ಮಡಿಕೇರಿ, ಜ. ೨೫: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭೂಮಿ ಮತ್ತು ವಸತಿಹಕ್ಕು ವಂಚಿತರ ಹೋರಾಟ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ನಗರದ ಎ.ವಿ. ಶಾಲೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.ಬಾಳುಗೋಡು ನಿರಾಶ್ರಿತರಿಗೆ ತಕ್ಷಣ ಅವರು ಹೋರಾಟ ನಡೆಸುತ್ತಿರುವ ಸ್ಥಳದಲ್ಲೇ ಜಾಗ ಸರ್ವೆ ಕಾರ್ಯ ನಡೆಸಿ ಮನೆ ನಿರ್ಮಿಸಿಕೊಡಬೇಕು. ಹಳ್ಳಿಗಟ್ಟು ಆದಿವಾಸಿ ಕುಟುಂಬಗಳಿಗೆ ಹಕ್ಕು ಪತ್ರ ನೀಡಿ ಮನೆ ನಿರ್ಮಿಸಿಕೊಡಬೇಕು, ಪಾಲೆಮಾಡು ನಿವಾಸಿಗರ ೨ ಎಕರೆ ಸ್ಮಶಾನ ಜಾಗವನ್ನು ತಕ್ಷಣ ಸರಿಪಡಿಸಿಕೊಡಬೇಕು. ಬಲ್ಲಮಾವಟಿ ಮಂಜಾಟು ಕಾಲೋನಿಯ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ದೊರಕಿಸಿಕೊಡಬೇಕು. ಜಿಲ್ಲೆಯ ೩ ತಾಲೂಕುಗಳಲ್ಲಿಯೂ ೯೪ ಸಿ, ೯೪ಸಿಸಿ, ೫೦,೫೩ ಹಾಗೂ ೫೭ರಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಕೂಡಲೇ ಫಲಾನುಭವಿಗಳಗೆ ಮಂಜೂರಾತಿ ನೀಡಿ ದಾಖಲಾತಿ ಒದÀಗಿಸಬೇಕು.ಕೊಡಗಿನ ಎಲ್ಲಾ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಟುಂಬಗಳ ಶವ ಸಂಸ್ಕಾರ ಮಾಡಲು ಸ್ಥಳೀಯವಾಗಿಯೇ ಸರ್ಕಾರಿ ಭೂಮಿ ಮಂಜೂರಾತಿ ಮಾಡಬೇಕು, ಸರ್ಕಾರಿ ಜಾಗ ಇಲ್ಲದಿದ್ದಲ್ಲಿ ಭೂಮಿ ಖರೀದಿಸಿ ಸ್ಮಶಾನ ಜಾಗ ಒದಗಿಸಬೇಕು. ಕೊಡಗು ಜಿಲ್ಲೆಯಲ್ಲಿ ೫ ಎಕರೆಗಿಂತಹೆಚ್ಚಿನ ಭೂ ಹಿಡುವಳಿದಾರರು ಸರಕಾರಿ ಭೂಮಿಯನ್ನು ಒತ್ತುವರಿ ಸಲ್ಲಿಸಿರುವ ಅರ್ಜಿಗಳನ್ನು ಕೂಡಲೇ ಫಲಾನುಭವಿಗಳಗೆ ಮಂಜೂರಾತಿ ನೀಡಿ ದಾಖಲಾತಿ ಒದÀಗಿಸಬೇಕು.

ಕೊಡಗಿನ ಎಲ್ಲಾ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕುಟುಂಬಗಳ ಶವ ಸಂಸ್ಕಾರ ಮಾಡಲು ಸ್ಥಳೀಯವಾಗಿಯೇ ಸರ್ಕಾರಿ ಭೂಮಿ ಮಂಜೂರಾತಿ ಮಾಡಬೇಕು, ಸರ್ಕಾರಿ ಜಾಗ ಇಲ್ಲದಿದ್ದಲ್ಲಿ ಭೂಮಿ ಖರೀದಿಸಿ ಸ್ಮಶಾನ ಜಾಗ ಒದಗಿಸಬೇಕು. ಕೊಡಗು ಜಿಲ್ಲೆಯಲ್ಲಿ ೫ ಎಕರೆಗಿಂತ ಹೆಚ್ಚಿನ ಭೂ ಹಿಡುವಳಿದಾರರು ಸರಕಾರಿ ಭೂಮಿಯನ್ನು ಒತ್ತುವರಿ ಹಾಗೂ ಸಂಸ್ಥೆಗಳಿಗೆ ನೂರಾರು ಎಕರೆ ಜಾಗವನ್ನು ಗುತ್ತಿಗೆ ಆಧಾರದಲ್ಲಿ ಅಥವಾ ಮಾರಾಟ ಮಾಡುವುದನ್ನು ತಡೆ ಹಿಡಿದು ಸರ್ಕಾರಿ ಜಾಗವನ್ನು ಬಡವರ ಕಲ್ಯಾಣಕ್ಕಾಗಿಯೇ ಮೀಸಲಿರಿಸಿ ಅದನ್ನು ಸಮಾಜ ಕಲ್ಯಾಣ ಅಥವಾ ತಾಲೂಕು ಇಓ ಹೆಸರಿನಲ್ಲಿ ಖಾತೆ ಮಾಡಿಸಬೇಕು. ಮಡಿಕೇರಿ

(ಮೊದಲ ಪುಟದಿಂದ) ತಾಲೂಕು ನಾಪೋಕ್ಲು ಚೆರಿಯಪರಂಬು ಗ್ರಾಮದ ಸರ್ವೆ ನಂ. ೩, ೩/೫ರಲ್ಲಿ ೧೩ ಎಕರೆ ೮೬ ಸೆಂಟ್, ೧೬ ಎಕರೆ ೩೧ ಸೆಂಟ್ ಸರ್ಕಾರಿ ಭೂಮಿಯಲ್ಲಿ ಸುಮಾರು ೨೫೦ ರಿಂದ ೩೦೦ ಬಡ ಕುಟುಂಬಗಳು ವಾಸ ಮಾಡಿಕೊಂಡು ಬರುತ್ತಿದ್ದು, ಇಲ್ಲಿಯವರೆಗೂ ಇವರುಗಳಿಗೆ ಮೂಲಭೂತ ಸೌಲಭ್ಯಗಳು ದೊರಕಿಲ್ಲ. ಮತ್ತು ಈಗ ವಾಸವಾಗಿರುವ ಜಾಗವನ್ನು ಖಾಲಿ ಮಾಡಿಸುವ ಪ್ರಯತ್ನವು ನಡೆಯುತ್ತಿದ್ದು, ಕೂಡಲೇ ವಸತಿಯ ಹಕ್ಕು ಪತ್ರ ಹಾಗೂ ಮೂಲಭೂತ ಸೌಕರ್ಯ ಆ ಕುಟುಂಬಗಳಿಗೆ ನೀಡಬೇಕು.

ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ವಾಸಿಸುವ ಎಲ್ಲಾ ಅರಣ್ಯವಾಸಿ ಬುಡಕಟ್ಟು ಕುಟುಂಬಗಳಿಗೂ ೨೦೦೬ರ ಅರಣ್ಯ ಹಕ್ಕು ಕಾಯ್ದೆಯಡಿ ಸಾಮುದಾಯಿಕ ಮತ್ತು ವೈಯಕ್ತಿಕ ಈ ಎರಡೂ ರೀತಿಯ ಹಕ್ಕುಪತ್ರ ಮತ್ತು ಆರ್‌ಟಿಸಿ ಕೊಡಬೇಕು. ಪ್ರೊ. ಮುಜಾ಼ಫರ್ ಅಸಾದಿ ಆಯೋಗದ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ಕೊಡಗು ಜಿಲ್ಲೆಯಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿರುವ ಆದಿವಾಸಿಗಳ ಒಟ್ಟು ಸಮೀಕ್ಷೆಯೇ ನಡೆದಿಲ್ಲ. ಬಹುತೇಕ ಆದಿವಾಸಿಗಳು ಕಾಫಿ ತೋಟಗಳ ‘ಲೈನ್‌ಮನೆ’ಗಳಲ್ಲಿ ಜೀತಕ್ಕೆ ಸರಿಸಮನಾದ ಕೂಲಿಗಳಾಗಿ ಬದುಕುತ್ತಿದ್ದು, ಸಮಗ್ರ ಸಮೀಕ್ಷೆ ನಡೆಸಿ ಪ್ರಾಥಮಿಕ ಅಂಕಿ - ಅಂಶಗಳ ಸಂಗ್ರಹಿಸಿ, ಎಲ್ಲರಿಗೂ ಬೇಸಾಯಕ್ಕೆ ಭೂಮಿ ಮತ್ತಿತರ ಪುನರ್ವಸತಿ ಸೌಲಭ್ಯಗಳನ್ನು ನೀಡಿ ಎಲ್ಲರನ್ನೂ ಲೈನ್‌ಮನೆಗಳಿಂದ ಬಿಡುಗಡೆಗೊಳಿಸಬೇಕು.

ವೀರಾಜಪೇಟೆ ತಾಲೂಕು ನಾತಂಗಾಲದಲ್ಲೂ ೧೦ ವರ್ಷಗಳಿಂದ ಗುಡಿಸಲು ಕಟ್ಟಿಕೊಂಡಿರುವ ೬೩ ಆದಿವಾಸಿ ಕುಟುಂಬಗಳಿಗೆ ನಿವೇಶನ ನೀಡಲು ಭೂಮಿ ಮಂಜೂರಾಗಿದ್ದರೂ, ಅಧಿಕಾರಿಗಳು ನಿವೇಶನ ನೀಡದೆ ವಂಚಿಸುತ್ತಿದ್ದಾರೆ. ಅವರಲ್ಲಿ ೩೩ ಕುಟುಂಬಗಳ ಹೆಸರನ್ನು ಮಾತ್ರ ಪಂಚಾಯಿತಿಯವರು ಇತ್ತೀಚೆಗೆ ತಯಾರಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ. ಎಲ್ಲಾ ಗುಡಿಸಲುಗಳನ್ನೂ ನೆಲಸಮ ಮಾಡಿ, ಈ ೩೩ ಕುಟುಂಬಗಳಿಗೆ ಮಾತ್ರ ತಲಾ ಕೇವಲ ೨.೫ ಸೆಂಟ್ಸ್ ಜಾಗಕೊಡುವುದಾಗಿ ತಿಳಿಸಿದ್ದಾರೆ. ಎಲ್ಲಾ ೬೩ ಕುಟುಂಬಗಳಿಗೂ ತಲಾ ೧೦ ಸೆಂಟ್ಸ್ ನಿವೇಶನ ಕೊಡಬೇಕು. ಮಡಿಕೇರಿಗೆ ಸಮೀಪದ ಗದ್ದಿಗೆಯಲ್ಲಿ ನಲವತ್ತು ವರ್ಷಗಳಿಂದಲೂ ವಾಸವಿರುವ ೨೮ ಕುಟುಂಬದವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದ್ದು, ಅವರೆಲ್ಲರಿಗೂ ಕೂಡಲೇ ಮನೆ - ನಿವೇಶನದ ಹಕ್ಕು ಕೊಡಬೇಕು. ಗದ್ದುಗೆಯ ಒಟ್ಟು ೧೯.೮೬ ಎಕರೆ ಜಾಗವನ್ನು ಹದ್ದು ಭಸ್ತು ಸರ್ವೆ ನಡೆಸಬೇಕು. ಕುಶಾಲನಗರ ಗುಂಡೂರಾವ್ ಬಡಾವಣೆಯಲ್ಲಿ ೩೦ ವರ್ಷದಿಂದ ವಾಸವಿರುವ ೩೦ ಅಲೆಮಾರಿ ಕುಟುಂಬಗಳಿಗೆ ಕಾದಿರಿಸಿಟ್ಟ ಮುಳ್ಳುಸೋಗೆ ಪಂಚಾಯಿತಿ ಸ.ನಂ. ೫/೧ರ ೧ ಎಕರೆ ಜಾಗದಲ್ಲಿ ಅವರಿಗೆ ನಿವೇಶನ ಮಂಜೂರು ಮಾಡಿ ಹಕ್ಕುಪತ್ರ, ಆರ್‌ಟಿಸಿ ನೀಡಬೇಕು. ಕುಶಾಲನಗರ ೩ನೇ ವಾರ್ಡ್ನಲ್ಲಿ ೨೫ ವರ್ಷದಿಂದ ಸರ್ಕಾರಿ ಪೈಸಾರಿಯಲ್ಲಿ ಮನೆ ಕಟ್ಟಿಕೊಂಡಿರುವ ೨೫ ಕುಟುಂಬಗಳಿಗೆ ಕೂಡಲೇ ಹಕ್ಕುಪತ್ರ ಕೊಟ್ಟು, ಅವರನ್ನು ತೆರವುಗೊಳಿಸುವ ಪ್ರಯತ್ನವನ್ನು ಕೈಬಿಡಬೇಕು.

ಮಡಿಕೇರಿ ನಗರ ವ್ಯಾಪ್ತಿಯ ನಿವೇಶನ ರಹಿತರ ಪಟ್ಟಿಯನ್ನು ನಗರಸಭೆ ತಯಾರು ಮಾಡಿದ್ದು, ಕೂಡಲೇ ಅವರಿಗೆ ನಿವೇಶನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಸಲ್ಲಿಸಿ ಒಂದು ತಿಂಗಳ ಒಳಗಾಗಿ ಬೇಡಿಕೆಗಳಿಗೆ ಸ್ಪಂದಿಸುವAತೆ ಮನವಿ ಮಾಡಲಾಯಿತು.

ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಅಮಿನ್ ಮೊಯ್ಸಿನ್, ಎಸ್‌ಡಿಪಿಐನ ಜಿಲ್ಲಾಧ್ಯಕ್ಷ ಮನ್ಸೂರ್, ಜೆಡಿಎಸ್ ಪ್ರಮುಖ ಇಸಾಕ್‌ಖಾನ್, ಸಿಪಿಐಎಂನ ನಿರ್ವಾಣಪ್ಪ, ಕಾಂಗ್ರೆಸ್‌ನ ತೆನ್ನಿರಾ ಮೈನಾ, ವಿ.ಪಿ. ಶಶಿಧರ್ ಮತ್ತಿತರರು ಪಾಲ್ಗೊಂಡಿದ್ದರು.