ಭಾರತದ ಸ್ವಾತಂತ್ರö್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ ತಾ. ೨೩ (ಇಂದು). “ನೀವು ನನಗೆ ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರö್ಯ ಕೊಡುತ್ತೇನೆ” ಎಂದು ಸ್ವಾತಂತ್ರö್ಯಕ್ಕಾಗಿ ಪ್ರತಿಯೊಬ್ಬರು ಹೋರಾಡುವಂತೆ ಕರೆ ನೀಡಿದ ಮಹಾನ್ ವ್ಯಕ್ತಿ ಸುಬಾಷ್ ಚಂದ್ರ ಬೋಸ್. ಈ ಮಾತೇ ಅದೆಷ್ಟೋ ಜನತೆಗೆ ಸ್ಪೂರ್ತಿಯ ಸೆಲೆ. ದೇಶ ಪ್ರೇಮದ ಕಿಚ್ಚನ್ನು ಜಾಗೃತವಾಗಿಸಿದ ಕೂಗು.
ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಬೋಸ್ ಹೆಸರು ಭಾರತದ ಸ್ವಾತಂತ್ರö್ಯ ಹೋರಾಟದಲ್ಲಿ ಅತ್ಯಂತ ಅವಿಸ್ಮರಣೀಯ. ಎಂದಿಗೂ ಅಮರ. ಜನವರಿ ೨೩, ೧೮೯೭ ರಲ್ಲಿ ಒಡಿಶಾದ ಕಟಕ್‌ನಲ್ಲಿ ಜಾನಕೀನಾಥ, ಪ್ರಭಾವತಿ ದಂಪತಿಗಳ ಪುತ್ರನಾಗಿ ಜನಿಸಿದ ಇವರು ಸ್ವಾತಂತ್ರö್ಯದ ಹೋರಾಟದಲ್ಲಿ ಸದಾ ಅಜರಾಮರ. ಗಾಂಧೀಜಿ ಅವರು ಸ್ವಾತಂತ್ರö್ಯ ಪಡೆಯಲು ಅಹಿಂಸಾ ಮಾರ್ಗ ಅನುಸರಿಸಿದರೆ ಬೋಸ್ ಸಶಸ್ತç ಹಿಡಿದು ಸ್ವಾತಂತ್ರö್ಯ ಪಡೆಯಲು ಕರೆ ನೀಡಿದವರು. ಅದಕ್ಕೆಂದೇ ಭಾರತೀಯ ರಾಷ್ಟಿçÃಯ ಸೇನೆಯನ್ನು ಸಜ್ಜುಗೊಳಿಸಿದ ವ್ಯಕ್ತಿ ಬೋಸ್.
ಬಾಲ್ಯದಿಂದಲೂ ಓದಿನಲ್ಲಿ ಅತೀವ ಆಸಕ್ತಿ ಹೊಂದಿದ್ದ ಬಾಲಕ ಕ್ರಮೇಣ ಉನ್ನತ ಪದವಿಗಳನ್ನು ಸಂಪಾದಿಸಿದ್ದ. ವಿದೇಶಿ ನೌಕರಿ ಒಲ್ಲೆ ಎಂದು ಉತ್ತಮ ನೌಕರಿಯನ್ನು ತ್ಯಜಿಸಿ, ಸ್ವಾತಂತ್ರö್ಯ ಹೋರಾಟಕ್ಕೆ ಧುಮುಕಿದ್ದ ಯುವಕ. ಕ್ರಮೇಣ ರಾಷ್ಟç ನಿರ್ಮಾಣವನ್ನೇ ತನ್ನ ಗುರಿಯಾಗಿಸಿಕೊಂಡು ಸ್ವರಾಜ್ಯ ಹೋರಾಟಕ್ಕೆ ಬಲ ತುಂಬಿದರು. ಶೀಘ್ರ ಸ್ವಾತಂತ್ರö್ಯ ಪ್ರಾಪ್ತಿಗಾಗಿ ಹಂಬಲಿಸುತ್ತಿದ್ದ ಯುವ ಮನಸ್ಸು ಬೋಸ್‌ರದ್ದು. ಬೋಸ್‌ರ ನಿಲುವುಗಳನ್ನು ಸ್ವತಃ ಗಾಂಧೀಜಿಯವರೇ ಹಲವು ಬಾರಿ ಟೀಕಿಸಿದ್ದರು. ಆದರೂ ಬೋಸ್ ಮಾತ್ರ ಸ್ವಾತಂತ್ರö್ಯಕ್ಕಾಗಿ ಹಗಲಿರುಳೆನ್ನದೇ ತಂಡ ಕಟ್ಟಲು ಯತ್ನಿಸುತ್ತಲೇ ಇದ್ದರು.
ಈ ನಡುವೆ ಹಲವು ಚಳುವಳಿ, ಹೋರಾಟ ಸಂಘಟಿಸಿ ಜೈಲು ಪಾಲಾಗಿದ್ದೂ ಇದೆ. ಕೆಲವು ಮಹತ್ವದ ಹುದ್ದೆಗಳನ್ನು ವಹಿಸಿಕೊಂಡು ಆ ಮೂಲಕ ತಮ್ಮ ಸ್ವಾತಂತ್ರö್ಯ ಭಾರತದ ಕನಸನ್ನು ನನಸಾಗಿಸಲು ಹೋರಾಟ ಮಾಡಿದವರು ಬೋಸ್. ಹಲವು ದೇಶಗಳಿಗೆ ಭೇಟಿ ಮಾಡಿ ಭಾರತದ ಪರ ಪ್ರಚಾರ ಮಾಡಿದವರು. ಬ್ರಿಟಿಷರ ಆಡಳಿತದ ವಿರುದ್ಧ ಕ್ರಾಂತಿಕಾರಕ ಭಾಷಣ ಮಾಡುತ್ತಿದ್ದರು. ಕ್ರಮೇಣ ಕಾಂಗ್ರೆಸ್‌ನಿAದ ಹೊರಬಂದು ಚಿತ್ತರಂಜನ್ ದಾಸ್‌ರೊಂದಿಗೆ ಮುನ್ನಡೆದರು. ಈ ಅವಧಿಯಲ್ಲಿ ಪತ್ರಿಕೆಯನ್ನೂ ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ಬ್ರಿಟಿಷರ ದೇಶ ಒಡೆದು ಆಳುವ ನೀತಿಯ ಬಗ್ಗೆ ಪದೇ ಪದೇ ಜನತೆಯನ್ನು ಎಚ್ಚರಿಸುವ ಕಾರ್ಯ ಮಾಡಿ ಬ್ರಿಟಿಷರ ಕೆಂಗಣಿಗೆ ಗುರಿಯಾಗಿ ಜೈಲನ್ನು ಸೇರಿದ್ದರು. ಹೀಗೆ ಸ್ವಾತಂತ್ರö್ಯದ ದಿನಗಳ ಕನಸು ಕಾಣುತ್ತಲೇ ಅಜಾದ್ ಹಿಂದ್ ಸೇನೆ ರೂಪಿಸಿ ಮುಂದೆ ಅದನ್ನು ಐಎನ್‌ಎ ಆಗಿ ಬೆಳೆಸಿದರು.
ದೇಶ ವಿದೇಶದೆಲ್ಲೆಡೆ ಓಡಾಡಿ ಸ್ವಾತಂತ್ರö್ಯದ ಕನಸು ಕಾಣುತ್ತಲೇ ಇರುವಾಗ ೧೯೪೫ ಆಗಸ್ಟ್ ೧೮ ರಂದು ವಿಯೆಟ್ನಾಂನ ಸೈಗಾನ್‌ನಿಂದ ಬೋಸ್ ಹತ್ತಿದ ವಿಮಾನ ಸ್ಫೋಟಗೊಂಡು ನಿಧನರಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬುತ್ತದೆ. ಈ ಬಗ್ಗೆ ಅನೇಕ ವಾದ ವಿವಾದಗಳು ಇಂದಿಗೂ ಇದೆ. ಬೋಸ್ ವಿಮಾನ ಅಪಘಾತದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಜಪಾನ್ ಸರಕಾರ ವರದಿಯನ್ನು ಬಿಡುಗಡೆ ಮಾಡಿದೆ.
ಒಟ್ಟಾರೆ ನಾಡುಕಂಡ ಶ್ರೇಷ್ಠ ಹೋರಾಟಗಾರರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್‌ರು ಕೂಡ ಒಬ್ಬರು. ಇಂತಹ ನಾಯಕನ ಬದುಕಿನ ಮೆಲುಕೇ ಪ್ರತಿಯೊಬ್ಬರಿಗೂ ಸ್ಪೂರ್ತಿಯುತವಾಗಿರಬೇಕು.
ನೇತಾಜಿ ಅವರ ದೇಶಸೇವೆ ಹಾಗೂ ವಿರೋಚಿತ ಹೋರಾಟವನ್ನು ಗಮನಿಸಿ ಅವರ ಹುಟ್ಟುಹಬ್ಬವನ್ನು ಇನ್ನುಮುಂದೆ ಪರಾಕ್ರಮ ದಿವಸ್ ಎಂದು ಆಚರಿಸಲು ಕೇಂದ್ರ ಸರಕಾರ ತೀರ್ಮಾನ ಕೈಗೊಂಡಿದ್ದಾಗಿ ತಿಳಿಸಿದೆ.