ಮಡಿಕೇರಿ, ಜ. ೨೩: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ೧೨೨ನೇ ಜನ್ಮದಿನಾಚರಣೆ, ಪೊಂಗುರಿ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ತಾ. ೨೮ ರಂದು ನಡೆಯಲಿದೆ.
ಅಂದು ಮಧ್ಯಾಹ್ನ ೨ ಗಂಟೆಗೆ ಮಡಿಕೇರಿಯ ಪತ್ರಿಕಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಮಂಡೇಪAಡ ಪಿ. ಅಪ್ಪಚ್ಚು ರಂಜನ್ ವಹಿಸುವರು. ಅತಿಥಿಗಳಾಗಿ ಹಿರಿಯ ಜಾನಪದ ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ, ಫೀ.ಮಾ. ಕಾರ್ಯಪ್ಪ ಜ. ತಿಮ್ಮಯ್ಯ ಫೋರಂ ಅಧ್ಯಕ್ಷ ಕರ್ನಲ್ ಕೆ.ಸಿ. ಸುಬ್ಬಯ್ಯ, ಫೋರಂ ಸಂಚಾಲಕ ಮೇ. ಬಿದ್ದಂಡ ಎ. ನಂಜಪ್ಪ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ದಿ. ಡಾ. ಐಚೆಟ್ಟಿರ ಮಾ. ಮುತ್ತಣ್ಣ ಬರೆದಿರುವ, ಮೊಣ್ಣಂಡ ಶೋಭಾ ಸುಬ್ಬಯ್ಯ ತರ್ಜುಮೆ ಮಾಡಿರುವ ಜನರಲ್ ಕಾರ್ಯಪ್ಪ ಎಂಬ ಪುಸ್ತಕ ಹಾಗೂ ಪೊಂಗುರಿ ತ್ರೆöÊಮಾಸಿಕ ಸಂಚಿಕೆ ಬಿಡುಗಡೆ ಮಾಡಲಾಗುವದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.