ಸೋಮವಾರಪೇಟೆ, ಜ. ೨೩: ಬೆಂಗಳೂರಿನಲ್ಲಿ ನಡೆಯುತ್ತಿದ್ದ ರೈತ ಚಳುವಳಿಯಲ್ಲಿ ರಕ್ಷಣೆಯ ಕರ್ತವ್ಯ ನಿª
Àðಹಿಸುತ್ತಿದ್ದ ಮಹಿಳಾ ಪೊಲೀಸ್ ಪೇದೆ ಮೇಲೆ ಶಾಸಕ ಸೌಮ್ಯ ರೆಡ್ಡಿಯವರು ಹಲ್ಲೆ ನಡೆಸಿರುವದು ಖಂಡನೀಯ ಎಂದು ಬಿಜೆಪಿ ಮಹಿಳಾ ಮೋರ್ಚಾ ತಿಳಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶರೀನ್ ಸುಬ್ಬಯ್ಯ, ಸೋಮವಾರಪೇಟೆ ಮಂಡಳ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಕಾರ್ಯದರ್ಶಿ ಹೆಚ್.ಎನ್. ತಂಗಮ್ಮ ಅವರುಗಳು, ಶಾಸಕಿಯ ನಡೆಯನ್ನು ಖಂಡಿಸಿದ್ದಾರೆ.
ಮಹಿಳಾ ಜನಪ್ರತಿನಿಧಿಯಾಗಿದ್ದು, ಮಹಿಳೆಯರ ಪರ ಕಾಳಜಿ ವಹಿಸಬೇಕಿದ್ದ ಶಾಸಕಿ ಸೌಮ್ಯ ರೆಡ್ಡಿಯವರು, ಮಹಿಳಾ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿರುವದು ಅಕ್ಷಮ್ಯ. ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.