ಗೋಣಿಕೊಪ್ಪ ವರದಿ, ಜ. ೨೩: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆರಂಭಗೊAಡ ಪಾಲಂದೀರ ಅಪ್ಪಯ್ಯ ಜ್ಞಾಪಕಾರ್ಥ ೩ನೇ ವರ್ಷದ ಮಹಿಳಾ ಹಾಕಿ ಲೀಗ್‌ನಲ್ಲಿ ಪವಿನ್ ಪೊನ್ನಣ್ಣ ಫೌಂಡೇಷನ್ ಗೆಲುವು ಪಡೆದುಕೊಂಡಿದ್ದು, ಎವರ್ ಸ್ಟೋನ್, ಕೋರಲ್ ವಾಟರ್ಸ್ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.

ಶನಿವಾರ ಟೂರ್ನಿಯ ಮೊದಲ ಪಂದ್ಯದಲ್ಲಿ ಪವಿನ್ ಪೊನ್ನಣ್ಣ ಫೌಂಡೇಷನ್ ತಂಡವು ಆಲ್ಚೆಮಿ ಕಾಫಿ ವಿರುದ್ದ ೪-೦ ಗೋಲುಗಳ ಗೆಲುವಿನೊಂದಿಗೆ ಭರ್ಜರಿ ಆರಂಭ ಪಡೆದುಕೊಂಡಿತು. ೧, ೩೨ ಹಾಗೂ ೪೭ನೇ ನಿಮಿಷಗಳಲ್ಲಿ ಶಯಾ ಮೂರು ಗೋಲು ಹೊಡೆದು ಗೆಲುವಿನ ರೂವಾರಿಯಾದರು. ೩೯ನೇ ನಿಮಿಷದಲ್ಲಿ ಆರ್ಯ ೧ ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು. ಆಲ್ಚೆಮಿ ತಂಡ ಅವಕಾಶ ದೊರೆತರೂ ಗೋಲು ದಾಖಲಿಸಲಾಗದೆ ಸೋಲುನುಭವಿಸಿತು.

ದಿನದ ೨ನೇ ಪಂದ್ಯದಲ್ಲಿ ಎವರ್ ಸ್ಟೋನ್ ಕೋರಲ್ ವಾಟರ್ಸ್ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಉಭಯ ತಂಡಗಳು ಉತ್ತಮ ಹೋರಾಟ ನಡೆಸಿದವು. ಎವರ್ ಸ್ಟೋನ್ ಪರ ೨೬ನೇ ನಿಮಿಷದಲ್ಲಿ ದೇಚಮ್ಮ, ಕೋರಲ್ ಪರ ೪೦ನೇ ನಿಮಿಷದಲ್ಲಿ ಶಾಯಿನಾ ತಂಗಮ್ಮ ಗೋಲು ಹೊಡೆದರು.

ಉದ್ಘಾಟನೆ ; ದಾನಿ ಪಾಲಂದೀರ ಪಾರ್ವತಿ ಅಪ್ಪಯ್ಯ ಉದ್ಘಾಟಿಸಿದರು. ಈ ಸಂದರ್ಭ ಹಾಕಿಕೂರ್ಗ್ ಅಧ್ಯಕ್ಷ ಪೈಕೇರ ಇ. ಕಾಳಯ್ಯ, ಉಪಾಧ್ಯಕ್ಷೆ ಯಮುನಾ ಚೆಂಗಪ್ಪ, ಪದ್ಮಶ್ರೀ ಪುರಸ್ಕೃತ ಮೊಳ್ಳೇರ ಗಣೇಶ್, ಹಿರಿಯ ಅಂತರಾಷ್ಟಿçÃಯ ಹಾಕಿ ಆಟಗಾರ ಮಂಡೇಪAಡ ಮೊಣ್ಣಪ್ಪ, ಹಾಕಿ ಕರ್ನಾಟಕ ಸದಸ್ಯ ಕೆ.ಕೆ. ಕೃತಿಕಾ, ಅಂತರಾಷ್ಟಿçÃಯ ಬಾಸ್ಕೆಟ್ ಬಾಲ್ ಆಟಗಾರ್ತಿ ಹರ್ಷಿತಾ ಭಾಗವಹಿಸಿದ್ದರು.