ಮಡಿಕೇರಿ, ಜ. ೨೩: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಳ್ಳಲಾಗಿರುವ ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಸಾಹಿತಿ ಮಂಡೇಪAಡ ಗೀತಾ ಮಂದಣ್ಣ ಅವರಿಗೆ ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ಅಮ್ಮತ್ತಿ ಬಳಿಯ ಬಿಳಗುಂದ-ಮುAಡೋಣಿಯಲ್ಲಿರುವ ಗೀತಾ ಅವರ ಮನೆಗೆ ಕಸಾಪ ಪದಾಧಿಕಾರಿಗಳು ತೆರಳಿ ಫಲ ತಾಂಬೂಲ, ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಗೀತಾ ಅವರ ಪತಿ ಮಂದಣ್ಣ, ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಜಿಲ್ಲಾ ನಿರ್ದೇಶಕರುಗಳಾದ ಧನಂಜಯ, ತಳೂರು ಉಷಾರಾಣಿ, ಡಿ.ಹೆಚ್. ಪುಷ್ಪ, ಶ್ವೇತಾ ಇದ್ದರು.