ಸೋಮವಾರಪೇಟೆ, ಜ. ೨೧: ಸಮೀಪದ ಐಗೂರು ಗ್ರಾಮದಲ್ಲಿ ಹರಿಯುವ ಚೋರನ ಹೊಳೆಯಲ್ಲಿ ಕಾಫಿ ಪಲ್ಪಿಂಗ್ ತ್ಯಾಜ್ಯ ನೀರು ಹರಿಯುತ್ತಿದ್ದು, ಜಾನುವಾರುಗಳು ಹಾಗೂ ಕೃಷಿಗೆ ಬಳಕೆಯಾಗುವ ನೀರು ಕಲುಷಿತಗೊಳ್ಳುತ್ತಿದೆ.
ಕೆಲವು ಕಾಫಿ ಬೆಳೆಗಾರರು ಪಲ್ಪ್ ಮಾಡಿದ ನೀರನ್ನು ನೇರವಾಗಿ ಹೊಳೆಗೆ ಬಿಡುತ್ತಿರುವುದರಿಂದ ನೀರು ಕಲುಷಿತಗೊಂಡು ಜಲಚರಗಳು ಸಾಯುತ್ತಿವೆ. ಇದೀಗ ಕಾಫಿ ಪಲ್ಪಿಂಗ್ ತ್ಯಾಜ್ಯವನ್ನು ಸೇರಿಸಿಕೊಂಡು ಹರಿಯುತ್ತಿರುವ ಚೋರನ ಹೊಳೆ ಐಗೂರು, ಯಡವಾರೆ, ಗರಗಂದೂರು, ಹಾರಂಗಿ, ಹೊರಹೊಳೆ, ಕಾಳಿದೇವನ ಹೊಸೂರು, ಹುದುಗೂರು ಮೂಲಕ ಹಾರಂಗಿ ಜಲಾಶಯ ಸೇರುತ್ತಿದೆ
ಹೊಳೆ ಪಾತ್ರದ ಬಹುತೇಕ ಕೃಷಿಕರು ಇದೇ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ಜಾನುವಾರುಗಳೂ ಸಹ ಇದೇ ಹೊಳೆ ಪಾತ್ರದ ಬಹುತೇಕ ಕೃಷಿಕರು ಇದೇ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ಜಾನುವಾರುಗಳೂ ಸಹ ಇದೇ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಗಣೇಶನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಲಿಖಿತ ದೂರು ಬಂದರೆ ಸ್ಥಳ ಪರಿಶೀಲನೆ ಮಾಡಿ ಪಲ್ಪಿಂಗ್ ಘಟಕದ ಮಾಲೀಕರÀ ವಿರುದ್ಧ ಕಾನೂನು ಕ್ರಮ ಕೈಗೊಂಡು ಪಲ್ಪಿಂಗ್ ಘಟಕದ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗು ವುದು ಎಂದು ತಿಳಿಸಿದ್ದಾರೆ.