(ವಿಶೇಷ ವರದಿ. ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜ. ೨೦: ಕಾಫಿ ತೋಟದಲ್ಲಿ ಕಾಫಿ ಹಣ್ಣುಗಳ ನಡುವೆ ಅರಳಿ ನಿಂತಿರುವ ಹೂವುಗಳು, ಮತ್ತೊಂದೆಡೆ ಉದುರುತ್ತಿರುವ ಕಾಫಿ ಹಣ್ಣುಗಳು, ಇದು ಕೊಡಗಿನ ಬಹುಭಾಗದ ಕಾಫಿ ತೋಟದಲ್ಲಿ ಕಂಡು ಬರುತ್ತಿರುವ ದೃಶ್ಯವಾಗಿದೆ. ಕೊಡಗಿನ ಜನತೆ ಮೇಲೆ ಸತತ ಮೂರು ವರ್ಷ ಗಳಿಂದ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿದ್ದು, ಇದೀಗ ಕಾಫಿ ಬೆಳೆಗಾರನ ಮೇಲೂ ಕೂಡ (ವಿಶೇಷ ವರದಿ. ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜ. ೨೦: ಕಾಫಿ ತೋಟದಲ್ಲಿ ಕಾಫಿ ಹಣ್ಣುಗಳ ನಡುವೆ ಅರಳಿ ನಿಂತಿರುವ ಹೂವುಗಳು, ಮತ್ತೊಂದೆಡೆ ಉದುರುತ್ತಿರುವ ಕಾಫಿ ಹಣ್ಣುಗಳು, ಇದು ಕೊಡಗಿನ ಬಹುಭಾಗದ ಕಾಫಿ ತೋಟದಲ್ಲಿ ಕಂಡು ಬರುತ್ತಿರುವ ದೃಶ್ಯವಾಗಿದೆ. ಕೊಡಗಿನ ಜನತೆ ಮೇಲೆ ಸತತ ಮೂರು ವರ್ಷ ಗಳಿಂದ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿದ್ದು, ಇದೀಗ ಕಾಫಿ ಬೆಳೆಗಾರನ ಮೇಲೂ ಕೂಡ ವಿಶೇಷವಾಗಿ ವಾರ್ಷಿಕ ಬೆಳೆ ಕಾಫಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರು, ಬೆಳೆಗಾರರ ಭವಿಷ್ಯ ಅತಂತ್ರಗೊAಡಿದೆ. ಕಳೆದ ಒಂದು ವಾರದಿಂದ ಪ್ರಕೃತಿಯಲ್ಲಾದ ಬದಲಾವಣೆಯಿಂದ ರೈತನ ಕೈಗೆ ಬಂದ ಬೆಳೆ ಬಾಯಿಗೆ ಬರ ದಂತಾಗಿದೆ. ಕಾಫಿಯನ್ನೇ ನಂಬಿ ತನ್ನ ಜೀವನ ಸಾಗಿಸುತ್ತಿದ್ದ ಅತಿ ಸಣ್ಣ ರೈತರ ಪರಿಸ್ಥಿತಿ ಹೇಳ ತೀರದಾಗಿದೆ. ಒಂದರ್ಥದಲ್ಲಿ ಪ್ರಕೃತಿ ಮುನಿಸಿ ನಿಂದಾಗಿ ರೈತ ಕಂಗಲಾಗಿದ್ದಾನೆ.

ಪ್ರಕೃತಿಯ ಬದಲಾವಣೆಯಿಂದ ವಿಶೇಷವಾಗಿ ವಾರ್ಷಿಕ ಬೆಳೆ ಕಾಫಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ರೈತರು, ಬೆಳೆಗಾರರ ಭವಿಷ್ಯ ಅತಂತ್ರಗೊAಡಿದೆ. ಕಳೆದ ಒಂದು ವಾರದಿಂದ ಪ್ರಕೃತಿಯಲ್ಲಾದ ಬದಲಾವಣೆಯಿಂದ ರೈತನ ಕೈಗೆ ಬಂದ ಬೆಳೆ ಬಾಯಿಗೆ ಬರ ದಂತಾಗಿದೆ. ಕಾಫಿಯನ್ನೇ ನಂಬಿ ತನ್ನ ಜೀವನ ಸಾಗಿಸುತ್ತಿದ್ದ ಅತಿ ಸಣ್ಣ ರೈತರ ಪರಿಸ್ಥಿತಿ ಹೇಳ ತೀರದಾಗಿದೆ. ಒಂದರ್ಥದಲ್ಲಿ ಪ್ರಕೃತಿ ಮುನಿಸಿ ನಿಂದಾಗಿ ರೈತ ಕಂಗಲಾಗಿದ್ದಾನೆ.

ಪ್ರಕೃತಿಯ ಬದಲಾವಣೆಯಿಂದ ಒಣಗದೆ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ತೋಟದಲ್ಲಿರುವ ಕಾಫಿಗಳು ಉದುರಲಾರಂಭಿಸಿವೆ. ಕಾರ್ಮಿಕರ ಸಮಸ್ಯೆಯಿಂದಾಗಿ ಕಾಫಿ ಕುಯ್ಯಲು ಸಾಧ್ಯವಾಗುತ್ತಿಲ್ಲ. ಅನುಭವವಿಲ್ಲದ ಕಾರ್ಮಿಕರು ಕಾಫಿ ಹಣ್ಣಿನೊಂದಿಗೆ ಬಿಟ್ಟಿರುವ ಹೂವುಗಳ ಸಹಿತ ಕಾಫಿಯನ್ನು ಕುಯ್ದು ಮುಂದಿನ ಫಸಲಿಗೆ ಸಂಚಕಾರ ತಂದಿದ್ದಾರೆ. ಇತ್ತ ರೈತ ಈ ಬೆಳೆ ಯನ್ನೇ ನಂಬಿಕೊAಡು ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದಾನೆ. ಈ ಸಾಲವನ್ನು ಈ ಬಾರಿ ತೀರಿಸ ಲಾರದ ಪರಿಸ್ಥಿತಿಗೆ ತಂದೊಡ್ಡಿದೆ. ಅಲ್ಪಸ್ವಲ್ವ ಉಳಿದಿರುವ ಕಾಫಿಯನ್ನು ಮಾರಾಟ ಮಾಡಲು ತೆರಳಿದರೆ, ಅಲ್ಲಿಯೂ ಕೂಡ ರೈತನಿಗೆ ಸರಿಯಾದ ಬೆಲೆ ಸಿಗದೆ ತೊಂದರೆಗೆ ಸಿಲುಕಿದ್ದಾನೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಬಾರಿಯ ಪ್ರಕೃತಿಯಲ್ಲಾದ ಬದಲಾವಣೆಯಿಂದ ಸುರಿಯುತ್ತಿರುವ ಅಕಾಲಿಕ ಮಳೆ ಕಾಫಿ ಬೆಳೆಗಾರನಿಗೆ, ರೈತನಿಗೆ ಕಂಟಕವಾಗಿ ಪರಿಣಮಿಸಿದೆ. ಪ್ರಕೃತಿ ವಿಕೋಪ, ಅತಿವೃಷ್ಟಿಯಿಂದ ಕಂಗಾ ಲಾಗಿದ್ದ ರೈತ ಈಗಿನ ಅಕಾಲಿಕ ಮಳೆಯಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ರೈತನ ಸಹಾಯಕ್ಕೆ ಸರ್ಕಾರ ಹಾಗೂ ಕಾಫಿ ಮಂಡಳಿ ಧಾವಿಸಿ ರೈತನ ಕಷ್ಟದಲ್ಲಿ ಭಾಗಿಯಾಗಬೇಕಾಗಿದೆ.