ಶ್ರೀಮಂಗಲ, ಜ. ೨೦: ನೂತನ ಪೊನ್ನಂಪೇಟೆ ತಾಲೂಕಿನ ಹುದಿಕೇರಿ, ಬಾಳೆಲೆ, ಶ್ರೀಮಂಗಲ ಮತ್ತು ಪೊನ್ನಂಪೇಟೆ ಈ ನಾಲ್ಕು ಹೋಬಳಿಯ ನಾಗರೀಕರು ತಾಲೂಕು ಕಚೇರಿಯ ಯಾವುದೇ ಕೆÀಲಸಕ್ಕೆ ಇನ್ನು ಮುಂದೆ ವೀರಾಜಪೇಟೆಗೆ ಬರುವ ಅಗತ್ಯವಿಲ್ಲ. ವಾರದ ಸೋಮವಾರ, ಬುಧವಾರ ಮತ್ತು ಶುಕ್ರವಾರ ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ತಹಶೀಲ್ದಾರರು ಉಪಸ್ಥಿತರಿರುತ್ತಾರೆ. ಅಲ್ಲಿ ತಮ್ಮ ಕೆಲಸ ಕಾರ್ಯ ಹಾಗೂ ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದೆAದು ವೀರಾಜಪೇಟೆ ತಾಲೂಕು ತಹಶೀಲ್ದಾರರಾಗಿರುವ ಮತ್ತು ನೂತನ ಪೊನ್ನಂಪೇಟೆ ತಾಲೂಕಿನ ಹೆಚ್ಚುವರಿ ಉಸ್ತುವಾರಿ ತಹಶೀಲ್ದಾರರಾಗಿರುವ ಯೋಗಾನಂದ್ ಕಚೇರಿಯಲ್ಲಿ ತಹಶೀಲ್ದಾರರು ಉಪಸ್ಥಿತರಿರುತ್ತಾರೆ. ಅಲ್ಲಿ ತಮ್ಮ ಕೆಲಸ ಕಾರ್ಯ ಹಾಗೂ ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದೆAದು ವೀರಾಜಪೇಟೆ ತಾಲೂಕು ತಹಶೀಲ್ದಾರರಾಗಿರುವ ಮತ್ತು ನೂತನ ಪೊನ್ನಂಪೇಟೆ ತಾಲೂಕಿನ ಹೆಚ್ಚುವರಿ ಉಸ್ತುವಾರಿ ತಹಶೀಲ್ದಾರರಾಗಿರುವ ಯೋಗಾನಂದ್ ಗುರುತಿನ ಚೀಟಿ, ಪಡಿತರ ಚೀಟಿಗಳು ಕಾಣೆಯಾಗುತ್ತಿದ್ದು, ಹೊಸದಾಗಿ ಚೀಟಿ ಮಾಡಲು ಹೆಚ್ಚಿನ ಅರ್ಜಿಗಳು ಬರುತ್ತಿದೆ. ಇದನ್ನು ತಡೆಗಟ್ಟಲು ಇನ್ನು ಮುಂದೆ ಲೈನ್ ಮನೆಗಳಲ್ಲಿ ವಾಸವಿರುವ ಕಾರ್ಮಿಕರಿಗೆ ಆಯಾ ಮಾಲೀಕರ ವಿಳಾಸ ಸಹಿತ ಗುರುತಿನ ಚೀಟಿಯಲ್ಲಿ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಕಂದಾಯ ಇಲಾಖೆಯಿಂದ ಸರ್ವೆ ಇಲಾಖೆ ಪ್ರತ್ಯೇಕಗೊಂಡಿದ್ದು, ಸರ್ವೆ ಇಲಾಖೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸರ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಪರಿಹರಿಸುವ ಭರವಸೆ ನೀಡಿದರು.
ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿಯ ಸದಸ್ಯರುಗಳಾದ ಮಾಪಂಗಡ ಯಮುನಾ ಚಂಗಪ್ಪ, ಹೆಚ್.ಕೆ. ದಿನೇಶ್, ತೀತಿಮಾಡ ಲಾಲ ಭೀಮಯ್ಯ, ಶ್ರೀಮಂಗಲ ಹೋಬಳಿ ಉಪತಹಶೀಲ್ದಾರ್ ಅಕ್ಕಮ್ಮ, ಶ್ರೀಮಂಗಲ ಕಂದಾಯ ಪರಿವೀಕ್ಷಕ ಸುದೀಂದ್ರಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ದೇವಯ್ಯ, ಪ್ರಶಾಂತ್, ಪೂಣಚ್ಚ, ಬಸವನಗೌಡ, ಹುದಿಕೇರಿ ಹೋಬಳಿ ಕಂದಾಯ ಪರಿವೀಕ್ಷಕ ನಿಶಾನ್, ಗ್ರಾಮ ಲೆಕ್ಕಾಧಿಕಾರಿಗಳಾದ ಜಿ.ಕೆ. ನಿತಿನ್, ಸಂತೋಷ್, ಆಶಾ ಹಾಜರಿದ್ದರು.