*ಗೋಣಿಕೊಪ್ಪ, ಜ. ೨೨: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ೭ ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ಪರಿಶೀಲನೆ ನಡೆಸಿದರು.

ಬಿಟ್ಟಂಗಾಲ, ನಾಂಗಲ, ಬಿ. ಶೆಟ್ಟಿಗೇರಿ ಸಂಪರ್ಕ ರಸ್ತೆ ಕಾಮಗಾರಿ ಯನ್ನು ವೀಕ್ಷಿಸಿದ ಶಾಸಕರು ವೀರಾಜಪೇಟೆ ತಾಲೂಕಿನಲ್ಲಿ ಅತೀ ದೊಡ್ಡ ರಸ್ತೆ ಇದಾಗಿದ್ದು, ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿಕೊಡುವಂತೆ ಇಂಜಿನಿಯರುಗಳಿಗೆ ಸೂಚಿಸಿದರು. ವೀರಾಜಪೇಟೆ ತಾಲೂಕಿಗೆ ೩೦ ಕಿಲೋಮೀಟರ್ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅನುದಾನ ಬಂದಿದೆ. ಮೊದಲ ಹಂತದಲ್ಲಿ ೮.೯ ಕಿಲೋಮೀಟರ್ ರಸ್ತೆ ಕಾಮಗಾರಿ ನಡೆಯುತ್ತಿದೆ.

ಇದೊಂದು ಉತ್ತಮ ರಸ್ತೆಯಾಗಿದ್ದು ಈ ಭಾಗದ ಜನರಿಗೆ ಬಹು ಅನುಕೂಲ ಕಲ್ಪಿಸಲಿದೆ. ಜನರ ಬೇಡಿಕೆಗೆ ಅನುಗುಣವಾಗಿ ಈ ರಸ್ತೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು ಗ್ರಾಮ ಸಡಕ್ ಯೋಜನೆಯಡಿ ಅನುದಾನ ಕಲ್ಪಿಸಲಾಗಿದೆ ಎಂದು ಹೇಳಿದರು. ಎರಡನೇ ಹಂತದ ಕಾಮಗಾರಿಗೆ ಕೊರೊನಾ ಸಮಸ್ಯೆಯಿಂದ ಅನುದಾನ ಬರಲು ತಡವಾಗಿದೆ. ಮುಂದಿನ ಹಂತದಲ್ಲಿ ಪೂರ್ಣ ಅನುದಾನ ಸಿಗಲಿದ್ದು, ರಸ್ತೆ ಕಾಮಗಾರಿ ವ್ಯವಸ್ಥಿತವಾಗಿ ನಡೆಯಲಿದೆ. ಐದು ವರ್ಷದ ವರೆಗೆ ರಸ್ತೆಯ ನಿರ್ವಹಣೆಯನ್ನು ಗುತ್ತಿಗೆದಾರ ನಿಭಾಯಿಸಬೇಕು. ಐದು ವರ್ಷ ಕಳೆದ ನಂತರ ಮರು ಡಾಂಬರೀಕರಣ ಮಾಡಿ ಪಿ.ಡಬ್ಲ್ಯೂ.ಡಿ ಇಲಾಖೆಯ ಅಧೀನಕ್ಕೆ ಬಿಡಬೇಕು ಎಂದು ನಿಯಮವನ್ನು ತಿಳಿಸಿದರು.

ಜಿ. ಪಂ. ಸದಸ್ಯ ಅಪ್ಪಡೇರಂಡ ಭವ್ಯ ಚಿಟ್ಟಿಯಪ್ಪ, ತಾಲೂಕು ಅಕ್ರಮ- ಸಕ್ರಮ ಭೂಸ್ವಾಧೀನ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಗಣೇಶ್, ತಾಲೂಕು ಬಿಜೆಪಿ ಕಾರ್ಯದರ್ಶಿ ಅಮ್ಮಣಿಚಂಡ ರಂಜುಪೂಣಚ್ಚ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘುನಾಣಯ್ಯ, ಬಿಟ್ಟಂಗಾಲ ಶಕ್ತಿ ಕೇಂದ್ರದ ಸಂಚಾಲಕ ಅಪ್ಪಡೇರಂಡ ದಿನೇಶ್, ಸಹ ಸಂಚಾಲಕ ಕುಪ್ಪಂಡ ದಿಲನ್‌ಬೋಪ್ಪಣ್ಣ, ಬಿಟ್ಟಂಗಾಲ ಶಕ್ತಿಕೇಂದ್ರದ ಕೃಷಿ ಮೋರ್ಚಾ ಅಧ್ಯಕ್ಷ ಮಚ್ಚಾರಂಡ ತಿಮ್ಮಯ್ಯ, ವಿ.ಬಾಡಗ ಬೂತ್ ಅಧ್ಯಕ್ಷ ಕುಪ್ಪಂಡ ಮೊಣ್ಣಪ್ಪ, ಕಾರ್ಯದರ್ಶಿ ತೀತಿಮಾಡ ಬೋಪಣ್ಣ, ಮಾಜಿ ಬೂತ್ ಅಧ್ಯಕ್ಷ ಕೊಕ್ಕಂಡ ಅರುಣ್‌ಮೇದಪ್ಪ ಹಾಗೂ ಗ್ರಾಮದ ಪ್ರಮುಖರು ಹಾಜರಿದ್ದರು.ಮಡಿಕೇರಿ: ತೋಟಗಾರಿಕೆ ಇಲಾಖೆ ವತಿಯಂದ ನಗರದಲ್ಲಿ ನಿರ್ಮಾಣವಾಗಿರುವ ನೂತನ ಹಾಪ್ ಕಾಮ್ಸ್ನ ಕಟ್ಟಡವನ್ನು ಶಾಸಕರಾದ ಕೆ.ಜಿ.ಬೋಪಯ್ಯ ಪರಿಶೀಲನೆ ಮಾಡಿದರು

ನಂತರ ಮಾತನಾಡಿದ ಶಾಸಕರು, ಕಟ್ಟಡ ಇಲ್ಲದ ಹಿನ್ನೆಲೆ ತೋಟಗಾರಿಕೆ ಇಲಾಖೆಯ ಜಾಗದಲ್ಲಿ ಹಾಪ್‌ಕಾಮ್ಸ್ ಕಾರ್ಯನಿರ್ವಹಿಸುತಿತ್ತು. ಸ್ವಂತ ಕಟ್ಟಡ ಕೊರತೆ ಇದ್ದ ಕಾರಣ ನಗರದ ಹೃದಯ ಭಾಗದಲ್ಲಿ ಈ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಇಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದರು.

ರೈತರು ಬೆಳೆದ ತೋಟಗಾರಿಕ ಬೆಳೆಗಳನ್ನು ನೇರವಾಗಿ ತರಲು ಅವಕಾಶವನ್ನು ಕಲ್ಪಿಸಲಾಗಿದೆ ಹಾಗೂ ತೋಟಗಾರಿಕ ಉತ್ಪನ್ನಗಳನ್ನು ಇಲ್ಲಿ ಸಂಸ್ಕರಣೆ ಮಾಡಬಹುದಾಗಿದೆ. ಮತ್ತು ವಾರದಲ್ಲಿ ಒಂದು ದಿನ ಸಂತೆಯ ಮಾದರಿಯಲ್ಲಿ ರೈತರಿಗೆ ಅವಕಾಶವನ್ನು ನೀಡಲಾಗುತ್ತದೆ. ರೈತರಿಗೆ ಪ್ರಯೋಜನಕಾರಿಯಾಗುವ ರೀತಿಯಲ್ಲಿ ಇದ್ದನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. ಕೊಡಗು ಜಿಲ್ಲಾ ಹಾಪ್ ಕಾಮ್ಸ್ನ ಅಧ್ಯಕ್ಷ ರಮೇಶ್ ಚಂಗಪ್ಪ ಮಾತನಾಡಿ, ಕಟ್ಟಡಕ್ಕೆ ರೂ.೧.೩೭ ಕೋಟಿ ಮಂಜೂರಾತಿಯಾಗಿದೆ. ಕಟ್ಟಡದ ಕೆಲಸವು ಮುಗಿದಿದ್ದು ಮುಂದಿನ ದಿನಗಳಲ್ಲಿ ಶಾಸಕರ ಸಮ್ಮುಖದಲ್ಲಿ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾ.ಪಂ.ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್, ಹಾಪ್ ಕಾಮ್ಸ್ನ ಉಪಾಧ್ಯಕ್ಷ ಮಧು ದೇವಯ್ಯ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕÀ ಪ್ರಮೋದ್, ಹಾಪ್ ಕಾಮ್ಸ್ನ ನಿರ್ದೇಶಕರಾದ ನಾಗೇಶ್ ಕುಂದಲ್‌ಪಾಡಿ, ಸತೀಶ್, ಮಹೇಶ್, ಬೇಬಿ ಪೂವಯ್ಯ, ಸುವೀನ್ ಗಣಪತಿ, ಹಾಪ್ ಕಾಮ್ಸ್ನ ಕಾರ್ಯದರ್ಶಿ ರೇಷ್ಮಾ ಮತ್ತು ಇತರರು ಇದ್ದರು.