ಕೂಡಿಗೆ, ಜ. ೨೧: ರಾಜ್ಯದ ಪ್ರಥಮ ಕ್ರೀಡಾ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ೪೧ ಮಂದಿಗೆ ೧೦ ದಿನಗಳ ಕಾಲ ಗುರುತುಗಾರ ತರಬೇತಿ ಶಿಬಿರವು ಕೂಡಿಗೆ ಕ್ರೀಡಾ ಶಾಲಾ ಆವರಣದಲ್ಲಿ ನಡೆಯುತ್ತದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕೂಡಿಗೆ ಕ್ರೀಡಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕುಂತಿ ಬೋಪಯ್ಯ ನೆರವೇರಿಸಿದರು. ಕ್ರೀಡಾ ಇಲಾಖೆಯ ನಿಯಮಾನುಸಾರವಾಗಿ ಕ್ರೀಡಾ ಗುರುತುಗಾರರಿಗೆ ತರಬೇತಿಯನ್ನು ನೀಡುವುದರಿಂದ ಆಯಾ ಕ್ರೀಡೆಗಳ ನಿಯಮಗಳನ್ನು ತಿಳಿದು ಅದಕ್ಕೆ ಅನುಗುಣವಾಗಿ ಮೈದಾನದ ಸಿದ್ಧತೆ ಮತ್ತು ಮೈದಾನಕ್ಕೆ ಗುರುತು ಮಾಡುವ ವಿಷಯಗಳನ್ನು ಅರಿಯಲು ಅನುಕೂಲವಾಗುತ್ತದೆ ಎಂದರು. ಅಲ್ಲದೆ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುರುತುಗಾರರು ತಮ್ಮ ವೃತ್ತಿಯ ಮೂಲಕ ತರಬೇತಿಯನ್ನು ಪಡೆದು ಮುಖ್ಯವಾಹಿನಿಗೆ ಬರಲು ಇಲಾಖೆಯು ಇಂತಹ ಶಿಬಿರಗಳನ್ನು ಆಯೋಜಿಸಿದೆ ಎಂದು ತಿಳಿಸಿದರು.

ಈ ತರಬೇತಿ ಶಿಬಿರದಲ್ಲಿ ರಾಜ್ಯದ ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಕೊಪ್ಪಳ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಚಾಮರಾಜನಗರ ಸೇರಿದಂತೆ ಅನೇಕ ಜಿಲ್ಲೆಯ ೪೧ ಮಂದಿ ಭಾಗವಹಿಸಿದ್ದಾರೆ.

ಶಿಬಿರದಲ್ಲಿ ಅಥ್ಲೆಟಿಕ್ಸ್ ಹಾಕಿ ಬಾಸ್ಕೆಟ್ ಬಾಲ್ ಫುಟ್‌ಬಾಲ್ ಖೋ-ಖೋ, ಕಬಡ್ಡಿ ವಾಲಿಬಾಲ್ ಮೈದಾನ ಸಿದ್ಧತೆ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯನ್ನು ಹಾಸನ ಜಿಲ್ಲೆಯ ರಮೀಶ್, ಬಿಂದು, ಹಾವೇರಿ ರಾಮಲಿಂಗ ಕಬಡ್ಡಿಗೆ ತುಮಕೂರಿನ ಮೊಹಮ್ಮದ್ ಉತ್ತರ ಕನ್ನಡ, ಚಾಮರಾಜನಗರ ಸೇರಿದಂತೆ ಅನೇಕ ಜಿಲ್ಲೆಯ ೪೧ ಮಂದಿ ಭಾಗವಹಿಸಿದ್ದಾರೆ.

ಶಿಬಿರದಲ್ಲಿ ಅಥ್ಲೆಟಿಕ್ಸ್ ಹಾಕಿ ಬಾಸ್ಕೆಟ್ ಬಾಲ್ ಫುಟ್‌ಬಾಲ್ ಖೋ-ಖೋ, ಕಬಡ್ಡಿ ವಾಲಿಬಾಲ್ ಮೈದಾನ ಸಿದ್ಧತೆ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯನ್ನು ಹಾಸನ ಜಿಲ್ಲೆಯ ರಮೀಶ್, ಬಿಂದು, ಹಾವೇರಿ ರಾಮಲಿಂಗ ಕಬಡ್ಡಿಗೆ ತುಮಕೂರಿನ ಮೊಹಮ್ಮದ್ ಇಸ್ಮಾಯಿಲ್, ಮಂಡ್ಯದ ಬಾಬು ಗುರುರಾಜ್, ವಾಲಿಬಾಲ್ ವಿಷಯಕ್ಕೆ ಮಂಡ್ಯದ ಸೋಮಶೇಖರ್ ಇವರುಗಳು ತರಬೇತಿಯನ್ನು ನೀಡುತ್ತಿ ದ್ದಾರೆ. ಇದರ ಮೇಲುಸ್ತುವಾರಿ ಅಧಿಕಾರಿಯಾಗಿ ಕ್ರೀಡಾ ಶಾಲೆಯ ಮುಖ್ಯ ಶಿಕ್ಷಕಿ ಕುಂತಿ ಬೋಪಯ್ಯ ವಹಿಸಿದ್ದರು. ಶಿಬಿರಾಧಿಕಾರಿಯಾಗಿ ಬಿ.ಟಿ. ದೇವಕುಮಾರ್, ಅಂತೋಣಿ ಡಿಸೋಜ ಕಾರ್ಯ ನಿರ್ವಹಿಸುತ್ತಿದ್ದಾರೆ.