ಮುಳ್ಳೂರು, ಜ. ೨೩ : ಎಸ್‌ಕೆಎಸ್‌ಎಸ್‌ಎಫ್ ಕೇಂದ್ರ ಸಮಿತಿಯ ನಿರ್ದೇಶನದಂತೆ ‘ಅಸ್ತಿತ್ವ, ಹಕ್ಕು ಯುವ ಜನತೆ ಮರಳಿ ಪಡೆಯುತ್ತಿದೆ’ ಶೀರ್ಷಿಕೆಯಡಿ ಕೊಡ್ಲಿಪೇಟೆ ಎಸ್‌ಕೆಎಸ್‌ಎಸ್‌ಎಫ್ ಶಾಖೆ ವತಿಯಿಂದ ತಾ. ೨೬ ರಂದು ಕೊಡ್ಲಿಪೇಟೆಯಲ್ಲಿ ಮಾನವ ಸರಪಳಿ ಮತ್ತು ಸೌಹಾದÀð ಸಮೇಳನ ಮುಳ್ಳೂರು, ಜ. ೨೩ : ಎಸ್‌ಕೆಎಸ್‌ಎಸ್‌ಎಫ್ ಕೇಂದ್ರ ಸಮಿತಿಯ ನಿರ್ದೇಶನದಂತೆ ‘ಅಸ್ತಿತ್ವ, ಹಕ್ಕು ಯುವ ಜನತೆ ಮರಳಿ ಪಡೆಯುತ್ತಿದೆ’ ಶೀರ್ಷಿಕೆಯಡಿ ಕೊಡ್ಲಿಪೇಟೆ ಎಸ್‌ಕೆಎಸ್‌ಎಸ್‌ಎಫ್ ಶಾಖೆ ವತಿಯಿಂದ ತಾ. ೨೬ ರಂದು ಕೊಡ್ಲಿಪೇಟೆಯಲ್ಲಿ ಮಾನವ ಸರಪಳಿ ಮತ್ತು ಸೌಹಾದÀð ಸಮೇಳನ ಮಾನವ ಸರಪಳಿ ಮತ್ತು ಸೌಹಾರ್ದ ಸಮ್ಮೇಳನವನ್ನು ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾ ಸಮಿತಿ ಅಧ್ಯಕ್ಷ ಎಂ. ತಮ್ಲಿಕ್ ದಾರಿಮಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಪ ಖಾಝೀ ಎಂ.ಎA.ಅಬ್ದುಲಾ ಪೈಝಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಸಮಿತಿ ಕೋಶಾಧಿಕಾರಿ ಸಿದ್ದಿಕ್ ಹಾಜಿ ಪ್ರತಿಜ್ಞಾ ವಿಧಿ ಭೋದನೆ ಮಾಡಲಿದ್ದಾರೆ. ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆ ಶಿಕ್ಷಕ ಕೆ.ಪಿ. ಜಯಕುಮಾರ್ ಮುಖ್ಯ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಕೊಡ್ಲಿಪೇಟೆ ಇಬ್ರಾಹಿಂ ಮಾಸ್ತರ್ ಉಪನ್ಯಾಸ ನೀಡಲಿದ್ದು ಶನಿವಾರಸಂತೆ ಪಿಎಸ್‌ಐ ದೇವರಾಜ್, ಕೊಡ್ಲಿಪೇಟೆ ಕರವೇ ಕಾರ್ಯದರ್ಶಿ ವೇಧಕುಮಾರ್ ಎಸ್‌ಕೆಎಸ್‌ಎಸ್‌ಎಫ್ ವಿವಿಧ ಜಿಲ್ಲಾ ಸಮಿತಿ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಅಬೂಬಕರ್ ಸಿದ್ದಿಕಿ ಹಾಜಿ, ಸಿದ್ದೀಕ್ ವಾಫಿ ಹೋಸತೋಟ, ಅಬ್ದುಲ್ ರೆಹಮಾನ್, ರಜಾಕ್ ಪೈಝಿ ಶನಿವಾರಸಂತೆ, ಝಹೀರ್ ನಿಜಾಮಿ ಕೊಡ್ಲಿಪೇಟೆ ಮುಂತಾದವರಿದ್ದರು.