಯ್ಯಅವರನ್ನು ಪೊನ್ನಂಪೇಟೆಯಲ್ಲಿ ಮತ್ತು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರನ್ನು ಗೋಣಿಕೊಪ್ಪದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.ಈ ಸಂದರ್ಭ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಅವರು ಜಿಲ್ಲೆಯ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದು ಅವರಿಗೆ ಸೂಕ್ತ ನೆರವು ನೀಡಲು ಈಗಾಗಲೇ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಇದರೊಂದಿಗೆ ಬೆಳೆಗಾರರ ನಿಯೋಗವು ನೀಡಿರುವ ಸೆಳೆಯುವುದಾಗಿ ಭರವಸೆ ನೀಡಿದರು. ಕೊಡಗು ಬೆಳೆಗಾರರÀ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಅವರ ನೇತೃತ್ವದಲ್ಲಿ ಸಲ್ಲಿಸಿರುವ ಮನವಿ ಪತ್ರದಲ್ಲಿ ಬೆಳೆಗಾರರ ಸಂಕಷ್ಟದ ಬಗ್ಗೆ ಗಮನ ಸೆಳೆಯಲಾಗಿದೆ. ಮನವಿ ಯಲ್ಲಿನ ವಿವರ ಈ ಕೆಳಗಿನಂತಿದೆ.
ಬೆಳೆಗಾರರ ಪುನಶ್ಚೇತನಕ್ಕೆ ಬೇಡಿಕೆಗಳು : ೨೫ ವರ್ಷಗಳಿಂದ ನಷ್ಟ ಅನುಭವಿಸುತ್ತಿರುವ ಕೊಡಗಿನ ಕಾಫಿ ಬೆಳೆಗಾರರ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್‌ನ್ನು ತುರ್ತಾಗಿ ಮುಂಬರುವ ಬಜೆಟ್‌ನಲ್ಲಿ ಪ್ರಕಟಿಸಬೇಕು. ಮುಂದೆ ಮಾರುಕಟ್ಟೆ ಕುಸಿತದಿಂದ ನಷ್ಟವಾಗದಂತೆ ತಡೆಯಲು ಕಾಫಿಗೆ ಮತ್ತು ಭತ್ತ ಹಾಗೂ ಕಾಳು ಮೆಣಸಿಗೆ ಬೆಂಬಲ ಬೆಲೆಯನ್ನು ನಿಗದಿಪಡಿಸ ಬೇಕು. ರೋಬಸ್ಟಾ ಚೆರಿ ಕಾಫಿಗೆ ೫೦ ಕೆ.ಜಿ ಗೆ ರೂ. ೫೨೫೦ (ಪ್ರತೀ ಕೆಜಿಗೆ ರೂ. ೧೦೫)ಮತ್ತು ಅರೇಬಿಕಾ ಕಾಫಿಗೆ ರೂ. ೬೨೫೦ (ಪ್ರತೀ ಕೆಜಿಗೆ ರೂ. ೧೨೫)
(ಮೊದಲ ಪುಟದಿಂದ) ನಿಗದಿಪಡಿಸಿ ಪ್ರಸ್ತುತ ಮಾರುಕಟ್ಟೆ ದರ ಮತ್ತು ಬೆಂಬಲ ಬೆಲೆ ನಡುವೆ ಇರುವ ವ್ಯತ್ಯಾಸದ ಹಣವನ್ನು ಸರಕಾರ ಬೆಳೆಗಾರರಿಗೆ ಪಾವತಿಸಬೇಕು.
ಕಾಫಿ ಮತ್ತು ಕಾಳುಮೆಣಸು ಬೆಳೆಗೆ ಉತ್ಪಾದನ ವೆಚ್ಚ ಹೆಚ್ಚಾಗಿರುವು ದರಿಂದ ಮತ್ತು ಪ್ರತಿ ಏಕ್ರೆ ವ್ಯವಸಾಯ ದಲ್ಲಿ ಪ್ರತಿ ವರ್ಷ ೨೫ ರಿಂದ ೩೦ ಸಾವಿರ ನಷ್ಟ ಅನುಭವಿಸುತ್ತಿರು ವುದರಿಂದ ಜಿಲ್ಲೆಯ ಕಾಫಿ ಬೆಳೆಗಾರ ರನ್ನು ‘ಶೂನ್ಯ ಆದಾಯ ಬೆಳೆಗಾರ’ ಎಂದು ಸರಕಾರ ಪರಿಗಣಿಸಿ ವಿಶೇಷ ನೆರವು ನೀಡಬೇಕು. ಕೊಡಗಿನ ಸಾಂಪ್ರದಾಯಿಕ ಭತ್ತದ ಬೆಳೆ ವ್ಯವಸಾ ಯಕ್ಕೆ ಪ್ರತಿ ಎಕ್ರೆಗೆ ೧೮ ಸಾವಿರ ಪ್ರೋತ್ಸಾಹಧನ ನೀಡಬೇಕು. ಜಿಲ್ಲೆಯ ಎಲ್ಲಾ ಬೆಳೆಗಾರರ ಸಾಲ ಮನ್ನಾ ಮಾಡಿ ಯಾವುದೇ ಸಾಲಗಳನ್ನು ಬಲಾತ್ಕಾರವಾಗಿ ವಸೂಲಾತಿ ಮಾಡುವುದನ್ನು ಶಾಶ್ವತವಾಗಿ ನಿಲ್ಲಿಸಬೇಕು. ಎಲ್ಲಾ ಬೆಳೆಗಾರರಿಗೆ ಎಲ್ಲಾ ಬ್ಯಾಂಕ್‌ಗಳ ಮೂಲಕ ರೂ. ೧೦ ಲಕ್ಷದವರೆಗೆ ಶೂನ್ಯ ಬಡ್ಡಿ ಮತ್ತು ರೂ. ೧೦ ಲಕ್ಷ ಮೇಲ್ಪಟ್ಟು ಶೇ. ೩ ರಲ್ಲಿ ಎಲ್ಲಾ ತರದ ಸಾಲ ನೀಡಲು ಕ್ರಮಕೈಗೊಳ್ಳಬೇಕು.
ಕೃಷಿ ಸಾಲ ನೀಡುವ ಸಂದರ್ಭ ಸಿಬಿಲ್ ಮಾನದಂಡವನ್ನು ಹೊರತುಪಡಿಸಬೇಕು. ಕಾಫಿ ಮಂಡಳಿಯಿAದ ಈ ಹಿಂದೆ ನೀಡುತ್ತಿದ್ದ ಎಲ್ಲಾ ಬೆಳೆ ಪ್ರೋತ್ಸಾಹ ಸಹಾಯ ಧನವನ್ನು ಶೇ. ೮೦ ರಷ್ಟು ಹೆಚ್ಚಿಸಿ ಮುಂದುವರೆಸಬೇಕು. ರಸಗೊಬ್ಬರÀ ಸಹಾಯಧನವನ್ನು ಶೇ. ೬೦ ಕ್ಕೆ ಏರಿಸಿ ಸೌಲಭ್ಯ ನೀಡಬೇಕು. ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆ ವಿಮೆಯನ್ನು ಕಾಫಿ ಬೆಳೆಗಾರರಿಗೆ ವಿಸ್ತರಿಸಬೇಕು. ಅದರ ಡ್ರಿಮಿಯಮ್‌ನ್ನು ಕೇಂದ್ರ, ರಾಜ್ಯ ಮತ್ತು ಬೆಳೆಗಾರ ಸಮನಾಂತರವಾಗಿ ಪಾವತಿಸುವಂತಾಗಬೇಕು. ಇದನ್ನು ಗ್ರಾಮ ಮಟ್ಟದಲ್ಲಿ ನಷ್ಟ ಸಮೀಕ್ಷೆ ವ್ಯಾಪ್ತಿಗೆ ತರಬೇಕು. ಜಿಲ್ಲೆಯ ಸಣ್ಣ ಕಾಫಿ ಬೆಳೆಗಾರರನ್ನು ಬಿಪಿಎಲ್ ಪಟ್ಟಿಯ ಸೌಲಭ್ಯಕ್ಕೆ ತರುವ ನಿಟ್ಟಿನಲ್ಲಿ ನೈಜ ಆದಾಯ ದೃಢೀಕರಣ ಪತ್ರವನ್ನು ನೀಡಿ ೪ ಚಕ್ರದ ವಾಹನ ಹೊಂದಿರುವವರಿಗೂ ಈ ಸೌಲಭ್ಯ ನೀಡಲು ಕ್ರಮಕೈಗೊಳ್ಳಬೇಕು.
ಸಹಕಾರ ಸಂಘದಲ್ಲಿ ಯಶಸ್ವಿನಿ ಆರೋಗ್ಯ ವಿಮೆ ಸ್ಥಗಿತವಾಗಿದ್ದು ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರಿಗೆ ವಿಶೇಷ ಆರೋಗ್ಯ ವಿಮೆಯನ್ನು ಜಾರಿಗೆ ತರಬೇಕು. ಕಾಫಿ ಬೆಳೆಗಾರರಿಗೆ ೧೦ ಹೆಚ್‌ಪಿ ವರೆಗೆ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಕಲ್ಪಿಸಬೇಕು. ಎನ್‌ಡಿಆರ್‌ಎಫ್-ಎಸ್‌ಡಿಆರ್‌ಎಫ್ ಬೆಳೆ ನಷ್ಟ ಪರಿಹಾರವನ್ನು ಪರಿಷ್ಕರಿಸಬೇಕು. ಪ್ರತಿ ಹೆಕ್ಟೇರ್‌ಗೆ ಕಾಫಿಗೆ ಕನಿಷ್ಟ ೫೦ ಸಾವಿರ ಮತ್ತು ಕನಿಷ್ಟ ೫ ಹೆಕ್ಟೇರ್‌ಗೆ ಇದನ್ನು ವಿಸ್ತರಿಸಬೇಕು. ವನ್ಯ ಪ್ರಾಣಿಗಳ ಹಾವಳಿ ತಡೆಗೆ ವಿಶೇಷ ಯೋಜನೆಯನ್ನು ರೂಪಿಸಿ ಮುಂದಿನ ಪಂಚವಾರ್ಷಿಕ ಯೋಜನೆಯಡಿ ಜಾರಿಗೆ ತಂದು ಶಾಶ್ವತ ಪರಿಹಾರ ಕಲ್ಪಿಸಬೇಕು. ಉದ್ಯೋಗ ಖಾತ್ರಿ ಯೋಜನೆ ಮೂಲಕ ನೀಡುವ ಕೆಲಸಗಳನ್ನು ಭತ್ತ, ಕಾಫಿ ಕೆಲಸಕ್ಕೆ ಸೇರ್ಪಡೆಗೊಳಿಸುವ ಯೋಜನೆ ಜಾರಿಗೆ ತರಬೇಕು.
ರಾಜ್ಯ ಸರಕಾರ ಕೊಡಗಿನ ಕಾಫಿಯನ್ನು ಜನಪ್ರಿಯಗೊಳಿಸಲು ಬ್ರಾಂಡ್ ಮೂಲಕ ಮಾರಾಟ ಮಾಡಲು ನಿಗಮ ಸ್ಥಾಪಿಸಿ ಬೆಳೆಗಾರರಿಗೆ ಪ್ರೋತ್ಸಾಹ ನೀಡಬೇಕು. ಇದಕ್ಕಾಗಿ ಜಿಲ್ಲೆಯಲ್ಲಿ ಸÀ್ವಸಹಾಯ ಸಂಘ ರಚನೆ ಮಾಡಿ ಉದ್ಯಮ ಮತ್ತು ವ್ಯವಹಾರಕ್ಕೆ ಉತ್ತೇಜನ ನೀಡಬೇಕು. ಜಿಲ್ಲೆಯ ನದಿಗಳಲ್ಲಿ ಬೇಸಿಗೆಯಲ್ಲಿ ನೀರನ್ನು ತಡೆಹಿಡಿದು (ಚೆಕ್ ಡ್ಯಾಂ)ಕಾಫಿ ಹಾಗೂ ಇತರೆ ಬೆಳೆಗಳಿಗೆ ನೀರಾವರಿ ಮಾಡಲು ಯಾವುದೇ ತಡೆ ಮಾಡದೆ ಅವಕಾಶ ನೀಡಬೇಕು. ಕೊಡಗಿನ ಪರಿಸರ ಮತ್ತು ನೀರಿನಿಂದ ಲಾಭ ಪಡೆಯುತ್ತಿರುವ ಪ್ರದೇಶಗಳಿಂದ ಪರಿಸರ ಸಂಬAಧೀ ಸೇವೆಗಳಿಗೆ ಪಾವತಿ ಮಾಡುವ ಯೋಜನೆ ರೂಪಿಸುವಂತೆ ಮನವಿ ಮಾಡಲಾಯಿತು.
ಮನವಿ ಪತ್ರ ಸಲ್ಲಿಸಿದ ಸಂದರ್ಭ ಬೆಳೆಗಾರ ಒಕ್ಕೂಟದ ಪ್ರ.ಕಾರ್ಯದರ್ಶಿ ಅಣ್ಣೀರ ಹರೀಶ್‌ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ತಾಂತ್ರಿಕ ಸಲಹೆಗಾರ ಚೆಪ್ಪುಡೀರ ಶೆರಿಸುಬ್ಬಯ್ಯ, ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ, ಜಿಲ್ಲಾ ಸಾರ್ವಜನಿಕ ಹಿತರಕ್ಷಣ ಸಮಿತಿ ಅಧ್ಯಕ್ಷ ಕಟ್ಟಿಮಂದಯ್ಯ, ಕಾರ್ಯಾಧ್ಯಕ್ಷ ಬಾಚೀರ ಕಾಶಿ ಕಾರ್ಯಪ್ಪ, ಪ್ರ. ಕಾರ್ಯದರ್ಶಿ ಸತೀಶ್ ದೇವಯ್ಯ, ಜಮ್ಮಡ ಗಣೇಶ್ ಅಯ್ಯಣ್ಣ, ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಮಾಣೀರ ಮುತ್ತಪ್ಪ, ಶ್ರೀಮಂಗಲ ಹೋಬಳಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಬಿಜೆಪಿ ಪ್ರಮುಖರಾದ ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಗಿರೀಶ್‌ಗಣಪತಿ, ಬಿಜೆಪಿ ಕೃಷಿ ಮೋರ್ಚಾ ರಾಜ್ಯ ಸದಸ್ಯೆ ಯಮುನಾಚಂಗಪ್ಪ, ಬಿಜೆಪಿ ಉಪಾಧ್ಯಕ್ಷೆ ಊರ್ಮಿಳಾಸೋಮಯ್ಯ, ಕಾರ್ಯ ದರ್ಶಿ ಕಿಲನ್‌ಗಣಪತಿ, ಚೋಡುಮಾಡ ಶ್ಯಾಮ್ ಮತ್ತಿತರರು ಹಾಜರಿದ್ದರು.