ಮಡಿಕೇರಿ, ಜ. ೨೦: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಡಿಕೇರಿ ತಾಲೂಕು ೨ನೇ ಮೊಣ್ಣಂಗೇರಿ ಗ್ರಾಮದ ಎ.ಬಿ. ಮಾಧವ ಅವರ ಮನೆಯಲ್ಲಿ ವಿಶೇಷ ಘಟಕ ಯೋಜನೆಯಡಿ ಮಾಧವ ಅವರ ನಿರ್ದೇಶನದಲ್ಲಿ ಕೃಷ್ಣ ಲೀಲೆ ಯಕ್ಷಗಾನ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ಹೆಚ್.ಬಿ. ಕಾರ್ಯಪ್ಪ ಉದ್ಘಾಟಿಸಿ ಶುಭ ಕೋರಿದರು. ಕೆ. ಮಹಾಭಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಎ.ಕೆ. ಗಣಪತಿ ಸ್ವಾಗತಿಸಿ, ನಿರೂಪಿಸಿದರು. ಎ.ಬಿ. ಮನೋಹರ್ ವಂದಿಸಿದರು. ಮಾಧವ ಶಕಟಾಸುರನಾಗಿ ಅದ್ಭುತವಾಗಿ ಪಾತ್ರ ನಿರ್ವಹಿಸಿದರು.

ಕಂಸವಧೆ ಯಕ್ಷಗಾನ ಪ್ರದರ್ಶನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಡಿಕೇರಿ ತಾಲೂಕು ಚೆಂಬು ಗ್ರಾಮದ ಆನ್ಯಾಳ ಸಮುದಾಯ ಭವನದಲ್ಲಿ ವಿಶೇಷ ಘಟಕ ಯೋಜನೆಯಡಿ ಬಿ. ಕೃಷ್ಣಪ್ಪ ಅವರ ನೇತೃತ್ವದಲ್ಲಿ ಶ್ರೀ ಓಂಕಾರೇಶ್ವರ ಪ್ರವಾಸಿ ಯಕ್ಷಗಾನ ಕಲಾತಂಡ ಇವರಿಂದ ಕಂಸವಧೆ ಯಕ್ಷಗಾನ ಪ್ರದರ್ಶನ ನಡೆಯಿತು. ಕಾರ್ಯಕ್ರಮವನ್ನು ದೇವಕಿ ಉದ್ಘಾಟಿಸಿದರು. ಅಜಿಲ ಯಾನೆ ನಲಿಕೆ ಸೇವಾ ಸಮಿತಿ ಉಪಾಧ್ಯಕ್ಷ ಬಿ. ಚಂದಪ್ಪ ಅವರು ವಹಿಸಿದ್ದರು. ಬಿ. ಕೃಷ್ಣಪ್ಪ ಸ್ವಾಗತಿಸಿ, ನಿರೂಪಿಸಿದರು. ಎ.ಕೆ. ಶೃತಿ ವಂದಿಸಿದರು.