ಮಡಿಕೇರಿ, ಜ. ೨೩: ಮಡಿಕೇರಿಯ ಕೈಗಾರಿಕಾ ಬಡಾವಣೆ ಯಲ್ಲಿನ ಗಣೇಶ್ ಕ್ಯಾಂಟೀನ್ ಮಾಲೀಕ ಮೈಸೂರು ಮೂಲದ ಪ್ರವೀಣ್ (೩೪) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾ. ೨೨ರ ರಾತ್ರಿ ಕ್ಯಾಂಟೀನ್ ಹಿಂಬದಿಯ ತಮ್ಮ ವಸತಿಯಲ್ಲಿ ‘ವೇಲು’ ಬಳಸಿ ಕಂಬಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಇಂದು ಬೆಳಿಗ್ಗೆ ಕ್ಯಾಂಟೀನ್ಗೆ ಆಗಮಿಸಿದ ಸಿಬ್ಬಂದಿ ಪ್ರವೀಣ್ ಅವರು ಕ್ಯಾಂಟೀನ್ಗೆ ಇನ್ನೂ ಬಾರದ ಕಾರಣ ಹಿಂಬದಿಯ ಅವರ ವಸತಿಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿ ಅಂತಿಮ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ಸಿಬ್ಬಂದಿ ಮಹಜರು ಮಾಡಿದ ಬಳಿಕ ಮೃತದೇಹವನ್ನು ಸಂಬAಧಿಕರಿಗೆ ಹಸ್ತಾಂತರಿಸಲಾಯಿತು.