ಜ. ೨೧: ಕೊಡಗು ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಜಲ ಜೀವನ್ ಯೋಜನೆಯ ಐಎಸ್ಎ, ಐಇಸಿ ಮತ್ತು ಎಚ್ಆರ್ಡಿ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಮತ್ತು ಜಲ ಜೀವನ್ ಕಾರ್ಯಕ್ರಮದ ಕುರಿತು ಆಲೂರುಸಿದ್ದಾಪುರದಲ್ಲಿ ಜನ ಜಾಗೃತಿ ಬೀದಿ ನಾಟಕವನ್ನು ಹಮ್ಮಿಕೊಳ್ಳಲಾಯಿತು. ಮೈಸೂರಿನ ಜಲ ಜೀವನ್ ಮಿಷನ್ ಯೋಜನೆಯ ಕಲಾವಿದ ಚಕ್ರಪಾಣಿ ಮತ್ತು ತಂಡದ ಕಲಾವಿದರು ಜಲ ಜೀವನ್ ಯೋಜನೆ ಕುರಿತು ಮಾಹಿತಿಯನ್ನು ಬೀದಿ ನಾಟಕ ಅಭಿನಯದ ಮೂಲಕ ಗ್ರಾಮಸ್ಥರಿಗೆ ಅರಿವು ಮೂಡಿಸಿದರು. ಬೀದಿ ನಾಟಕದಲ್ಲಿ ನೀರು ಮಹತ್ವದ ಸ್ಥಾನ ಪಡೆದಿದೆ, ಗ್ರಾಮೀಣ ಪ್ರದೇಶದಲ್ಲಿ ಬಯಲು ಶೌಚಾಲಯ ಮುಕ್ತವಾಗುವುದು, ನೀರನ್ನು ಉಳಿಸುವುದು, ಪರಿಸರ, ಶುಚಿತ್ವ, ನೈರ್ಮಲ್ಯ ಮುಂತಾದ ವಿಷಯಗಳನ್ನು ಬೀದಿ ನಾಟಕದ ಮೂಲಕವಾಗಿ ಜನರನ್ನು ಜಾಗೃತಿಗೊಳಿಸಿದರು. ಬೀದಿ ನಾಟಕ ಕಾರ್ಯಕ್ರಮ ಸಂದರ್ಭದಲ್ಲಿ ಜಲ ಜೀವನ್ ಯೋಜನೆಯ ಕೊಡಗು ಜಿಲ್ಲಾ ಸಂಯೋಜಕ ಮಂಜುನಾಥ್, ಐಇಸಿ ಎಕ್ಷ್ಪಂಟ್ ಅಕ್ಷತ್, ಯೋಜನೆಯ ಅಭಿಯಂತರ ಪಹೂಲ್, ಆಲೂರುಸಿದ್ದಾಪುರ ನೂತನ ಗ್ರಾ.ಪಂ. ಸದಸ್ಯರಾದ ಪಿ.ಎನ್. ಗಂಗಾಧರ್, ಪಿ.ಎಸ್. ಸತೀಶ್, ದಮಯಂತಿ, ಗ್ರಾ.ಪಂ. ಪಿಡಿಓ ಪೂರ್ಣಿವi, ಕಾರ್ಯದರ್ಶಿ ಚಂದ್ರೇಗೌಡ ಮುಂತಾದವರು ಹಾಜರಿದ್ದರು.