ಗೋಣಿಕೊಪ್ಪಲು, ಜ. ೨೫: ಎಲ್ಲಿ ನೋಡಿದರೂ ಹಸಿರು ಟವಲ್ ಧರಿಸಿದ ಅನ್ನದಾತರು, ಮುಂಜಾನೆಯ ಕೊರೆಯುವ ಚಳಿಯ ನಡುವೆ ಮಹಿಳೆಯರು, ಮಕ್ಕಳಾದಿಯಾಗಿ ಆಗಮಿಸಿದ ರೈತರು, ರಸ್ತೆಯ ಉದ್ದಕ್ಕೂ ಟ್ರಾಕ್ಟರ್, ಜೀಪು, ಇತರ ವಾಹನದಲ್ಲಿ ರೈತರ ಘೋಷಣೆಗಳು ಎಲ್ಲರಲ್ಲಿಯೂ ಒಂದೇ ಒತ್ತಾಯ ರೈತರು ಬೆಳೆದ ಕಾಫಿ, ಕರಿಮೆಣಸುವಿಗೆ ಎಂ.ಎಸ್.ಪಿ. ಕೊಡಿ ಎಂಬದಾಗಿತ್ತು. ಬೃಹತ್ ಸಂಖ್ಯೆಯಲ್ಲಿ ಇಲ್ಲಿನ ರೈತರು, ಬೆಳೆಗಾರರು, ವಿವಿಧ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು, ಕಾರ್ಮಿಕರು ಒಟ್ಟಾಗಿ ರೈತ ಸಂಘ ಕರೆ ನೀಡಿದ್ದ ವಾಹನ ಜಾಥಾದಲ್ಲಿ ಪಾಲ್ಗೊಳ್ಳುವ ಮೂಲಕ ಕೊಡಗಿನ ರೈತರು ಪ್ರಸ್ತುತ ಪರಿಸ್ಥಿತಿಯಲ್ಲಿ ಎದುರಿಸುತ್ತಿರುವ ಕಷ್ಟವನ್ನು ಸರ್ಕಾರದ ಮುಂದೆ ತರುವ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.ಗಡಿಭಾಗವಾದ ಕುಟ್ಟದಿಂದ ಬೆಂಗಳೂರಿನವರೆಗೆ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ರೈತರ ವಾಹನ ಜಾಥಾಕ್ಕೆ ಕಾಫಿಯ ಊರಾದ ಕುಟ್ಟದಲ್ಲಿ ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಕಾಳಯ್ಯ ಸುಬ್ರಮಣಿ ಹಾಗೂ ಕೊಡವ ಸಮಾಜ ಫೆಡರೇಶನ್ನ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಕರ್ನಲ್ ಕಾಳಯ್ಯ ಕೊಡಗು ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ರೈತ ಸಂಘವು ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೋರಾಟ ರೂಪಿಸಿದೆ ಈ ಹೋರಾಟವನ್ನು ಯಶಸ್ವಿಯಾಗಿ ಪೂರೈಸಲು ರೈತ ಸಂಘದೊAದಿಗೆ ನಾಡಿನ ರೈತರು, ಬೆಳೆಗಾರರು ಪಕ್ಷಬೇಧ ಮರೆತು ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು. ಕೊಡವ ಸಮಾಜ ಫೆೆಡರೇಶನ್ನ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ ಎಲ್ಲರೂ ಹೋರಾಟದಲ್ಲಿ ಕೈ ಜೋಡಿಸಬೇಕೆಂದು ತಿಳಿಸಿದರು.ಜಾಥಾವು ಕುಟ್ಟದಿಂದ ಹೊರಟು ಶ್ರೀಮಂಗಲ ಪಟ್ಟಣ ಪ್ರವೇಶ ಮಾಡಿದ ಸಂದರ್ಭ ಜಿ.ಪಂ.ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಮಾತನಾಡಿ ಮೊದಲು ರೈತರು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ನಂತರವಷ್ಟೇ ರಾಜಕೀಯ. ಇದೀಗ ರೈತರು ಕಷ್ಟದಲ್ಲಿ ಸಿಲುಕಿರುವುದರಿಂದ ಹೋರಾಟವಲ್ಲದೆ ಬೇರೆ ಏನೂ ಮಾರ್ಗವಿಲ್ಲ ಎಂದರು. ಜಾಥಾವು ಟಿ. ಶೆಟ್ಟಿಗೇರಿ, ಹುದಿಕೇರಿ ಮಾರ್ಗವಾಗಿ ಆಗಮಿಸಿದ ಸಂದರ್ಭ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಮಾತನಾಡಿದ (ಮೊದಲ ಪುಟದಿಂದ) ವಕೀಲ ಎಂ.ಟಿ.ಕಾರ್ಯಪ್ಪ ಕಾಫಿ ಕರಿಮೆಣಸು ಬೆಳೆಗೆ ಬೆಂಬಲ ಬೆಲೆ ಸಿಗುವ ತನಕ ಹೋರಾಟ ನಡೆಸಬೇಕು.
ಗೋಣಿಕೊಪ್ಪಲು ಪಟ್ಟಣದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಶಾಂತೆಯAಡ ವೀಣಾ ಅಚ್ಚಯ್ಯ, ಕೊಡಗಿನ ರೈತರ ಬಹುಮುಖ್ಯ ಬೇಡಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಈಡೇರಿಸುವ ಕಾಲ ಸನ್ನಿತವಾಗಿದೆ. ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುವುದಾಗಿ ಭರವಸೆ ನೀಡಿದರು. ಸಿಎನ್ಸಿಯ ಎನ್.ಯು.ನಾಚಪ್ಪ ಯೂಕೋ ಸಂಘಟನೆಯ ಕೊಕ್ಕಲೇರ ಮಂಜು ಚಿಣ್ಣಪ್ಪ, ಕೊಡವ ರೈರ್ಸ್ಕ್ಲಬ್ನ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ಜಾಥಾವನ್ನು ಉದ್ದೇಶಿಸಿ ಮಾತನಾಡಿದರು. ಜಾಥಾವು ತಿತಿಮತಿ ಆನೆಚೌಕೂರು ಮಾರ್ಗವಾಗಿ ಮೈಸೂರು, ಬೆಂಗಳೂರಿಗೆ ತೆರಳಿದವು. ರಸ್ತೆಯ ಉದ್ದಗಲಕ್ಕೂ ನಾಗರಿಕರು, ನಿಂತು ರೈತರ ಜಾಥಾವನ್ನು ವೀಕ್ಷಿಸಿದರು.ರಸ್ತೆಯಲ್ಲಿ ಟ್ರಾಕ್ಟರ್, ಜೀಪುಗಳು, ಇತರ ವಾಹನಗಳು ಕಿ.ಮೀ.ನಷ್ಟು ಸಾಲುಗಟ್ಟಿ ನಿಂತಿದ್ದವು. ಕೆಲವೆಡೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಹೊರತು ಪಡಿಸಿ ಜಾಥಾವು ಸುಗಮವಾಗಿ ಸಾಗಿದವು.
ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕೊಡಗಿನಲ್ಲಿ ಕಳೆದ ಮೂರು ವರ್ಷಗಳಿಂದ ಇಲ್ಲಿನ ರೈತರು ಬೆಳೆದ ಕಾಫಿ, ಕರಿಮೆಣಸು, ಭತ್ತ ಸೇರಿದಂತೆ ಇನ್ನಿತರ ಕೃಷಿ ಉತ್ಪಾದನಾ ವಸ್ತುಗಳಿಗೆ ಬೆಲೆ ಇಲ್ಲದೇ ಕಂಗಾಲಾಗಿದ್ದಾರೆ. ಇದರಿಂದಾಗಿ ಜಿಲ್ಲೆಯ ರೈತರು, ಬೆಳೆಗಾರರು, ಕಾರ್ಮಿಕರು, ವಿವಿಧ ರಾಜಕೀಯ ಪಕ್ಷಗಳು ಜನಪ್ರತಿನಿಧಿಗಳು ಒಟ್ಟಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಶಾಸನಾತ್ಮಕವಾಗಿ, ಕಾನೂನಾತ್ಮಕವಾಗಿ ಕನಿಷ್ಟ ಬೆಂಬಲ ಬೆಲೆಯನ್ನು ಪಡೆಯುವುದೇ, ಜಾಥಾದ ಉದ್ದೇಶವಾಗಿದೆ ಎಂದರು. ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಘೋಷಿಸುವ ಪರಿಹಾರದಲ್ಲಿ ಕೊಡಗು ಜಿಲ್ಲೆಗೆ ಹೆಚ್ಚಿನ ಪಾಲು ದೊರೆಯಬೇಕು ಎಂದರು.
ಜಾಥಾದಲ್ಲಿ ರೈತ ಸಂಘ ದ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಷ್, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಜಿ ಇಟ್ಟಿರ ಸಬಿತಾ ವಿವಿಧ ಹೋಬಳಿಯ ಅಧ್ಯಕ್ಷರಾದ ಚಂಗುಲAಡ ಸೂರಜ್, ಆಲೆಮಾಡ ಮಂಜುನಾಥ್, ಚಟ್ಟಂಗಡ ಕಂಬ ಕಾರ್ಯಪ್ಪ, ಮಂಡೆಪAಡ ಪ್ರವೀಣ್, ಅಪ್ಪಚಂಗಡ ಮೋಟಯ್ಯ, ಕರ್ತಮಾಡ ಸುಜುಪೊನ್ನಪ್ಪ, ಚೊಟ್ಟೆಕಾಳಪಂಡ ಮನು, ಜಗದೀಶ್, ಮರಿಸ್ವಾಮಿ, ತೀತರಮಾಡ ರಾಜ, ಪುಚ್ಚಿಮಾಡ ರಾಯ್ ಮಾದಪ್ಪ, ತೀತಿರ ಮಂದಣ್ಣ, ತಾಲೂಕು ಸಂಚಾಲಕ ಬಾಚಮಾಡ ಭವಿ ಕುಮಾರ್, ಸೇರಿದಂತೆ ವಿವಿಧ ರಾಜಕೀಯ ಮುಖಂಡರಾದ ತೀತಿರ ಧರ್ಮಜ, ಟಾಟೂಮೊಣ್ಣಪ್ಪ, ಕೊಲ್ಲೀರ ಧರ್ಮಜ, ಕೊಲ್ಲೀರ ಗೋಪಿಚಿಣ್ಣಪ್ಪ, ಮುಂತಾದವರು ಭಾಗವಹಿಸಿದ್ದರು.
ಡಿವೈಎಸ್ಪಿ ಜಯಕುಮಾರ್ ಮುಂದಾಳತ್ವದಲ್ಲಿ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್, ಪರಶಿವಮೂರ್ತಿ ಬಂದೋಬಸ್ತ್ ಕಾರ್ಯನಿರ್ವಹಿಸಿದರು. ಸಂಜೆಯ ವೇಳೆ ಆನೆ ಚೌಕೂರಿನಿಂದ ಮೈಸೂರಿನತ್ತ ರೈತರು ತಮ್ಮ ವಾಹನಗಳÀಲ್ಲಿ ಪ್ರಯಾಣ ಬೆಳೆಸಿದರು.
-ಹೆಚ್.ಕೆ.ಜಗದೀಶ್