ಕುಶಾಲನಗರ, ಜ. ೨೩: ಕುಶಾಲನಗರದಲ್ಲಿ ತಾ.೨೪ ರಂದು (ಇಂದು) ೩ನೇ ವರ್ಷದ ಸಂಕ್ರಾAತಿ ಸಂಭ್ರಮ ಜನಪದ ಗ್ರಾಮೀಣ ಮತ್ತು ಹೊಸ ಆಟಗಳ ಸಮಾಗಮ ನಡೆಯಲಿದೆ. ಸಂಕ್ರಾAತಿ ಸಂಭ್ರಮ ಆಚರಣಾ ಸಮಿತಿ ಆಶ್ರಯದಲ್ಲಿ ಸ್ಥಳೀಯ ಜಿಎಂಪಿ ಶಾಲಾ ಮೈದಾನದಲ್ಲಿ ಬೆಳಗ್ಗೆ ೯ ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ ೧ ರಿಂದ ಪುರುಷರಿಗೆ ಮತ್ತು ಮಹಿಳೆಯರಿಗೆ ಹಲವು ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ೪ ಗಂಟೆಗೆ ಕ್ರೀಡೆಗಳು ಮುಕ್ತಾಯವಾಗಲಿದ್ದು ವೇದಿಕೆ ಕಾರ್ಯಕ್ರಮವನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಉದ್ಘಾಟಿಸುವರು.
ಬಿಜೆಪಿ ನಗರಾಧ್ಯಕ್ಷ ವಿ.ಎನ್.ಉಮಾಶಂಕರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಪಂ ಅಧ್ಯಕ್ಷ ಬಿ.ಜೈವರ್ದನ್, ಬಿಜೆಪಿ ಪ್ರಮುಖರಾದ ಬಿ.ಬಿ.ಭಾರತೀಶ್, ಚಲನಚಿತ್ರ ನಟರಾದ ಜಯರಾಂ ಕಾರ್ತಿಕ್, ಕಾವ್ಯಶಾಸ್ತಿç ಪಾಲ್ಗೊಳ್ಳಲಿದ್ದಾರೆ.
* ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದಿಂದ ಡಾ.ಪ್ರಕಾಶ್ ಬಡುವನಹಳ್ಳಿ ನುಡಿನಮನ ಕಾರ್ಯಕ್ರಮ ಇಂದು ಕುಶಾಲನಗರದಲ್ಲಿ ನಡೆಯಲಿದೆ. ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಬೆಳಗ್ಗೆ ೧೦ ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಉದ್ಘಾಟಿಸುವರು. ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಜೆ.ಸೋಮಣ್ಣ, ವಿಮರ್ಶಕ ರೆಹಮತ್ ತರೀಕೆರೆ, ರಾಜಪ್ಪ ದಳವಾಯಿ, ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಪಾಲ್ಗೊಳ್ಳುವರು.