ನಾಪೋಕ್ಲು, ಜ. ೨೧: ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗುಮ್ಮನಕೊಲ್ಲಿ ಕುಶಾಲನಗರ ವಾಸಿ ಕಲ್ಲುಮುಟ್ಲು ವಿಶ್ವನಾಥ್ (ವಿಠಲ-೫೯) ಅನಾರೋಗ್ಯದಿಂದ ಮಡಿಕೇರಿಯ ಜಿಲ್ಲಾ ಆಸ್ವತ್ರೆಯಲ್ಲಿ ನಿಧನರಾದರು. ಮೃತರು ಇತ್ತೀಚಿಗಷ್ಟೆ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದರು. ಮುಂಬರುವ ಏಪ್ರಿಲ್ ತಿಂಗಳಲ್ಲಿ ನಿವೃತ್ತಿ ಹೊಂದುವವರಿದ್ದರು. ಮೃತರು ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೨೨ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ.