ನಾಪೋಕ್ಲು, ಜ. ೨೧: ಬಲ್ಲಮಾವಟಿ ವ್ಯಾಪ್ತಿಯಲ್ಲಿ ರಸ್ತೆಯ ಬದಿಯಲ್ಲಿ ಬಿಯರ್ ಕುಡಿದು ಬಾಟಲಿಗಳನ್ನು ರಸ್ತೆಯ ಬದಿಯಲ್ಲಿ ಬಿಟ್ಟು ಅಶುಚಿತ್ವಕ್ಕೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕಾರಣರಾಗಿದ್ದಾರೆ, ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಪಾರ್ಟಿಯನ್ನು ಮಾಡಿ ಕುಡಿದು, ಕುಣಿದು ಕುಪ್ಪಳಿಸಿ, ಮಾಂಸ, ಬಾಡೂಟ ಸೇವಿಸಿ ಕುಡಿದ ಬಿಯರ್ ಬಾಟಲಿಗಳನ್ನು ಮತ್ತು ಊಟದ ಪ್ಲೇಟನ್ನು ಅಲ್ಲೇ ಬಿಟ್ಟು ಗ್ರಾಮವನ್ನು ಕಸಮಯ ಮಾಡಿದ್ದಾರೆ.

ಇದನ್ನು ದಾರಿಹೋಕರು ದಿನಂಪ್ರತಿ ನೋಡುತ್ತಿದ್ದರೂ ಇದನ್ನು ಯಾರು ಸ್ವಚ್ಛಗೊಳಿಸಲು ಮುಂದಾಗಿಲ್ಲ. ಆದರೆ ರಸ್ತೆಯ ಬದಿಯಲ್ಲೇ ಕಸ ಇದ್ದರೂ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗೆ ಇದು ಕಾಣಿಸದಿರುವುದು ವಿಪರ್ಯಾಸವೇ ಸರಿ. ಸರಕಾರ ಶುಚಿತ್ವವನ್ನು ಕಾಪಾಡಲು ಗೋಗೆರೆದರು ಜನರು ಇದನ್ನು ಪಾಲಿಸದೇ ಇರುವುದು ಸರಿಯಲ್ಲ. ಕೂಡಲೇ ಗ್ರಾಮ ಪಂಚಾಯಿತಿಯವರು ಇದನ್ನು ಸ್ವಚ್ಛಗೊಳಿಸಿ ಯಾರು ಈ ರೀತಿಯಾಗಿ ಕಸ ಹಾಕಿರುತ್ತಾರೋ ಅವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ಈ ವಿಭಾಗದ ಜನರನ್ನು ಮಾರಕ ರೋಗದಿಂದ ಕಾಪಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. - ದುಗ್ಗಳ