ವೀರಾಜಪೇಟೆ, ಜ. ೨೩: ವೀರಾಜಪೇಟೆ ನಗರದ ಮೊಗರಗಲ್ಲಿಯ ಯೂತ್ ಫ್ರೆಂಡ್ಸ್ ಕ್ರೀಡಾ ಸಂಸ್ಥೆಯು ತನ್ನ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ ಎಂ.ಪಿ.ಎಲ್. ಕ್ರಿಕೆಟ್ ಪಂದ್ಯಾಟಕ್ಕೆ ನಗರದ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಸಂತ ಅನ್ನಮ್ಮ ದೇವಾಲಯದ ಧರ್ಮಗುರು ರೇ.ಫಾ. ಮದುಲೈಮುತ್ತು ಅವರು ಪರಿವಾಳಗಳನ್ನು ಹಾರಿ ಬಿಡುವ ಮೂಲಕ ಕ್ರೀಡಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾ ಸ್ಫೂರ್ತಿಯೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.
ಉದ್ಯಮಿ ಸಿ.ಎ. ನಾಸಿರ್ ಮಾತನಾಡಿ, ಕ್ರೀಡೆಯು ಒಂದು ಜಾತಿ ಧರ್ಮಕ್ಕೆ ಸೀಮಿತವಾಗದೇ ಎಲ್ಲಾ ಧರ್ಮವನ್ನು ಒಂದುಗೂಡಿಸುವ ವೇದಿಕೆಯಾಗಿದೆ ಎಂದರು.
ಮೊಗರಗಲ್ಲಿಯಿAದ ಗೋಣಿಕೊಪ್ಪಲು ರಸ್ತೆಗಾಗಿ ಸಂತ ಅನ್ನಮ್ಮ ಕ್ರೀಡಾಂಗಣದವರೆಗೆ ಜಾಥಾ ನಡೆಯಿತು.
ಪ್ರಥಮ ಪಂದ್ಯಾಟವು ಪ.ಪಂ. ಸದಸ್ಯರು ಮತ್ತು ಆಯೋಜಕರ ನಡುವೆ ನಡೆದು ಆಯೋಜಕರ ತಂಡವು ಜಯಗಳಿಸಿತು.
ಚಾಲೆಂಜಿAಗ್ ವಾರಿರ‍್ಸ್, ಟೀಮ್ ರೈರ‍್ಸ್, ರಾಯಲ್ ರಜತಾದ್ರೀಸ್, ಟೀಮ್ ಲೇಂಪ್ರೀಡ್, ಯೂನಿರ‍್ಸ್ಲ್ ಬಾಯ್ಸ್, ಲಿತೀನ್ ಕ್ರಿಕೆರ‍್ಸ್, ಚಾಲೆಂರ‍್ಸ್, ಮನ್ನಾ ಸೂಪರ್ ಕಿಂಗ್ಸ್ ಸೇರಿದಂತೆ ಒಟ್ಟು ಎಂಟು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸುತ್ತಿದ್ದು, ೮ ಒವರ್‌ಗಳಿಗೆ ಸೀಮಿತವಾಗಿದೆ.
ತಾ. ೨೪ರಂದು ಅಂತಿಮ ಪಂದ್ಯಾಟಗಳು ನಡೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮದ ವೇದಿಕೆಯಲ್ಲಿ ಉದ್ಯಮಿ ಎಜಾಜ್ ಅಹಮ್ಮದ್, ಗಿರೀಶ್ ಪಿ. ಆಯೋಜಕರಾದ ರವೂಫ್, ರಿಹಾನ್, ಮೊಹಿಸಿನ್, ಫೈಜಲ್ ಜೀಯಾ ಇಂತಿಯಾಜ್, ಇಮ್ರಾನ್, ಜುನೈದ್ ಮತ್ತಿತರರು ಇದ್ದರು.