ಗೋಣಿಕೊಪ್ಪ ವರದಿ, ಜ. ೨೩: ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಅಂಗವಾಗಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಮಹಿಳಾ ಘಟಕದ ವತಿಯಿಂದ ಹೆಗ್ಗಳ ಸ್ನೇಹ ಭವನ ಆಶ್ರಮಕ್ಕೆ ದಾಸೋಹ ವಸ್ತುಗಳನ್ನು ನೀಡಲಾಯಿತು.

ಅಕ್ಕಿ, ತರಕಾರಿ, ಹಣ್ಣುಗಳನ್ನು ಅಲ್ಲಿನ ನಿವಾಸಿಗಳಿಗೆ ಅನುಕೂಲವಾಗುವಂತೆ ಆಹಾರ ಪದಾರ್ಥಗಳ ವಿತರಣೆ ಮಾಡಲಾಯಿತು. ಈ ಸಂದರ್ಭ ಘಟಕದ ಅಧ್ಯಕ್ಷೆ ಜೆ.ಎಂ. ಅರ್ಪಿತಾ, ಪ್ರಧಾನ ಕಾರ್ಯದರ್ಶಿ ಜೆ.ಎನ್. ಶೋಭಾರಾಣಿ, ಸದಸ್ಯರಾದ ಹೇಮ, ಜ್ಯೋತಿ, ಯಶೋಧ, ನೇತ್ರಾವತಿ, ಸರೋಜ, ಹೆಗ್ಗಳ ಸ್ನೇಹ ಭವನ ಆಶ್ರಮದ ವ್ಯವಸ್ಥಾಪಕ ವೇಣು ಇದ್ದರು.