ಸಿದ್ದಾಪುರ, ಜ ೨೨: ಜಿಲ್ಲೆಯ ಸಿದ್ದಾಪುರದ ಪ್ರಸಿದ್ಧ ರೆಸಾರ್ಟ್ವೊಂದರಲ್ಲಿ ಪ್ರವಾಸಿಯೊಬ್ಬರ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿರುವ ಪ್ರತಿಷ್ಟಿತ ರೆಸಾರ್ಟ್ ಆಗಿರುವ ಇವಾಲ್ ಬ್ಯಾಕ್ ರೆಸಾರ್ಟ್ಗೆ ಕಳೆದ ೩ ದಿನಗಳ ಹಿಂದೆ ಬೆಂಗಳೂರಿನ ನಿವಾಸಿ ನಾಗರಾಜ್ ಸಿದ್ದಾಪುರ, ಜ ೨೨: ಜಿಲ್ಲೆಯ ಸಿದ್ದಾಪುರದ ಪ್ರಸಿದ್ಧ ರೆಸಾರ್ಟ್ವೊಂದರಲ್ಲಿ ಪ್ರವಾಸಿಯೊಬ್ಬರ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿರುವ ಪ್ರತಿಷ್ಟಿತ ರೆಸಾರ್ಟ್ ಆಗಿರುವ ಇವಾಲ್ ಬ್ಯಾಕ್ ರೆಸಾರ್ಟ್ಗೆ ಕಳೆದ ೩ ದಿನಗಳ ಹಿಂದೆ ಬೆಂಗಳೂರಿನ ನಿವಾಸಿ ನಾಗರಾಜ್ (ಮೊದಲ ಪುಟದಿಂದ) ಎಂಬವರು ಪ್ರವಾಸಕ್ಕೆ ಆಗಮಿಸಿ ತಂಗಿದ್ದರು. ಇವರು ತಮ್ಮ ಕುಟುಂಬಸ್ಥರೊAದಿಗೆ ಬಂದಿದ್ದು, ಕುಟುಂಬಸ್ಥರು ಸೇರಿ ತಂಗಿರುವ ಕೋಣೆಯಲ್ಲಿ ತಮ್ಮ ಬ್ಯಾಗಿನೊಳಗೆ ಚಿನ್ನಾಭರಣಗಳನ್ನು ಹಾಗೂ ನಗದು ಇಟ್ಟಿದ್ದರು ಎನ್ನಲಾಗಿದೆ. ಆದರೆ ಇವರು ತಂಗಿದ್ದ ಕೋಣೆಯಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆ. ಅಂದಾಜು ರೂ. ೧.೫೦ ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳ್ಳತನ ಮಾಡಿರುವುದಾಗಿ ಇವಾಲ್ ಬ್ಯಾಕ್ ರೆಸಾರ್ಟ್ನ ವ್ಯವಸ್ಥಾಪಕರಾದ ಬ್ಯಾನರ್ಜಿ ಜೋಯ್‌ಜೀತ್ ಸಿದ್ದಾಪುರ ಪೊಲೀಸ್ ಠಾಣೆಗೆ ಪುಕಾರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್, ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ತನಿಖೆ ನಡೆಸಲಾಯಿತು.

ಈ ಹಿಂದೆ ಕೂಡ ರೆಸಾರ್ಟ್ನಲ್ಲಿ ತಂಗಿರುವ ಪ್ರವಾಸಿಗರ ನಗದು ವಸ್ತುಗಳು ಕಳ್ಳತನವಾಗಿದ್ದರೂ ಕೂಡಾ ಪ್ರವಾಸಿಗರು ಪೋಲಿಸ್ ದೂರು ನೀಡಲು ಹಿಂಜರಿಯುತ್ತಿದ್ದರು ಎನ್ನಲಾಗಿದೆ. ರೆಸಾರ್ಟ್ ಸುತ್ತಲೂ ಸಿ.ಸಿ. ಕ್ಯಾಮೆರಾ ಇದ್ದರೂ ಕೂಡ ಕಳ್ಳರು ತಮ್ಮ ಕೈಚಳಕದಿಂದ ಆಭರಣಗಳನ್ನು ಅಪಹರಿಸಿ ಕಳ್ಳತನ ಮಾಡಿರುವುದು ಅಚ್ಚರಿ ಮೂಡಿಸಿದೆ.