ಶನಿವಾರಸಂತೆ, ಜ. ೨೧: ಸ್ವಚ್ಛ ಭಾರತ್ ಯೋಜನೆಯಡಿ ಕೊಡಗು ಜಿಲ್ಲಾ ಪಂಚಾಯಿತಿಯಿAದ ಬಿಡುಗಡೆಯಾದ ಅನುದಾನದಿಂದ ಶನಿವಾರಸಂತೆ ಗ್ರಾಮ ಪಂಚಾಯಿತಿಯ ಮುಂಭಾಗ ಫಲಾನುಭವಿಗಳಿಗೆ ಒಣಕಸ ಸಂಗ್ರಹಕ್ಕಾಗಿ ಪ್ರತಿ ಮನೆಗಳಿಗೆ ೨ ಬಕೆಟ್‌ಗಳನ್ನು ವಿತರಿಸಲಾಯಿತು.

ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರುಗಳಾದ ಎಸ್.ಸಿ. ಶರತ್‌ಶೇಖರ್, ಎಸ್.ಎ. ಆದಿತ್ಯಗೌಡ, ಎಸ್.ಆರ್. ಮಧು, ಗೀತಾ ಹರೀಶ್, ಫರ್ಜಾನ ಶಾಹಿದ್‌ಖಾನ್ ಅವರುಗಳು ಫಲಾನುಭವಿಗಳಿಗೆ ಬಕೆಟ್‌ಗಳನ್ನು ವಿತರಣೆ ಮಾಡಿದರು

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಅವರು ಮಾತನಾಡುತ್ತ, ಫಲಾನುಭವಿಗಳು ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ ಗ್ರಾಮ ಪಂಚಾಯಿತಿಯಿAದ ಕಸ ಸಂಗ್ರಹಕ್ಕಾಗಿ ಬರುವ ಕಸ ಸಂಗ್ರಹ ವಾಹನಕ್ಕೆ ನೀಡಬೇಕು. ಶನಿವಾರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸವನ್ನು ಹಾಕದೆ ಕಸ ಸಂಗ್ರಹ ವಾಹನಕ್ಕೆ ಕಸ ವಿಂಗಡಿಸಿ ನೀಡುವುದರಿಂದ ಸ್ವಚ್ಛ ಗ್ರಾಮ ಪಂಚಾಯಿತಿ ಎಂಬ ಹೆಸರನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು

ಈ ಸಂದರ್ಭ ಗ್ರಾಮ ಕಾರ್ಯದರ್ಶಿ ತಮ್ಮಯಚಾರ್, ಲೆಕ್ಕಸಹಾಯಕ ವಂಸತ್, ಕಂಪ್ಯೂಟರ್ ನಿರ್ವಾಹಕಿಯಾದ ಫೌಜಿಯಾ, ಲೀಲಾ, ಸಿಬ್ಬಂದಿ ವರ್ಗ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

-ನರೇಶ್