ಕುಶಾಲನಗರ, ಜ. ೨೩: ರೈತ ವಿರೋಧಿ ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ, ಬೆಲೆ ಏರಿಕೆ ಖಂಡಿಸಿ ಮತ್ತು ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭmನೆ ಬೆಂಬಲಿಸಿ ಕೊಡಗು ಜಿಲ್ಲಾ ಪ್ರಗತಿಪರ ಜನಾಂದೋಲನ ವೇದಿಕೆ ಆಶ್ರಯದಲ್ಲಿ ಕುಶಾಲನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ವೇದಿಕೆ ಸಂಚಾಲಕ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಕುಶಾಲನಗರದ ಪ್ರವಾಸಿ ಮಂದಿರದಿAದ ಆರಂಭಗೊAಡ ಪ್ರತಿಭಟನಾ ಮೆರವಣಿಗೆ ಪಟ್ಟಣದ ಮೂಲಕ ಸಾಗಿತು. ಕೇಂದ್ರ ಸರಕಾರದ ಬೆಲೆ ಏರಿಕೆ, ರೈತ ವಿರೋಧಿ ಕಾಯ್ದೆಗಳ ಅನುಷ್ಠಾನ ವಿರುದ್ಧ ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸಿದರು. ನಂತರ ಫೀಲ್ಡ್ ಮಾರ್ಷಲ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಮೋದಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ರಥಬೀದಿ ಮೂಲಕ ನಾಡಕಚೇರಿಗೆ ತೆರಳಿದ ಪ್ರತಿಭಟನಾಕಾರರು ರೈತ ವಿರೋಧಿ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಕಂದಾಯ ಅಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ವಿ.ಪಿ.ಶಶಿಧರ್, ನರೇಂದ್ರ ಮೋದಿ ಸರಕಾರ ದೇಶದ ಆರ್ಥಿಕ ಸ್ಥಿತಿಯನ್ನು ಹದಗೆಡಿಸುತ್ತಿದೆ. ಜನಸಾಮಾನ್ಯರು, ಬಡವರು, ರೈತ ವಿರೋಧ ಕಾಯ್ದೆಗಳನ್ನು ರೂಪಿಸಿ ಅಂಬಾನಿ ಮತ್ತು ಅದಾನಿ ಒಡೆತನದ ಸಂಸ್ಥೆಗಳಿಗೆ ಅನುಕೂಲ ಒದಗಿಸುತ್ತಿದೆ. ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ಕಳೆದೆರೆಡು ತಿಂಗಳಿನಿAದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕಿಂಚಿತ್ತೂ ಮನ್ನಣೆ ನೀಡಿಲ್ಲ. ಹೋರಾಟದಲ್ಲಿ ಹಲವು ರೈತರು ಮೃತಪಟ್ಟರೂ ಕೂಡ ಮೋದಿ ಜನಸೇವಕನೆಂಬುದು ಮರೆತು ನಿರಂಕುಶವಾದಿಯAತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೆ ರೈತರ ಹೋರಾಟಕ್ಕೆ ಸ್ಪಂದಿಸಿ ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದರೊಂದಿಗೆ ಕೃಷಿ ಮಸೂದೆ ಹಿಂಪಡೆದುಕೊಳ್ಳಬೇಕಿದೆ ಎಂದು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಸಮಾನ ಮನಸ್ಕರ ಒಡಗೂಡಿ ರೈತ ವಿರೋಧಿ ಕಾಯ್ದೆ ವಿರುದ್ದ ಹಾಗೂ ಜಿಲ್ಲೆಯ ರೈತರು, ಆದಿವಾಸಿಗಳ ಸಮಸ್ಯೆಗಳ ಪರ ಧ್ವನಿ ಎತ್ತಲಾಗುವುದು ಎಂದು ಶಶಿಧರ್ ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಲತೀಫ್, ಜನಪ್ರತಿನಿಧಿಗಳಾದ ಫಿಲೋಮಿನಾ, ಎಂ.ಡಿ.ರಮೇಶ್, ಕುಂಞಕುಟ್ಟಿ, ವೇದಿಕೆ ಪ್ರಮುಖರಾದ ಇಸಾಖ್ ಖಾನ್, ಸಿ.ಎಲ್.ವಿಶ್ವ, ಮಂಜುನಾಥ್ ಗುಂಡುರಾವ್, ಜೋಸೆಫ್ ವಿಕ್ಟರ್ ಸೋನ್ಸ್, ರಾಯ್ ಡೇವಿಡ್, ಕೆ.ಎನ್.ಅಶೋಕ್, ರಾಮಚಂದ್ರ, ಕೆ.ಬಿ.ರಾಜು, ಅನಿತಾ, ರಾಜೇಶ್ ಮತ್ತಿತರರು ಇದ್ದರು.