ವೀರಾಜಪೇಟೆ, ಜ. ೨೧: ವೀರಾಜಪೇಟೆಯ ಶಿವಕೇರಿಯಲ್ಲಿರುವ ಶ್ರೀ ದುರ್ಗಿ ವಿಷ್ಣುಮೂರ್ತಿ ನಾಗ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಕಿರುಷಷ್ಠಿ ಪ್ರಯುಕ್ತ ದೇವಾಲಯದಲ್ಲಿ ಇಂದು ವಿಶೇಷ ಪೂಜಾ ಕಾರ್ಯಗಳು ಶ್ರದ್ಧಾಭಕ್ತಿಯಿಂದ ನಡೆಯಿತು. ಬೆಳಿಗ್ಗೆ ೫.೩೦ ಗಂಟೆಯಿAದಲೇ ದೇವರಿಗೆ ಅಭಿಷೇಕ ಹಾಗೂ ನಾಗದೇವತೆಗೆ ವಿಶೇಷ ಪೂಜೆಗಳು ಬಳಿಕ ದೇವರ ಭಜನೆ ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜಾ ಸೇವೆ ನಡೆಯಿತು. ಸಾಂಪ್ರದಾಯದAತೆ ಉತ್ಸವ ಮೂರ್ತಿಯು ದೇವಾಲಯದ ಸುತ್ತು ಪ್ರದರ್ಶನ ನಡೆಯಿತು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕೂಡಿಗೆ : ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ ಆವರಣದಲ್ಲಿ ಸತ್ಯನಾರಾಯಣ ವೃತಚರಣ ಸಮಿತಿಯ ವತಿಯಿಂದ ಕಿರುಷಷ್ಠಿ ಪೂಜಾಕಾರ್ಯಕ್ರಮ ನಡೆಯಿತು.

ದೇವಾಲಯ ಆವರಣದಲ್ಲಿ ಬೆಳಿಗ್ಗೆನಿಂದಲೇ ಶ್ರೀ ಸ್ವಾಮಿಗೆ ವಿಶೇಷ ಅಭಿಷೇಕ ಪೂಜಾ ಕೈಂಕರ್ಯ ಸೇರಿದಂತೆ ಸ್ವಾಮಿಯ ಸೇವಾ ಅರ್ಚನೆಗಳು ನಡೆದವು. ಪೂಜಾ ಕಾರ್ಯಕ್ರಮದಲ್ಲಿ ಕೂಡಿಗೆ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಭಾಗವಹಿಸಿದರು. ಕಿರು ಷಷ್ಠಿಯ ಅಂಗವಾಗಿ ಹೋಮ ಹವನಗಳು ಬೆಳಿಗ್ಗೆನಿಂದಲೆ ನಡೆದವು ೧೨ ಗಂಟೆಗೆ ಮಹಾಮಂಗಳಾತಿ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.

ಪೂಜಾ ಕೈಂಕರ್ಯವನ್ನು ದೇವಾಲಯದ ಅರ್ಚಕ ನವೀನ್ ಭಟ್ಟರ ತಂಡದವರು ನೆರವೇರಿಸಿದರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮೂರ್ತಿಯನ್ನು ಕಿರು ಷಷ್ಠಿಯ ಪ್ರಯುಕ್ತ ದೇವಾಲಯ ಅವರಣದಲ್ಲಿ ಪ್ರದಕ್ಷಿಣೆ ನಡಸಿ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಸತ್ಯನಾರಾಯಣ ವ್ರತಾಚರಣೆ ಸಮಿತಿಯ ಅಧ್ಯಕ್ಷ ಡಿ.ಕೆ. ಪೊನ್ನಪ್ಪ, ಕಾರ್ಯದರ್ಶಿ ಕೆ. ರಾಜನ್, ಸಮಿತಿಯ ನಿರ್ದೇಶಕರಾದ ಶಿವಕುಮಾರ್, ಸತ್ಯನಾರಾಯಣ, ರತ್ನಕರ್ ಸೇರಿದಂತೆ ಸಮಿತಿಯವರು ಹಾಜರಿದ್ದರು.