ಶ್ರೀಮಂಗಲ, ಜ. ೨೩: ಕಳೆದ ಎರಡೂವರೆ ದಶಕದಿಂದ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರ ಉಳಿವಿಗೆ ಮುಂಬರುವ ರಾಜ್ಯ ಮತ್ತು ಕೇಂದ್ರ ಬಜೆಟ್‌ನಲ್ಲಿ ಪ್ರತ್ಯೇಕ ಪ್ಯಾಕೇಜ್ ರೂಪಿಸಿ ಜಾರಿಗೆ ತರುವುದು ಜನಪ್ರತಿನಿಧಿಗಳ ಹೊಣೆಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು ಮತ್ತು ಸಂಸದರು ಕಾಫಿ ಬೆಳೆಗಾರರ ಸಮಸ್ಯೆಯನ್ನು ತಮ್ಮ ಹೆಗಲ ಮೇಲಿಟ್ಟು ಕೊಂಡು ಬೆಳೆಗಾರರ ಪರವಾಗಿ ಸರಕಾರದೊಂದಿಗೆ ಪ್ರಾಮಾಣಿಕವಾಗಿ ವ್ಯವಹರಿಸಿದಾಗ ಮಾತ್ರ ಇದು ಸಾಧ್ಯವಿದೆ. ಆದ್ದರಿಂದ ಜನಪ್ರತಿನಿಧಿಗಳ ನೇತೃತ್ವದಲ್ಲಿಯೇ ತುರ್ತಾಗಿ ಕಾಫಿ ಬೆಳೆಗಾರರಿಗೆ ವಿಶೇಷ ಯೋಜನೆ ರೂಪಿಸಲು ಮುಂದಾಗಬೇಕೆAದು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಗಿದೆ. ಗೋಣಿಕೊಪ್ಪ ದಿ ಸ್ಪೆöÊಸ್ ರಾಕ್ ಹೊಟೇಲ್ ಸಭಾಂಗಣದಲ್ಲಿ ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತಾ. ೨೫ ರಂದು ಜಿಲ್ಲೆಯ ಶಾಸಕರುಗಳನ್ನು ಭೇಟಿ ಮಾಡಿ ಮುಂಬರುವ ಬಜೆಟ್‌ನಲ್ಲಿ ಕಾಫಿ ಬೆಳೆಗಾರರ ಚೇತರಿಕೆಗೆ ತುರ್ತಾಗಿ ವಿಶೇಷ ಪ್ಯಾಕೇಜ್ ಪ್ರಕಟಿಸುವ ನಿಟ್ಟಿನಲ್ಲಿ ಜವಾಬ್ದಾರಿಕೆ ವಹಿಸಿಕೊಂಡು ಬೆಳೆಗಾರರ ಹಿತಕಾಪಾಡುವಂತೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿರುವುದರಿಂದ ಶಾಸಕರು ಮತ್ತು ಸಂಸದರು ಆಡಳಿತ ಪಕ್ಷದವರಾಗಿರುವುದರಿಂದ ಜಿಲ್ಲೆಯ ಬೆಳೆಗಾರರಿಗೆ ವಿಶೇಷ ಯೋಜನೆ ತರುವುದು ಕಷ್ಟವಾಗುವುದಿಲ್ಲ. ಆದ್ದರಿಂದ (ಮೊದಲ ಪುಟದಿಂದ) ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಲು ಇಂದಿನ ಸಭೆಯಲ್ಲಿ ಸರ್ವಸಮ್ಮತ ಅಭಿಪ್ರಾಯ ವ್ಯಕ್ತವಾಯಿತು. ಹಿಂದೆ ಇದ್ದ ಮಾರುಕಟ್ಟೆ ದರವನ್ನೇ ಕಾಫಿ ಬೆಳೆಗಾರರು ಪ್ರಸ್ತುತ ಪಡೆಯುತ್ತಿದ್ದು ಉತ್ಪಾದನಾ ವೆಚ್ಚ ಅತಿ ಹೆಚ್ಚಾಗಿದ್ದು, ಇದರ ನಡುವೆ ನಿರಂತರ ಪ್ರಾಕೃತಿಕ ವಿಕೋಪ, ಅತಿವೃಷ್ಠಿ-ಅನಾವೃಷ್ಠಿ, ವನ್ಯಪ್ರಾಣಿಗಳ ಹಾವಳಿ, ಫಸಲು ಕುಂಠಿತ, ಕಾರ್ಮಿಕರ ಅಭಾವ ಸೇರಿದಂತೆ ಹಲವು ಸಮಸ್ಯೆಯಿಂದ ದುಸ್ಥಿತಿಗೆ ತಲುಪಿರುವ ಕಾಫಿ ಬೆಳೆಗಾರರ ರಕ್ಷಣೆಗೆ ಮುಂಬರುವ ಬಜೆಟ್‌ನಲ್ಲಿ ವೈಜ್ಞಾನಿಕ ಬೆಂಬಲ ಬೆಲೆಯೊಂದಿಗೆ ವಿಶೇಷ ಪ್ಯಾಕೆಜ್ ರೂಪಿಸಲು ಜಿಲ್ಲೆಯ ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು. ಇದಕ್ಕಾಗಿ ಜಿಲ್ಲೆಯ ಶಾಸÀಕರನ್ನು ಭೇಟಿ ಮಾಡಿ ಬೆಳೆಗಾರರ ಸಂಘಟನೆಗಳಿAದ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

ಕಳೆದ ೨೫ ವರ್ಷದ ಹಿಂದೆ ರೋಬಸ್ಟಾ ಕಾಫಿ ಚೆರಿಗೆ ೫೦ ಕೆ.ಜಿ ಚೀಲಕ್ಕೆ ೩೫೦೦ ರೂ. ಇತ್ತು. ೨೦೦೦ ಇಸವಿಯಲ್ಲಿ ಈ ದರ ೪೫೦ಕ್ಕೆ ಕುಸಿಯಿತು. ಸರಾಸರಿ ಕಳೆದ ೨೫ ವರ್ಷದಿಂದ ಪ್ರತಿ ಚೀಲಕ್ಕೆ ೧೫೦೦ ರಿಂದ ೨೦೦೦ ರೂ. ಬೆಳೆಗಾರರಿಗೆ ದೊರೆತಂತಾಗಿದೆ. ಪ್ರಸಕ್ತ ವರ್ಷ ೩೦೦೦ ಆಸುಪಾಸಿನಲ್ಲಿ ದರ ಇದ್ದು, ಪ್ರತಿ ಎಕರೆ ಕಾಫಿ ಉತ್ಪಾದನಾ ವೆಚ್ಚ ೬೨ ಸಾವಿರಕ್ಕೂ ಅಧಿಕವಾಗಿದೆ. ಪ್ರಸ್ತುತ ಇರುವ ಮಾರುಕಟ್ಟೆ ದರದಿಂದ ಕಾಫಿ ಬೆಳೆಗಾರರಿಗೆ ಯಾವುದೇ ಲಾಭವಿಲ್ಲದೆ ಪ್ರತಿ ಎಕರೆಗೆ ದೊಡ್ಡ ಮಟ್ಟದ ನಷ್ಟವಾಗುತ್ತಿದೆ. ಒಂದು ಕಡೆ ಉತ್ತಮ ಮಾರುಕಟ್ಟೆ ಇಲ್ಲ. ಇನ್ನೊಂದು ಕಡೆ ಕಾಫಿ ಫಸಲು ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ ಎಂದು ಸಭೆಯಲ್ಲಿ ಪ್ರಮುಖರು ಆತಂಕ ವ್ಯಕ್ತಪಡಿಸಿದರು. ಕಳೆದ ೩ ವರ್ಷದಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿದ್ದು, ಇದೀಗ ಅಕಾಲಿಕ ಮಳೆಯಿಂದ ಅಪಾರ ಹಾನಿಯಾಗಿದೆ. ಮುಂದಿನ ವರ್ಷದ ಫಸಲಿನ ಮೇಲೆಯೂ ಇದು ಪ್ರತೀಕೂಲ ಪರಿಣಾಮ ಸೃಷ್ಟಿಸಿದೆ. ಇಷ್ಟೆಲ್ಲಾ ಸಂಕಷ್ಟ ಅನುಭವಿಸಿದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದುವರೆಗೆ ಯಾವುದೇ ವಿಶೇಷ ಪ್ಯಾಕೇಜ್ ಪ್ರಕಟಿಸುವ ಮೂಲಕ ಮತ್ತು ಬೆಂಬಲ ಬೆಲೆ ಘೋಷಿಸುವ ಮೂಲಕ ಬೆಳೆಗಾರರ ರಕ್ಷಣೆಗೆ ಮುಂದಾಗಿಲ್ಲ. ಕಾಫಿ ಬೆಳೆಗಾರರ ರಕ್ಷಣೆಗೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಪ್ರತ್ಯೇಕವಾಗಿ ಮುಂಬರುವ ಬಜೆಟ್‌ನಲ್ಲಿ ಸೂಕ್ತ ನೆರವಿನ ಯೋಜನೆ ರೂಪಿಸಲು ಜಿಲ್ಲೆಯ ಜನಪ್ರತಿನಿಧಿಗಳು ಸರಕಾರದ ಮಟ್ಟದಲ್ಲಿ ಒತ್ತಡ ಹಾಕಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಕೊಡಗು ಬೆಳೆಗಾರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್‌ಮಾದಪ್ಪ, ತಾಂತ್ರಿಕ ಸಲಹೆಗಾರ ಚೆಪ್ಪುಡೀರ ಶೆರಿಸುಬ್ಬಯ್ಯ, ರಾಜ್ಯ ಅರಣ್ಯ ಅಭಿವೃದ್ಧಿ ಮಂಡಳಿಯ ಮಾಜಿ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿಪೊನ್ನಪ್ಪ, ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ, ಕಾರ್ಯದರ್ಶಿ ಗೌತಮ್‌ಪೊನ್ನಪ್ಪ, ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಪ್ರ.ಕಾರ್ಯದರ್ಶಿ ಅರಮಣಮಾಡ ಸತೀಶ್‌ದೇವಯ್ಯ, ಕೊಡಗು ಬೆಳೆಗಾರ ಒಕ್ಕೂಟದ ಸ್ಥಾಪಕ ಸದಸ್ಯ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ, ರಾಜ್ಯ ರೈತ ಸಂಘದ (ಡಾ. ನಂಜುAಡಪ್ಪ ಬಣ)ದ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್‌ಗಣಪತಿ, ಚಿಮ್ಮಣಮಾಡ ರಾಜ, ಕೊಡಗು ಸಂರಕ್ಷಣಾ ವೇದಿಕೆಯ ಸಂಚಾಲಕ ಚೊಟ್ಟೇಕ್‌ಮಾಡ ರಾಜೀವ್‌ಬೋಪಯ್ಯ, ಯುಕೊ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜುಚಿಣ್ಣಪ್ಪ, ಮೈಸೂರಿನ ಕೊಡವ ಒಗ್ಗಟ್ಟ್ ಸಂಘಟನೆಯ ಜಮ್ಮಡ ಗಣೇಶ್‌ಅಯ್ಯಣ್ಣ, ಬೆಳೆಗಾರ ಒಕ್ಕೂಟದ ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್‌ಮಾದಪ್ಪ, ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕ ಮಲ್ಲಮಾಡ ಪ್ರಭು, ಕಾಫಿ ಬೆಳೆಗಾರ ಮಾಪಂಗಡ ಎಂ. ಬೆಳ್ಯಪ್ಪ ಮತ್ತಿತರರು ಹಾಜರಿದ್ದರು.