ವೀರಾಜಪೇಟೆ, ಜ.೨೩: ಕೇರಳ ರಾಜ್ಯದ ಲಾಟರಿ ಚೀಟಿಗಳ ಕೊನೆ ಅಂಕಿಯ ಮೇಲೆ ಬಾಜಿ ಕಟ್ಟಿ ಜೂಜಿನಲ್ಲಿ ತೊಡಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಇಂಡಿಯನ್ ಬ್ಯಾಂಕ್ ಹಿಂಭಾಗದ ನಿವಾಸಿ ಹಣ್ಣು ವ್ಯಾಪಾರಿ ಅಂತೋಣಿ (೪೦), ಮಣಿ ಪಾಲಕ್ಕಾಡ್ (೪೯), ತೆಲುಗರ ಬೀದಿ ನಿವಾಸಿ ತರಕಾರಿ ವ್ಯಾಪಾರಿ ಟಿ.ಎನ್ ಪ್ರಕಾಶ್ (೪೩), ಸುಣ್ಣದ ಬೀದಿಯ ನಿವಾಸಿ ಪ್ಲಾಸ್ಟಿಕ್ ವ್ಯಾಪಾರಿ ಸಮೀರ್ (೪೨) ಮತ್ತು ಪೆರುಂಬಾಡಿ ಗ್ರಾಮದ ನಿವಾಸಿ ಪಿಗ್ಮಿ ಸಂಗ್ರಾಹಕ ಮಣಿಕಂಠ (೩೭) ಬಂಧಿತ ಆರೋಪಿಗಳು. ಬಂಧಿತರಿAದ ೭,೭೦೦ ನಗದು ಸೇರಿದಂತೆ ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡಿವೈಎಸ್ಪಿ ಸಿ.ಟಿ ಜಯಕುಮಾರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಶ್ರೀಧರ್ ನೇತೃತ್ವದಲ್ಲಿ ವೀರಾಜಪೇಟೆ ನಗರ ಉಪ ನಿರೀಕ್ಷಕ ಜಗದೀಶ್ ಧೂಳ ಶೆಟ್ಟಿ, ಅಪರಾಧ ವಿಭಾಗದ ಉಪ ನಿರೀಕ್ಷಕ ಹೆಚ್.ಎಸ್. ಬೋಜಪ್ಪ, ಸಿಬ್ಬಂದಿಗಳಾದ ಗಿರೀಶ್, ಮುಸ್ತಾಫ, ಮಧು ಟಿ.ಟಿ. ಮತ್ತು ಚಾಲಕ ಪೂವಯ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.