ಶ್ರೀಮಂಗಲ, ಜ. ೨೨: ಕೇರಳ ರಾಜ್ಯದ ೨೦೨೧-೨೨ ಮುಂಗಡ ಪತ್ರದಲ್ಲಿ ರೋಬಸ್ಟಾ ಚೆರಿ ಕಾಫಿಗೆ ಪ್ರತಿ ಕೆ.ಜಿ. ಒಂದಕ್ಕೆ ರೂ. ೯೦ ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ನಿಗದಿಪಡಿಸಿರುವ ಬಗ್ಗೆ ಪ್ರಸ್ತಾಪವಾಗಿದ್ದು, ಈ ನಿಟ್ಟಿನಲ್ಲಿ ಕೇರಳ ರಾಜ್ಯದ ಬೆಳೆಗಾರರು ಹಾಗೂ ಕಾಫಿ ಮಂಡಳಿಯ ಅಧಿಕಾರಿಗಳನ್ನು ಕೊಡಗು ಬೆಳೆಗಾರ ಒಕ್ಕೂಟದ ನಿಯೋಗದಿಂದ ಕೇರಳದ ಮಾನಂದವಾಡಿಯಲ್ಲಿ ಭೇಟಿ ಮಾಡಿ ಮಾಹಿತಿ ಪಡೆದರು.ಕಳೆದ ಎರಡೂವರೆ ದಶಕದಿಂದ ಉತ್ಪಾದನಾ ವೆಚ್ಚ ಹೆಚ್ಚಳ, ಇಳುವರಿ ಕುಂಠಿತ, ಪ್ರಾಕೃತಿಕ ವಿಕೋಪ, ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ ಮತ್ತು ಮಾರುಕಟ್ಟೆ ದರ ಕುಸಿತದಿಂದ ಸಂಕಷ್ಟ ಅನುಭವಿಸುತ್ತಿರುವ ಕಾಫಿ ಬೆಳೆಗಾರರ ಚೇತರಿಕೆಗಾಗಿ ಈ ಯೋಜನೆಯನ್ನು ಕೇರಳ ಸರ್ಕಾರ ತಂದಿರುವುದಾಗಿ ಬೆಳೆಗಾರರು ಅಭಿಪ್ರಾಯ ಪಟ್ಟರು.ಕೇರಳ ಹಣಕಾಸು ಸಚಿವ ಟಿ.ಎಂ. ಥಾಮಸ್ ಐಸಾಕ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು, ಈಗಾಗಲೇ ಕೇರಳ ರಾಜ್ಯದಲ್ಲಿ ಬ್ರಹ್ಮಗಿರಿ ಸೊಸೈಟಿ ಸ್ಥಾಪನೆ ಮಾಡಲಾಗಿದೆ. ಈ ಸೊಸೈಟಿ ಮೂಲಕ ಕಾಫಿ ಬೆಳೆಗಾರರ ಉತ್ತಮ ಗುಣಮಟ್ಟದ ಕಾಫಿಯನ್ನು ಖರೀದಿಸಿ ಅದನ್ನು ಕೇರಳದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆಯಾದ ವಯನಾಡ್ ಜಿಲ್ಲೆಯ ಬ್ರಾಂಡ್ನಲ್ಲಿ ಮಾರಾಟ ಮಾಡಲು ಈ ಯೋಜನೆ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸ್ವಿಟ್ಜರ್ಲ್ಯಾಂಡ್ ದೇಶದಲ್ಲಿ ಕೇರಳದ ಕಾಫಿ ಮೌಲ್ಯವರ್ಧನೆ ಮಾಡಿ ಗ್ರಾಹಕರವರೆಗೆ ತಲುಪಿಸುವ ನಿಟ್ಟಿನಲ್ಲಿ ಯೋಜನೆ ತಯಾರಿಸಲಾಗಿದ್ದು, ವಯನಾಡ್ ಬ್ರಾಂಡ್ನಲ್ಲಿ ಮಾರಾಟ ಮಾಡುವ ಕಾಫಿಯನ್ನು ಖರೀದಿಸಲು
(ಮೊದಲ ಪುಟದಿಂದ) ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ವಿಚಾರವನ್ನು ಕೇರಳದ ಬೆಳೆಗಾರರು ಜಿಲ್ಲೆಯ ಬೆಳೆಗಾರರಿಗೆ ಮಾಹಿತಿ ನೀಡಿದರು.
ಚೆರಿ ಕಾಫಿಯನ್ನು ಮಾರಾಟ ಮಾಡುವುದರಿಂದ ಬೆಳೆಗಾರರಿಗೆ ನಷ್ಟವಾಗುತ್ತಿದ್ದು, ಅದೇ ಕಾಫಿಯನ್ನು ಸಂಸ್ಕರಣೆ ಮಾಡಿ ವಯನಾಡ್ ಬ್ರಾಂಡ್ನಲ್ಲಿ ಮಾರುಕಟ್ಟೆ ಮಾಡುವುದರಿಂದ ಬೆಳೆಗಾರರಿಗೆ ಹೆಚ್ಚಿನ ದರ ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಕೇರಳ ಸರಕಾರ ಮುಂದಾಗಿದೆ. ಇದಕ್ಕಾಗಿ ಬ್ರಹ್ಮಗಿರಿ ಸೊಸೈಟಿ ಮೂಲಕ ಕೇರಳದ ಕಾಫಿ ಬೆಳೆಗಾರರ ಕಾಫಿಯನ್ನು ಖರೀದಿಸಲು ನಿರ್ಧರಿಸಿದ್ದು, ಎಷ್ಟರ ಪ್ರಮಾಣದಲ್ಲಿ ಬೆಳೆಗಾರರಿಂದ ಕಾಫಿ ಖರೀದಿಸುತ್ತದೆ ಎಂಬ ಬಗ್ಗೆ ಇನ್ನಷ್ಟೇ ಯೋಜನೆ ರೂಪುಗೊಳ್ಳಬೇಕಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲಿರುವಂತೆ ಸ್ತಿçÃಶಕ್ತಿ ಮತ್ತು ಸ್ವಸಹಾಯ ಸಂಘಗಳAತೆ ಕೇರಳದಲ್ಲಿ ಪ್ರತಿ ಗ್ರಾಮದಲ್ಲಿ ಕುಡುಂಬಶ್ರಿ ಎಂಬ ಸಂಘಗಳು ಕನಿಷ್ಟ ೫-೬ ಇದ್ದು, ಅವುಗಳನ್ನು ವಯನಾಡ್ ಬ್ರಾಂಡ್ ಕಾಫಿ ತಯಾರಿಕೆ ಮೌಲವರ್ಧನೆ ಮತ್ತು ಮಾರಾಟಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಬ್ರಹ್ಮಗಿರಿ ಕಾಫಿ ಸೊಸೈಟಿಗೆ ರೂ. ೫ ಕೋಟಿ ಮತ್ತು ಕುಡುಂಬಶ್ರಿ ಸಂಸ್ಥೆಗಳಿಗೆ ರೂ. ೨೦ ಕೋಟಿ ಬಿಡುಗಡೆ ಮಾಡಲು ಸರಕಾರ ಬಜೆಟ್ನಲ್ಲಿ ಪ್ರಕಟಿಸಿದೆ. ಇದನ್ನು ೨೦೨೧-೨೨ನೇ ಆರ್ಥಿಕ ವರ್ಷದಲ್ಲಿ ಜಾರಿಗೊಳಿಸಲು ನಿರ್ಧರಿಸಿದ್ದು, ಮುಂದಿನ ತಿಂಗಳಿನಿAದ ಅನುಷ್ಠಾನ ಮಾಡಲು ಬಜೆಟ್ ಭಾಷಣದಲ್ಲಿ ಸಚಿವರು ಮಾಹಿತಿ ನೀಡಿದ್ದಾರೆ ಎಂದು ಬೆಳೆಗಾರರು ವಿಚಾರ ವಿನಿಮಯ ಮಾಡಿಕೊಂಡರು.
ಇದಲ್ಲದೆ ಈಗಾಗಲೇ ಕೇರಳ ರಾಜ್ಯದಲ್ಲಿ ತರಕಾರಿಗೂ ಬೆಂಬಲ ಬೆಲೆ ನಿಗದಿ ಮಾಡಲಾಗಿದ್ದು, ಕಳೆದ ಸಾಲಿನಲ್ಲಿ ಪ್ರತಿ ಕೆ.ಜಿ. ಭತ್ತಕ್ಕೆ ರೂ. ೨೭.೨೫ ಗೆ(ಕ್ವಿಂಟಾಲ್ಗೆ ರೂ. ೨೭೨೫) ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿಪಡಿಸಿ ರೈತರ ಆರ್ಥಿಕ ಸುಧಾರಣೆಗೆ ಮುಂದಾಗಿರುವ ಬಗ್ಗೆಯೂ ಅವರು ಮಾಹಿತಿ ನೀಡಿದರು. ಕೇರಳ ಸರಕಾರದ ಈ ಯೋಜನೆ ಆರ್ಥಿಕ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಹೊಸ ಚೇತರಿಕೆಯನ್ನು ನೀಡುವ ಭರವಸೆಯನ್ನು ಇಲ್ಲಿನ ಬೆಳೆಗಾರರು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಹುರಾಷ್ಟಿçÃಯ ಕಂಪೆನಿ ಸೇರಿದಂತೆ ದೇಶದ ಹೆಸರಾಂತ ಕಂಪೆನಿಗಳು ಕಾಫಿಯನ್ನು ತಮ್ಮದೇ ಬ್ರಾಂಡ್ನಲ್ಲಿ ಮಾರಾಟ ಮಾಡುತ್ತ ಲಾಭಗಳಿಸುತ್ತಿದ್ದು, ಇದೇ ನಿಟ್ಟಿನಲ್ಲಿ ಕೇರಳ ಸರಕಾರ ವಯನಾಡ್ ಬ್ರಾಂಡ್ ಮೂಲಕ ಸರಕಾರದ ಆರ್ಥಿಕ ನೆರವು ನೀಡಿ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಪ್ರತಿ ಕೆ.ಜಿ.ಗೆ ರೂ. ೯೦ರಲ್ಲಿ ಚೆರಿ ಕಾಫಿಯನ್ನು ಖರೀದಿಸಲು ಯೋಜನೆ ರೂಪಿಸಿರುವುದು ವಿಚಾರ ವಿನಿಮಯದ ವೇಳೆ ತಿಳಿದುಬಂದಿದೆ.
ಮಾನAದವಾಡಿಯ ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಎಲ್. ಲಕ್ಷö್ಮಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಸಂದರ್ಭ ಅವರು ಸಹ ಕಾಫಿಗೆ ಕನಿಷ್ಟ ಬೆಂಬಲ ಬೆಲೆಯ ಬಗ್ಗೆ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ೨೦೧೩-೧೪ರಲ್ಲಿ ಉಂಟಾದ ಅತಿವೃಷ್ಟಿ ಸಂದರ್ಭ ಜಿಲ್ಲೆಯ ಅಧಿಕಾರಿಗಳು ನಷ್ಟ ಸಮೀಕ್ಷೆಯ ವರದಿಯಲ್ಲಿ ಹಲವು ಗ್ರಾಮಗಳನ್ನು ಬಿಟ್ಟ ಬಗ್ಗೆ ಮತ್ತು ನಷ್ಟ ಪ್ರಮಾಣ ಕಡಿಮೆ ದಾಖಲಿಸಿದ ಬಗ್ಗೆ ಕೊಡಗು ಬೆಳೆಗಾರರ ಒಕ್ಕೂಟ ಆಕ್ಷೇಪಿಸಿ ಮರು ಸಮೀಕ್ಷೆಗೆ ಒತ್ತಾಯಿಸಿದ ಹಿನ್ನೆಲೆ ಸರಕಾರ ನಿಯೋಜಿಸಿದ್ದ ಮರು ಸಮೀಕ್ಷೆ ತಂಡದಲ್ಲಿ ಎಲ್. ಲಕ್ಷö್ಮಣ್ ಅವರು ಕೊಡಗಿನ ಹಲವು ಕಡೆ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿರುವ ಬಗ್ಗೆ ಅವರು ಈ ಸಂದರ್ಭ ನೆನಪಿಸಿದರು.
ಈ ಸಂದರ್ಭ ಕೊಡಗು ಬೆಳೆಗಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಶ್ರೀಮಂಗಲ ಹೋಬಳಿ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ, ಸದಸ್ಯ ಕಾಳಿಮಾಡ ಬೆಳ್ಯಪ್ಪ, ಮಾನಂದವಾಡಿ ಕಾಫಿ ಮಂಡಳಿಯ ಅಧಿಕಾರಿ ಟ್ಯೂನ ಹಾಜರಿದ್ದರು.