ಮಡಿಕೇರಿ,ಜ.೨೩; ಮಕ್ಕಂದೂರುವಿನ ಯುವಕರ ತಂಡ ಆಯೋಜನೆ ಮಾಡಿರುವ ಮಕ್ಕಂದೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ತಾ.೨೪ರಂದು(ಇAದು) ನಡೆಯಲಿದೆ.

ಮಕ್ಕಂದೂರುವಿನ ನಾಪಂಡ ಕಾಳಪ್ಪ ಅವರ ಆಟದ ಮೈದಾನದಲ್ಲಿ ಪಂದ್ಯಾಟ ನಡೆಯಲಿದ್ದು, ಕೆ.ಆರ್.ಪವನ್ ಮಾಲೀಕತ್ವದ ಹಿಂದೂ ಕ್ರಿಕೆಟ್ ಕ್ಲಬ್, ಮಧು ಮಂದಣ್ಣ ಮಾಲೀಕತ್ವದ ರಾಯಲ್ ಟೈಗರ್ಸ್, ಲಕ್ಕಪ್ಪನ ವಿಜೇತ ಮಾಲೀಕತ್ವದ ಭಜರಂಗಿ ಬಾಯ್ಸ್, ಬಿ.ಬಿ.ಮಹೇಶ್ ಮಾಲೀಕತ್ವದ ಗೋಲ್ಡನ್ ಪ್ಯಾಂಥರ್ಸ್, ನೀಲ್ ಸುವರ್ಣ ಮಾಲೀಕತ್ವದ ಟೈಟನ್ಸ್, ತೀರ್ಥಕುಮಾರ್ ಮಾಲೀಕತ್ವದ ಫೈರ್ ಬಾಯ್ಸ್ ಸೇರಿದಂತೆ ಆರು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಪ್ರಥಮ ಬಹುಮಾನವನ್ನು ಕಾವೇರಿ ಕಾಫಿ ಲಿಂಕ್ಸ್ ನ ಬಿ.ಎನ್.ರಮೇಶ್, ದ್ವಿತೀಯ ಬಹುಮಾನ ಗ್ರಾ.ಪಂ.ಸದಸ್ಯ ಕಟ್ಟೆಮನೆ ಗಣೇಶ್, ತೃತೀಯ ಬಹುಮಾನವನ್ನು ಕಾಪರ್ ಹಿಲ್ಸ್ ರೆಸಾರ್ಟ್ ಹಾಗೂ ಇತರ ವೈಯಕ್ತಿಕ ಬಹುಮಾನಗಳನ್ನು ಲಕ್ಕಪ್ಪನ ಹರೀಶ್, ಪಿ.ಎಂ.ವಸAತ್ ಅವರುಗಳು ಪ್ರಾಯೋಜಿಸಿದ್ದಾರೆ.

ಪಂದ್ಯಾಟ ಬೆಳಿಗ್ಗೆ ೯ ಗಂಟೆಗೆ ಆರಂಭಗೊಳ್ಳಲಿದೆ. ಅದಕ್ಕೂ ಮೊದಲು ಬೆಳಿಗ್ಗೆ ೭ ಗಂಟೆಗೆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.