*ಸಿದ್ದಾಪುರ, ಜ. ೨೧ : ತ್ಯಾಗತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ತಡೆಗೆ ಅಳವಡಿಸಿರುವ ರೈಲ್ವೆ ಕಂಬಿಗಳ ಬೇಲಿ ಸಮೀಪದಲ್ಲೇ ಟ್ರಾನ್ಸ್ಫಾರ್ಮರ್ ವೊಂದಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾ.ಪಂ. ಸದಸ್ಯ ಮನುಮಹೇಶ್ ಅವರು ಕಾಡಾನೆಗಳ ದಾಳಿಯಿಂದ ಟ್ರಾನ್ಸ್ಫಾರ್ಮರ್‌ಗೆ ಹಾನಿಯಾಗಿದ್ದು, ವಿದ್ಯುತ್ ತ

ಂತಿ ರೈಲ್ವೆ ಕಂಬಿಗಳ ಬೇಲಿ ಬಳಿ ಆತಂಕವನ್ನು ಸೃಷ್ಟಿಸಿದೆ. ವಿದ್ಯುತ್ ಬೇಲಿಗೆ ವ್ಯಾಪಿಸಿದರೆ ಪ್ರಾಣಿಗಳು ಮಾತ್ರವಲ್ಲದೆ ಈ ಭಾಗದಲ್ಲಿ ಸಂಚರಿಸುವ ಮಾನವ ಜೀವಕ್ಕೂ ಅಪಾಯ ಕಾದಿದೆ. ಪಕ್ಕದಲ್ಲೇ ಇರುವ ವಿದ್ಯುತ್ ಕಂಬ ಕೂಡ ದುರಸ್ತಿಗೀಡಾಗಿದ್ದು, ಇದರಿಂದಲೂ ಅಪಾಯವಿದೆ ಎಂದು ತಿಳಿಸಿದ್ದಾರೆ.

ಟ್ರಾನ್ಸ್ಫಾರ್ಮರ್ ಸ್ಥಳಾಂತರಕ್ಕೆ ಅರಣ್ಯ ಇಲಾಖೆ ಚೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲವೆAದು ಆರೋಪಿಸಿರುವ ಮನುಮಹೇಶ್, ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭ ಗಿರೀಶ್, ಜಯಂತ್, ಎಂ.ಎನ್.ಶಿವಕುಮಾರ್, ಸುದೇಶ್, ಸುಜಯ್, ಶರವಣ, ಕೃಷ್ಣಪುರ ಪ್ರದೀಪ್ ಹಾಜರಿದ್ದರು.